ಸೋಮವಾರ, ಜನವರಿ 20, 2020
20 °C

‘ಕೈ’ ಬಲಕ್ಕೆ ರಾಜೀನಾಮೆ: ಜಯಂತಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆಗಾಗಿ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಉದ್ದೇಶದಿಂದಲೇ ರಾಜೀನಾಮೆ ನೀಡಿದ್ಧಾಗಿ ಜಯಂತಿ ನಟರಾಜನ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಯೋಜನೆಗಳಿಗೆ ಪರಿಸರ ಅನುಮತಿ ತಡೆಹಿಡಿದಿದ್ದ ಪರಿಸರ ಸಚಿವಾಲಯದ ಬಗ್ಗೆ ಉದ್ಯಮ ವಲಯದಿಂದ ದೂರುಗಳು ಇದ್ದವು. ಈ ಕಾರಣಕ್ಕಾಗಿ ಜಯಂತಿ ಅವರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ ಎಂಬುದನ್ನು ಅವರು ಅಲ್ಲಗಳೆದಿದ್ದಾರೆ. 

ಯಾವುದೇ ಯೋಜನೆಗಳನ್ನು ತಡೆಹಿಡಿದಿರಲಿಲ್ಲ. ಪಕ್ಷ ಸಂಘಟನೆ ಉದ್ದೇಶದಿಂದಲೇ ರಾಜೀನಾಮೆ ನೀಡಿದ್ದೇನೆ. ನನ್ನ ಕೆಲಸಗಳನ್ನು ಪ್ರಧಾನ ಮಂತ್ರಿ ಮೆಚ್ಚಿಕೊಂಡಿದ್ದಾರೆ ಎಂದಿದ್ದಾರೆ. 

 

ಪ್ರತಿಕ್ರಿಯಿಸಿ (+)