ಶುಕ್ರವಾರ, ಮಾರ್ಚ್ 5, 2021
17 °C
ಸರ್ವಾನಂದ ಸೋನೊವಾಲ್‌ ಭರವಸೆ

‘ಕ್ರೀಡಾ ಸಚಿವಾಲಯದ ಮಹತ್ವ ಹೆಚ್ಚಿಸುವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕ್ರೀಡಾ ಸಚಿವಾಲಯದ ಮಹತ್ವ ಹೆಚ್ಚಿಸುವೆ’

ನವದೆಹಲಿ (ಪಿಟಿಐ): ಕ್ರೀಡಾ ಸಚಿವಾಲಯದ ಮಹತ್ವವನ್ನು ಸಾರುವ ಮೂಲಕ ಗೋಚರ ಶಕ್ತಿಯ ನ್ನಾಗಿ ರೂಪಿಸಲು ಶ್ರಮಿಸುವುದಾಗಿ ನೂತನ ಕ್ರೀಡಾ ಸಚಿವ ಸರ್ವಾನಂದ ಸೋನೊವಾಲ್‌ ಭರವಸೆ ನೀಡಿದರು.ಮಂಗಳವಾರ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕ್ರೀಡಾ ಸಚಿವನಾಗಿ ಇಂದು ನನ್ನ ಮೊದಲ ದಿನ. ನನಗೆ ಮಾಧ್ಯಮ ಹಾಗೂ ದೇಶದ ಜನರ ಬೆಂಬಲ ಬೇಕು. ತಜ್ಞರು ಹಾಗೂ ಕ್ರೀಡಾ ಪರಿಣತರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುವೆ’ ಎಂದರು.‘ದೇಶದಿಂದ ಉತ್ತಮ ಕ್ರೀಡಾಪಟು ಗಳು ಹೊರಹೊಮ್ಮ ಬೇಕು. ಏನು ಮಾಡಬೇಕು ಎಂಬುದರ ರೂಪುರೇಷೆಗಳ ಬಗ್ಗೆ ಮತ್ತೊಂದು ದಿನ ಮಾಧ್ಯಮದ ಎದುರು ವಿವರಿಸುತ್ತೇನೆ. ಅದಕ್ಕೂ ಮೊದಲು ನಾನು ಕ್ರೀಡಾ ಪರಿಣತರು ಹಾಗೂ ಕ್ರೀಡಾಪಟುಗಳೊಂದಿಗೆ ಸಮಾ ಲೋಚನೆ ನಡೆಸಬೇಕು. ಆಗ ನನ್ನ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸಲು ಸಾಧ್ಯವಾಗುತ್ತದೆ’ ಎಂದು ಅವರು ತಿಳಿಸಿದರು.ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಭೇಟಿಯಿಂದಾಗಿ ಉಭಯ ದೇಶಗಳ ಕ್ರೀಡಾ ಬಾಂಧವ್ಯ ವೃದ್ಧಿಯಾಗುವುದೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು. ‘ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದಕ್ಕೆ ನಮ್ಮ ಆದ್ಯತೆ ಇದ್ದೇ ಇದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.