ಗುರುವಾರ , ಜೂನ್ 24, 2021
28 °C

‘ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ’ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನವು ‘ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಆಂದೋಲನ’ ಹಮ್ಮಿಕೊಂಡಿದೆ. ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಂದೋಲನದ ನಿರ್ದೇಶಕಿ ಕವಿತಾ ರತ್ನಾ, ‘ಮತದಾರರ ಸ್ವಾಭಿಮಾನ­ವನ್ನು ಎತ್ತಿ ಹಿಡಿಯುವುದು ಆಂದೋಲನದ ಉದ್ದೇಶವಾಗಿದೆ.ಡಿಜಿಟಲ್‌ ಮಾಧ್ಯಮ ಪ್ರಚಾರಾಂ­ದೋಲನವನ್ನು ಆರಂಭಿ­ಸಲಾಗಿದೆ. ಲೋಕಸಭಾ ಚುನಾವಣೆ­ಯಲ್ಲಿ ಮತ ಚಲಾಯಿಸ­ಲಿರುವ ಯುವ ಜನರನ್ನು ಚುನಾವಣೆ ಚರ್ಚೆಗೆ ಎಳೆಯಲು ಈ ಮಾಧ್ಯಮ ನೆರವಾಗ­ಲಿದೆ’ ಎಂದರು. ‘ಮತದಾರರು ಹಣ, ಹೆಂಡ, ವಿವಿಧ ಗೃಹ ಬಳಕೆಯ ವಸ್ತುಗಳ ಆಮಿಷಕ್ಕೆ ಒಳಗಾಗಬಾರದು. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಕುರಿತು  ಆಂದೋಲನ­ದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸ­ಲಾಗುವುದು’ ಎಂದು ಹೇಳಿದರು.‘ಈಗಾಗಲೇ ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ ಮುಂತಾದೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿ, ಬೆಳಗಾವಿ, ಧಾರವಾಡ, ಹಾವೇರಿ, ಗುಲ್ಬರ್ಗ, ಗದಗ, ರಾಯಚೂರು, ಕೊಪ್ಪಳ, ಚಾಮರಾಜನಗರ, ಯಾದಗಿರಿ ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಭಿಯಾನವನ್ನು ನಡೆಸಲಾಗುವುದು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.