ಗುರುವಾರ , ಜನವರಿ 23, 2020
27 °C
ಪಂಚರಂಗಿ

‘ಜೈ ಹೋ’ ಜೆನಿಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಮಾಸ್‌ ಮಹಾರಾಜಾ ಸಲ್ಮಾನ್‌ಖಾನ್‌ ಅಭಿನಯದ ‘ಜೈ ಹೋ’ ಚಿತ್ರದಲ್ಲಿ ನಟಿ ಜೆನಿಲಿಯಾ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ನಟ ರಿತೇಶ್‌ ದೇಶ್‌ಮುಖ್‌ ಅವರನ್ನು ಮದುವೆಯಾದ ನಂತರ ಜೆನ್ನಿ ಈವರೆಗೂ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ದಾಂಪತ್ಯಕ್ಕೆ ಕಾಲಿಟ್ಟ ನಂತರ ಇದೇ ಮೊದಲ ಬಾರಿಗೆ ಅವರು ಸಲ್ಮಾನ್‌ ಅಭಿನಯದ ಚಿತ್ರದಲ್ಲಿ ಒಂದು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಂದಹಾಗೆ, 2012ರ ಫೆಬ್ರುವರಿಯಲ್ಲಿ ರಿತೇಶ್‌ ಅವರನ್ನು ಮದುವೆಯಾಗಿದ್ದ ಜೆನ್ನಿ, ‘ತೇರೆ ನಾಲ್‌ ಲವ್‌ ಹೋ ಗಯಾ’ ಹಿಂದಿ ಚಿತ್ರದಲ್ಲಿ ನಟಿಸಿದ್ದರು. ಇದೇ ಅವರ ಅಭಿನಯಿಸಿದ ಕೊನೆಯ ಚಿತ್ರವಾಗಿತ್ತು.‘‘ಹೌದು, ‘ಜೈ ಹೋ’ ಸಿನಿಮಾದಲ್ಲಿ ಜೆನಿಲಿಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕ ಪಾತ್ರವಾದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರವನ್ನು ಜೆನ್ನಿ ನಿರ್ವಹಿಸಿದ್ದಾರೆ’ ಎನ್ನುತ್ತಿದೆ ಮೂಲಗಳು. ಆದರೆ, ‘ಜೈ ಹೋ’ ಚಿತ್ರದಲ್ಲಿ ಜೆನಿಲಿಯಾ ಯಾವ ಬಗೆಯ ಪಾತ್ರ ನಿರ್ವಹಿಸುತ್ತಾರೆ ಎಂಬ ಗುಟ್ಟು ಮಾತ್ರ ಇದುವರೆಗೂ ರಟ್ಟಾಗಿಲ್ಲ.ಈ ಚಿತ್ರದಲ್ಲಿ ಜೆನಿಲಿಯಾ ಅವರು ನಟ ಸಲ್ಮಾನ್‌ ಖಾನ್‌ ಅವರ ತಂಗಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಗಾಳಿಸುದ್ದಿ ಈಗಾಗಲೇ ಎಲ್ಲೆಡೆ ಹಬ್ಬಿದೆ.ಹಿಂದಿಯಲ್ಲಿ ಮೂಡಿಬರುತ್ತಿರುವ ‘ಜೈ ಹೋ’ ಚಿತ್ರ ದಕ್ಷಿಣದಲ್ಲಿ ಸೂಪರ್‌ಹಿಟ್‌ ಆಗಿದ್ದ ‘ಸ್ಟಾಲಿನ್‌’ ಸಿನಿಮಾದ ರಿಮೇಕ್‌. ಈ ಚಿತ್ರವನ್ನು ಸಲ್ಮಾನ್‌ ಸಹೋದರ ಸೊಹೇಲ್‌ ಖಾನ್‌ ನಿರ್ದೇಶನ ಮಾಡುತ್ತಿದ್ದಾರೆ. ಟಬು, ಸನಾ ಖಾನ್‌, ಅಶ್ಮಿತ್‌ ಪಟೇಲ್‌, ಸುನೀಲ್‌ ಶೆಟ್ಟಿ ಮತ್ತಿತರರು ತಾರಾಗಣದಲ್ಲಿರುವ ‘ಜೈ ಹೋ’ ಚಿತ್ರ ಜನವರಿ 24ರಂದು ತೆರೆಗೆ ಬರಲಿದೆ.

ಪ್ರತಿಕ್ರಿಯಿಸಿ (+)