ಸೋಮವಾರ, ಜನವರಿ 20, 2020
18 °C

‘ಧರ್ಮಗಳ ಮೇಲೆ ಆಧುನಿಕತೆಯ ಆಘಾತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಧರ್ಮಗಳ ಮೇಲೆ ಆಧುನಿಕತೆಯ ಆಘಾತ’

ಉಡುಪಿ:‘ಜಗತ್ತಿನಲ್ಲಿ ಧರ್ಮಗಳ ಮೇಲೆ ಆಧುನಿಕತೆಯ ಆಘಾತ ನಡೆ ಯುತ್ತಿದೆ. ದೂರದರ್ಶನ, ಇಂಟರ್‌ ನೆಟ್‌ ಪ್ರಭಾವದಿಂದ ಭಗವಂತನ ಅಸ್ಥಿತ್ವದ ಬಗ್ಗೆ ಜಿಜ್ಞಾಸೆ ಹುಟ್ಟಿದೆ. ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿ ಸುವಲ್ಲಿ ಪೋಷಕರು ವಿಫಲರಾ ಗುತ್ತಿದ್ದಾರೆ. ಧರ್ಮದ ರಕ್ಷಣೆಗಾಗಿ ನಮ್ಮ ವ್ಯಕ್ತಿತ್ವವನ್ನು ಪುನರ್‌ ರಚಿಸಿಕೊಳ್ಳಬೇಕು’ ಎಂದು ಬೈಲೂರು ಎರ್ಲಪಾಡಿಯ ವಿನಾಯಕಾನಂದ  ಸ್ವಾಮೀಜಿ ಹೇಳಿದರು.ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯಿಂದ ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಾಂತೀಯ ಹಿಂದೂ ಅಧಿವೇಶನದಲ್ಲಿ ಪರಾತ್ಪರ ಡಾ. ಅರವತಿ ಅವರ ಶಾರೀರಿಕ, ಮಾನಸಿಕ, ಬೌದ್ಧಿಕ ವೈಶಿಷ್ಟಗಳು ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.ವಿಶ್ವಮಾನವತೆಯೇ ಹಿಂದೂ ಧರ್ಮದ ಆಶಯ. ಹಿಂದೂ ಧರ್ಮ ಸರ್ವ ಸಮಾನತೆಯನ್ನು ಪ್ರತಿಪಾ ದಿಸಿದೆ. ಧರ್ಮ ಸಹಿಷ್ಣುತೆಯನ್ನು ಬೋಧಿಸಿದೆ. ಅನಾಥ, ನಿರ್ಗತಿಕರಿಗೆ ಸಹಾಯ ಮಾಡುವುದನ್ನು ತಿಳಿಸಿದೆ. ಧರ್ಮ ರಕ್ಷಣೆಯಲ್ಲಿ ಯಾವುದೇ ರಾಜೀ ಕೂಡದು.ಧರ್ಮ ರಕ್ಷಣೆಗಾಗಿ ಸರ್ವತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಅವರು ಹೇಳಿದರು.ಭಾರತ್ ಸ್ವಾಭಿಮಾನಿ ಟ್ರಸ್ಟ್ ನ ರಾಘವೇಂದ್ರ ಆಚಾರ್ಯ, ಹಿಂದೂ ಜನಜಾಗೃತಿ ಸಮಿತಿಯ ರಮಾನಂದ ಗೌಡ, ಶಾಂತರಾಮ ಅಚ್ಚುತ ಭಂಡಾರ್ಕರ್ ಉಪಸ್ಥಿತರಿದ್ದರು.ಹಿಂದೂ ಜನಜಾಗೃತಿ ಸಮಿತಿ ಉಡುಪಿ ಘಟಕದ ಸಮನ್ವಯಕಾರ ವಿಜಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಳಿದರು.ಪುಷ್ಪ ಕಾರ್ಯಕ್ರಮ ನಿರೂಪಿಸಿದರು.ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ, ಶ್ರೀಕಲಾ, ರಮೇಶ್ ಪೆಲತ್ತೂರು, ಲೀಲಾ ಪೈ, ರಾಮದಾಸ ನಾಯಕ್‌ ಹರ್ಷವರ್ಧನ ಹೂಡೆ, ರಾಮ ಶೆಟ್ಟಿಗಾರ್‌, ದಿನೇಶ್ ಸಿ.ನಾಯಕ್, ಉಷಾ ಶಶಿಧರ್‌, ಗಣೇಶ್‌ ನಾಯಕ್‌, ಲಕ್ಷ್ಮೀ ಹವಾ ಲ್ದಾರ್‌, ಜಯರಾಮ ಸಾಲ್ಯಾನ್‌, ಭುಜಂಗ ಶೆಟ್ಟಿ, ಗೋವಿಂದ ದಾಸ್‌ ಇತರರು ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)