ಮಂಗಳವಾರ, ಜೂನ್ 15, 2021
21 °C

‘ದೇಣಿಗೆ ಸಂಗ್ರಹಕ್ಕೆ ಮೋದಿ ಜೊತೆ ಔತಣಕೂಟ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ನರೇಂದ್ರ ಮೋದಿ ಜೊತೆ ಔತಣಕೂಟ ಏರ್ಪಡಿಸಿ ಹಣ ಸಂಗ್ರಹಿಸಲು ಮುಂದಾಗಿದೆ ಎಂಬ ವರದಿಯನ್ನು ಬಿಜೆಪಿ ಶನಿವಾರ ತಳ್ಳಿ ಹಾಕಿದೆ.‘ಔತಣಕೂಟಕ್ಕೆ ಸಂಬಂಧಿಸಿ ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿ ಸಂಪೂರ್ಣ ಆಧಾರರಹಿತ’ ಎಂದು ಬಿಜೆಪಿ ಮುಖಂಡ ಪ್ರಕಾಶ್‌ ಜಾವಡೇ­ಕರ್‌ ಸ್ಪಷ್ಟಪಡಿಸಿದ್ದಾರೆ.‘ಮೋದಿ ಅವರೊಂದಿಗೆ ಚಹಾ ನಮ್ಮ ಕಾರ್ಯಕ್ರಮ. ಆದರೆ, ಔತಣಕೂಟ ನಮ್ಮ ಕಾರ್ಯಕ್ರಮವಲ್ಲ’ ಎಂದಿದ್ದಾರೆ.‘ಮೋದಿ ಫಾರ್‌ ಪಿ.ಎಂ’ ನಿಧಿಗೆ ಹಣ ಸಂಗ್ರಹಿಸಲು ಅಶೋಕ ಹೋಟೆಲ್‌ನಲ್ಲಿ ಮೋದಿ ಜೊತೆ ಬಿಜೆಪಿ ಔತಣಕೂಟ ಏರ್ಪಡಿಸುತ್ತಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದುದಕ್ಕೆ ಅವರು  ಈ ಸ್ಪಷ್ಟೀಕರಣ ನೀಡಿದ್ದಾರೆ.ಹಣ ಸಂಗ್ರಹಿಸಲು ಅಮೆರಿಕದಲ್ಲಿ ಔತಣಕೂಟ ಏರ್ಪಡಿಸುವ ಪದ್ಧತಿ ಜಾರಿಯಲ್ಲಿದೆ. ಈಚೆಗೆ ಇದನ್ನು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಆರಂಭಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.