ಶನಿವಾರ, ಜನವರಿ 25, 2020
29 °C
ಮಾನಹಾನಿ ಮೊಕದ್ದಮೆ

‘ತಪ್ಪಿತಸ್ಥ’ ಪತ್ರಕರ್ತರಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎ.ಹರೀಶ್‌ ಗೌಡ ವಿರುದ್ಧ ಮಾನಹಾನಿ ವರದಿ ಪ್ರಕಟಿಸಿದ್ದ ಆರೋ ಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಂಕೇಶ್‌ ಪತ್ರಿಕೆಯ ವರದಿಗಾರರಾಗಿದ್ದ ಗಂಗಾಧರ ಕುಷ್ಟಗಿ, ರವೀಂದ್ರ ರೇಷ್ಮೆ ಮತ್ತು ಟಿ.ಕೆ.ತ್ಯಾಗರಾಜ್‌ ತಪ್ಪಿತಸ್ಥರು ಎಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಊರ್ಜಿತಗೊಳಿಸಿದೆ.ಹರೀಶ್‌ ಗೌಡ ಅವರು 1998ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದರು. ಆ ಸಂದರ್ಭದಲ್ಲಿ ಲಂಕೇಶ್‌ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯಿಂದ ತಮ್ಮ ಮಾನಹಾ ನಿಯಾಗಿದೆ ಎಂದು ದೂರಿ ಮೊಕದ್ದಮೆ ದಾಖಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನಗರದ ಎರಡನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 2001ರಲ್ಲಿ ಆದೇಶ ಪ್ರಕಟಿಸಿತ್ತು. ರಾಘವೇಂದ್ರ ಕುಷ್ಟಗಿ, ರವೀಂದ್ರ ರೇಷ್ಮೆ ಮತ್ತು ಟಿ.ಕೆ. ತ್ಯಾಗರಾಜ್‌ ತಪ್ಪಿತಸ್ಥರು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು. ನಗರದ ನಾಲ್ಕನೇ ತ್ವರಿತ ನ್ಯಾಯಾ ಲಯವೂ ಮೂವರೂ ತಪ್ಪಿತಸ್ಥರು ಎಂದು 2004ರಲ್ಲಿ ಆದೇಶ ನೀಡಿತ್ತು.ಎರಡೂ ನ್ಯಾಯಾಲಯಗಳ ಆದೇಶ ವನ್ನು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಅವರಿದ್ದ ಏಕಸದಸ್ಯ ಪೀಠ ಕಾಯಂಗೊಳಿಸಿದೆ.ವಿಚಾರಣಾ ನ್ಯಾಯಾಲಯಗಳು ನೀಡಿದ್ದ ಆದೇಶಗಳನ್ನು ರದ್ದು ಮಾಡ ಬೇಕೆಂಬ ಮೂವರು ಪತ್ರಕರ್ತರ ಕೋರಿಕೆಯನ್ನು ಹೈಕೋರ್ಟ್‌ ತಳ್ಳಿಹಾಕಿದೆ. ಆದರೆ, ವಿಚಾರಣಾ ನ್ಯಾಯಾಲಯಗಳು ನೀಡಿದ್ದ ಆದೇಶದಲ್ಲಿ ತುಸು ಬದಲಾವಣೆ ಮಾಡಿದೆ. ಕುಷ್ಟಗಿ ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ರದ್ದು ಮಾಡಿರುವ ಹೈಕೋರ್ಟ್‌, ರೂ 20 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಗೆ ತಪ್ಪಿದಲ್ಲಿ ನಾಲ್ಕು ತಿಂಗಳು ಜೈಲುವಾಸ ಅನುಭವಿಸಬೇಕು ಎಂದು ಹೇಳಿದೆ.ರೇಷ್ಮೆ ಮತ್ತು ತ್ಯಾಗರಾಜ್‌ ಅವರಿಗೆ ತಲಾ ರೂ 15 ಸಾವಿರ ದಂಡ ವಿಧಿಸ ಲಾಗಿದೆ. ಇಬ್ಬರೂ ದಂಡ ಪಾವತಿಗೆ ತಪ್ಪಿದಲ್ಲಿ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿರುವ ನ್ಯಾಯಾಲಯ, ಮೂವರಿಂದಲೂ ವಸೂಲಿ ಮಾಡಿದ ದಂಡದಲ್ಲಿ ರೂ45 ಸಾವಿರವನ್ನು ಹರೀಶ್‌ ಗೌಡ ಅವರಿಗೆ ನೀಡಬೇಕು ಎಂದು ನಿರ್ದೇಶನ ನೀಡಿದೆ.

ಪ್ರತಿಕ್ರಿಯಿಸಿ (+)