ಭಾನುವಾರ, ಜೂನ್ 20, 2021
28 °C

‘ಕೃಷಿಯಲ್ಲಿ ಉದ್ಯಮ ಸೂತ್ರ ಅಳವಡಿಕೆ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಆಗಬೇಕಿದೆ. ಜೊತೆಗೆ ಆಹಾರ ಪದಾರ್ಥಗಳು ವ್ಯರ್ಥ ಆಗುವುದನ್ನು ತಡೆಗಟ್ಟಬೇಕು. ಗ್ರಾಹಕರಿಗೆ ಬೆಳೆಗಾರರು ಇನ್ನಷ್ಟು ಹತ್ತಿರವಾಗಲು ವಿತರಣಾ ಸರಪಳಿ ಸಮರ್ಪಕ ನಿರ್ವಹಣೆ ಆಗ ಬೇಕು’ ಎಂದು ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಡಾ.ಜಿ.ಕೆ.ವಸಂತ ಕುಮಾರ್‌ ತಿಳಿಸಿದರು.ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋ ಚಾಮ್‌) ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ನಡೆದ ‘ಶೀತಲೀಕರಣದ ಸರಪಳಿ ಅಭಿ ವೃದ್ಧಿ–ಪ್ರವೃತ್ತಿ ಹಾಗೂ ಸವಾಲು’ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಕೃಷಿ ಚಟುವಟಿಕೆಗಾಗಿ ನಾವು ಈಗಾಗಲೇ ನೈಸರ್ಗಿಕ ಸಂಪನ್ಮೂಲವನ್ನು ಅಧಿಕ ಪ್ರಮಾಣದಲ್ಲಿ ಬಳಸಿದ್ದೇವೆ. ನಿಯಮಿತ ಪ್ರದೇಶದಲ್ಲಿ ಕಡಿಮೆ ನೀರು ಬಳಸಿ ಅಧಿಕ ಇಳುವರಿ ಪಡೆಯುವತ್ತ ಗಮನ ಹರಿಸಬೇಕು. ಕೃಷಿ ಉತ್ಪನ್ನಗಳು ಹಾಳಾಗದಂತೆ ಶೀತಲೀಕರಣ ಮಾಡುವ ಬಗ್ಗೆ ಗಮನ ಹರಿಸಬೇಕು. ಕೃಷಿಯಲ್ಲಿ ಉದ್ಯಮದ ಸೂತ್ರವನ್ನು ಅಳವಡಿಸಿ ಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.ಅಸೋಚಾಮ್‌ ದಕ್ಷಿಣ ವಲಯ ಪರಿಷತ್‌ ಸಹ ಮುಖ್ಯಸ್ಥ ಜೆ.ಕ್ರಾಸ್ತಾ ಮಾತನಾಡಿ, ‘ಈಗ ಕೃಷಿ ಕ್ಷೇತ್ರದ ಚಿತ್ರಣ ಬದಲಾಗಿದೆ. ಲಕ್ಷಾಂತರ ರೂಪಾಯಿ ಲಾಭ ಪಡೆಯುವ ಇದ್ದಾರೆ. ಆಧುನಿಕ ತಂತ್ರಜ್ಞಾನದ ನೆರವು ಪಡೆದು ಕೃಷಿ ಯನ್ನು ಲಾಭದಾಯಕ ಮಾಡಿಕೊಳ್ಳ ಬೇಕಿದೆ’ ಎಂದು ಅವರು ಹೇಳಿದರು.ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಸಂಸ್ಕರಣಾ ಮಿಷ ನ್‌ನ ಸಲಹೆ ಗಾರರಾದ ಡಾ.ಬಿ.ಎಂ. ಲೀಲಾವತಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.