‘ಪತ್ರಲೇಖಾ’ಗೆ ವಿದ್ಯಾ ಪ್ರೇರಣೆ

‘ಸಿಟಿಲೈಟ್ಸ್’ ಎಂಬ ಬಿಡುಗಡೆಯಾಗಬೇಕಿರುವ ಸಿನಿಮಾದ ನಾಯಕಿ ಪತ್ರಲೇಖಾ ಅವರಿಗೆ ವಿದ್ಯಾ ಎಂದರೆ ಅಚ್ಚುಮೆಚ್ಚಂತೆ. ‘ಪ್ರಣೀತಾ’ ಚಿತ್ರ ನೋಡಿದ ನಂತರ ವಿದ್ಯಾ ಅವರ ಪ್ರತಿಯೊಂದು ನಡೆ, ನುಡಿ ಹಾಗೂ ನಟನೆಯನ್ನು ಅತಿ ಸೂಕ್ಷ್ಮವಾಗಿ ಗಮಿಸುತ್ತಾ ಬಂದ ಈ ನಟಿಗೆ ಸ್ಫೂರ್ತಿ ವಿದ್ಯಾ ಬಾಲನ್ ಎಂದು ಸ್ವತಃ ಪತ್ರಲೇಖಾ ಅವರು ತಿಳಿಸಿದ್ದಾರೆ.
ತಮ್ಮ ‘ಸಿಟಿಲೈಟ್ಸ್’ ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ಮಾತನಾಡಿದ ಪತ್ರಲೇಖಾ, ‘ನಾನು ವಿದ್ಯಾ ಅವರಂತೆ ನಟಿ ಮಾತ್ರವಲ್ಲ, ಬದಲಿಗೆ ಅವರಂಥ ವ್ಯಕ್ತಿತ್ವವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದಿದ್ದೇನೆ’ ಎಂದಿದ್ದಾರೆ. ತಮ್ಮ ಪತಿಯೊಡನೆ ಸಿಟಿಲೈಟ್ಸ್ ಚಿತ್ರ ವೀಕ್ಷಿಸಿದ ನಟಿ ವಿದ್ಯಾ ಅವರು ಪತ್ರಲೇಖ ನಟನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರಂತೆ. ಇದರಿಂದ ಪತ್ರಲೇಖ ಇನ್ನಷ್ಟು ಖುಷಿಗೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.