ಚಿಕ್ಕಬಳ್ಳಾಪುರ: ‘ಬಯಲುಸೀಮೆ ಪ್ರದೇಶಗಳಿಗೆ 2 ವರ್ಷದೊಳಗೆ ಎತ್ತಿನಹೊಳೆಯಿಂದ 24 ಟಿಎಂಸಿ ನೀರು ತರುತ್ತೇನೆ ಎಂದು ವೀರಪ್ಪ ಮೊಯಿಲಿ ಭೋಗನಂದೀಶ್ವರ ದೇವರ ಮೇಲೆ ಪ್ರಮಾಣ ಮಾಡುವರೇ’ ಎಂದು ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ನಗರದ ಹೊರವಲಯದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಸಮಾವೇಶದ ಭಾಷಣ ಆರಂಭದಲ್ಲಿಯೇ ನಾನು ಯಾರನ್ನೂ ಟೀಕಿಸಿ ಸಮಯ ವ್ಯರ್ಥ ಮಾಡುವುದಿಲ್ಲ ಎನ್ನುತ್ತಾ ಮೊಯಿಲಿ, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ವಿರುದ್ಧ ಟೀಕೆ, ಆರೋಪಗಳ ಸುರಿಮಳೆಗೈದರು. ಮಾಜಿ ಮುಖ್ಯಮಂತ್ರಿ, ಸಚಿವರು ಕೇವಲ ಭರವಸೆಗಳನ್ನು ನೀಡಿದರೆ ಹೊರತು ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ ಎಂದು ಆರೋಪಿಸಿದರು.

5 ವರ್ಷ ಆಳ್ವಿಕೆ ನಡೆಸಿದ ಬಿಜೆಪಿ ಸರ್ಕಾರವು ಎತ್ತಿನಹೊಳೆಯಿಂದ ಎಂಟು ಟಿಎಂಸಿ ನೀರು ಬರುವುದಾಗಿ ಹೇಳುತ್ತಿದ್ದರೆ, ವೀರಪ್ಪ ಮೊಯಿಲಿ 24 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ನೀರೇ ಇಲ್ಲದಿರುವಾಗ ಯೋಜನೆ ಅನುಷ್ಠಾನ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ನಾನು 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 4,300 ಕೋಟಿ ರೂಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದೆ. ಆದರೆ ಬಿಜೆಪಿ ಸರ್ಕಾರವು ಯೋಜನೆಗೆ 700 ಕೋಟಿ ರೂಪಾಯಿ ಮೀಸಲಿಟ್ಟಿತೇ ಹೊರತು ಮತ್ತೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೋಲಾರದ ಯರಗೋಳ ನೀರಾವರಿ ಯೋಜನೆಯೂ ಪ್ರಗತಿ ಕಾಣಲಿಲ್ಲ.ಇಂಥ ಸ್ಥಿತಿಯಲ್ಲಿ ಎತ್ತಿನಹೊಳೆ ಯೋಜನೆ ಅನುಷ್ಠಾನ ಹೇಗೆ ಸಾಧ್ಯ ಎಂದು ಕೇಳಿದರು.

ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಕಾಲಘಟ್ಟದಲ್ಲಿ ಕೈಗೊಂಡ ಕೆಲಸಗಳನ್ನು ಜನರು ನೆನಪಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಮುಖಂಡರು ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ತೋರಿಸಿ ಮತಯಾಚಿಸಿದರೆ, ಬಿಜೆಪಿ ನರೇಂದ್ರ ಮೋದಿ ತೋರಿಸಿ ಮತಯಾಚನೆ ಮಾಡುತ್ತಾರೆ. ನಮ್ಮ ಪಕ್ಷ ಮಾತ್ರ ರಾಜ್ಯದ ಅಭಿವೃದ್ಧಿ ಮಾಡಿದ್ದನ್ನು ತೋರಿಸಿ ಮತಯಾಚಿಸುತ್ತದೆ ಎಂದು ಅವರು ಹೇಳಿದರು.

ಶಾಸಕರಾದ ಎಂ.ಕೃಷ್ಣಾರೆಡ್ಡಿ, ಎಂ.ರಾಜಣ್ಣ, ಮಂಜುನಾಥ್, ಪಿಳ್ಳಮುನಿಶಾಮಪ್ಪ, ಡಾ. ಶ್ರೀನಿವಾಸಮೂರ್ತಿ, ಜಮೀರ್ ಅಹಮದ್ ಖಾನ್, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಜ್ಯೋತಿರೆಡ್ಡಿ, ಮುಖಂಡರಾದ ಕೆ.ವಿ.ನಾಗರಾಜ್, ಡಾ. ಮಧುಸೀತಪ್ಪ, ಮುನೇಗೌಡ, ಶೀಲಾ ನಾಯಕ್ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಹುಕಾಲದ ಭಯ !
ಚಿಕ್ಕಬಳ್ಳಾಪುರ: ಸ್ವಾಗತ ಭಾಷಣ ಮಾಡುವ ಮುನ್ನವೇ ಮಧ್ಯಾಹ್ನ 1.20ರ ಸುಮಾರಿಗೆ ಸಮಾವೇಶ ಉದ್ಘಾಟಿಸಲಾಯಿತು. ಅದಕ್ಕೆ ಕಾರಣವನ್ನು ಸಹ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ನೀಡಿದರು. ‘ಮಧ್ಯಾಹ್ನ 1.30ಕ್ಕೆ ರಾಹುಕಾಲ ಶುರುವಾಗುವುದರಿಂದ ಅದಕ್ಕಿಂತ ಮೊದಲೇ ಕಾರ್ಯಕ್ರಮ ಉದ್ಘಾಟಿಸಿದ್ದೇವೆ. ಇನ್ಮೇಲೆ ಸ್ವಾಗತ ಭಾಷಣ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ಎಚ್ಡಿಕೆ ಅವರೇ ಅಭ್ಯರ್ಥಿ !
ಸಮಾವೇಶದಲ್ಲಿ ಮಾತನಾಡಿದ ಬಹುತೇಕ ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರು ಭಾಷಣವನ್ನು ಕುಮಾರಸ್ವಾಮಿ ಅವರಿಗಾಗಿಯೇ ಮೀಸಲಿಟ್ಟರು. ಭಾಷಣದ ಆರಂಭದಿಂದ ಕೊನೆಯವರೆಗೂ, ‘ಕುಮಾರಸ್ವಾಮಿ ಅವರೇ ನಮ್ಮ ಕ್ಷೇತ್ರದ ಅಭ್ಯರ್ಥಿಯಾಗಬೇಕು. ಕ್ಷೇತ್ರದಲ್ಲಿ ಒಂದೇ ದಿನ ಪ್ರಚಾರ ಮಾಡಿದರೂ ಅವರನ್ನು ನಾವು ಗೆಲ್ಲಿಸುತ್ತೇವೆ‘ ಎನ್ನುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.