ಹಾನಗಲ್: ಲೋಕಸಭೆ ಚುನಾವಣೆಯ ಲೆಕ್ಕಪತ್ರ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೇಮಕಗೊಂಡ ಅಧಿಕಾರಿಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿವಿಧ ತಂಡಗಳ ಅಧಿಕಾರಿಗಳ ಸಭೆಯು ಹಾವೇರಿ ಲೋಕಸಭಾ ಕ್ಷೇತ್ರದ ಲೆಕ್ಕವೀಕ್ಷಕ ವಸಂತ ಗೇಸನ್ ನೇತೃತ್ವದಲ್ಲಿ ಗುರುವಾರ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.

ರಾಜಕೀಯ ಸಭೆ, ಸಮಾರಂಭಗಳು ನಡೆದಾಗ ಅವುಗಳ ಸಂಪೂರ್ಣ ವೆಚ್ಚವನ್ನು ದಾಖಲಿಸುವ ಕುರಿತು ನಿಯೋಜನೆಗೊಂಡ ಅಧಿಕಾರಿಗಳು ಗಂಭೀರವಾಗಿ ಕಾರ್ಯ ನಿರ್ವಹಿಸಬೇಕು. ವೆಚ್ಚಗಳ ಕುರಿತಾಗಿ ಮಾಹಿತಿ, ಸಮಸ್ಯೆಗಳು ಏರ್ಪಟ್ಟಲ್ಲಿ ಸಂಪರ್ಕಿಸಲು (9481256128) ತಿಳಿಸಿದ ಅವರು, ವಸತಿನಿಲಯ, ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಸ್ವೀಪ್ ಉದ್ದೇಶ ಸಾಧಿಸಲು ಸಲಹೆ ನೀಡಿದರು.

ತಾಲ್ಲೂಕು ಚುನಾವಣಾಧಿಕಾರಿ ಗಣೇಶ ನಾಯ್ಕ (7259005473), ಚುನಾವಣಾ ವೆಚ್ಚದ ತಾಲ್ಲೂಕು ವೀಕ್ಷಕ ಎಚ್.ವೈ.ಮಿಸೆ (9986126356), ತಹಶೀಲ್ದಾರ್ ಆರ್.ಸಿ.ನದಾಫ, ಅಧಿಕಾರಿಗಳಾದ ಬಿ.ವೈ.ಬಂಡಿ ವಡ್ಡರ, ಎಂ.ವಿ.ಬಳಿಗಾರ, ಎಂ.ಎಸ್. ಸೋಮಶೇಖರ, ಬಿ.ಕೆ.ಅಕ್ಕೂರ, ಎಸ್.ಪಿ. ದಂದೂರ, ವಿ.ದೇವರಾಜ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.