ಬುಧವಾರ, ಜೂನ್ 16, 2021
25 °C

‘ಕುಯುಕ್ತಿಗಳಿಗೆ ಚುನಾವಣೆಯಿಂದ ತಕ್ಕ ಪಾಠ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಕೇವಲ ಅಧಿಕಾರಕ್ಕಾಗಿ ಹಾತೊರೆ ಯುವ ಕುಯುಕ್ತಿಗಳಿಗೆ ಈ ಬಾರಿಯ ಚುನಾವಣೆ ತಕ್ಕ ಪಾಠ ಕಲಿಸಲಿದೆ ಎಂದು ಮಾಜಿ ಸಂಸದ ಧನಂಜಯ್‌ ಕುಮಾರ್‌ ತಿಳಿಸಿದರು.ಕೆಜೆಪಿ ಪಕ್ಷದಿಂದ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದ ನಂತರ ಭಾನುವಾರ ಮೊದಲ ಬಾರಿಗೆ ತಾಲ್ಲೂಕಿಗೆ ಬಂದ ವೇಳೆ ಅವರು ಮಾತನಾಡಿದರು. ರಾಜಕೀಯವಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ರೂಪಿಸಿದ್ದು, ಸಂಸದ ಅನಂತ್‌ಕುಮಾರ್‌ ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್‌ ನನ್ನನ್ನು ಮೂಲೆಗುಂಪು ಮಾಡಲು ಕಾರಣಕರ್ತರಾದರು ಎಂದು ನೇರ ಆರೋಪ ಮಾಡಿದರು. ಕೆಜೆಪಿಯ ಶೇ 90 ರಷ್ಟು ಕಾರ್ಯಕರ್ತರು ಅತಂತ್ರ ಸ್ಥಿತಿಯಲ್ಲಿದ್ದು, ಇಂತಹ ಸ್ಥಿತಿಗೆ ಕಾರಣರಾದ ಕುಯುಕ್ತಿಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.25 ವರ್ಷಗಳಿಂದಲೂ ನೆರೆಯ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳು ಕೇಂದ್ರದಿಂದ ಅನುದಾನ ಪಡೆದಷ್ಟು, ಕರ್ನಾಟಕ ಇಂದಿಗೂ ಪಡೆದಿಲ್ಲ. ಅಲ್ಲದೇ ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ಕೃಷ್ಣ, ಕಾವೇರಿ ನೀರು ಹಂಚಿಕೆ ಸಮಸ್ಯೆ, ಕೃಷಿ ಸಮಸ್ಯೆ, ಗಡಿ ಸಮಸ್ಯೆ, ಭಾಷಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಈ ನಿಟ್ಟಿನಲ್ಲಿಯೇ ಕೆಜೆಪಿ ಪಕ್ಷವನ್ನು ಕಟ್ಟಲಾಗಿತ್ತು. ಅಲ್ಲಿನ ಬಳವಣಿಗೆಗಳ ಬಗ್ಗೆ ರಾಜ್ಯದ ಜನತೆ ಗಮನಿಸಿದ್ದು, ಈ ಚುನಾವಣೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.ಪ್ರಾದೇಶಿಕ ಪಕ್ಷಗಳಿಂದಲೇ ರಾಜ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂಬ ನಿಲುವಿಗೆ ಇಂದಿಗೂ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆ ಗೊಳ್ಳಲಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದ ಹಗಲು ಗನಸು ಕಾಣು ತ್ತಿದ್ದು, ದೇಶದಲ್ಲಿ ತೃತೀಯ ರಂಗವೇ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದರು.ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಕಾಫಿ ಬೆಳೆ ನೆಲ ಕಚ್ಚಿದ್ದರೂ ಸರ್ಕಾರಗಳು ಬೆಳೆಗಾರರ ನೆರ ವಿಗೆ ಬಂದಿಲ್ಲ, ಕೃಷಿಯನ್ನು ಸಂಪೂರ್ಣ ಕಡೆಗ ಣಿಸಿದ್ದು ರೈತರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಕೇಂದ್ರದ ಮಲತಾಯಿ ಧೋರಣೆ ಮತ್ತು ಜೆಡಿಎಸ್‌ ಪಕ್ಷ ಆಡಳಿತದ ಅವಧಿಯಲ್ಲಿ ನೀಡಿದ ದಕ್ಷ ಆಡಳಿತವನ್ನು ಮತದಾರರ ಮುಂದಿಟ್ಟು ಚುನಾವಣೆಯನ್ನು ಎದುರಿಸುತ್ತೇವೆ ಎಂದರು. ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಬಲವಾಗದೆ. ಮತದಾರರಿಗೆ ತೃತೀಯ ರಂಗದತ್ತ ಒಲವು ಮೂಡಿದ್ದು, ಚುನಾವಣೆಯಲ್ಲಿ ಜೆಡಿಎಸ್‌ ಗೆಲವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಜೆಡಿಎಸ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ರಂಜನ್‌ ಅಜಿತ್‌ ಕುಮಾರ್‌, ಪದಾಧಿಕಾರಿಗಳಾದ ದೇವರಾಜು, ಬಿದರಹಳ್ಳಿ ಲೋಹಿತ್‌, ಗುತ್ತಿ ಜಗದೀಶ್‌, ಅರುಣ್‌, ಗೀತಾ, ಅಂಜಲಿ,  ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.