‘ಪಾಠಕ್ಕೆ ತಂತ್ರಜ್ಞಾನದ ನೆರವು ಅಗತ್ಯ’

ಬೆಂಗಳೂರು: ‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಡಿಜಿಟಲ್ನಂತಹ ತಂತ್ರಜ್ಞಾನದ ನೆರವು ಪಡೆದು ಶಾಲಾ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಬೇಕು’ ಎಂದು ಯುನೆಸ್ಕೊದ ಕಲಿಕೆ ಹಾಗೂ ಸಾಕ್ಷರತೆ ವಿಭಾಗದ ಮುಖ್ಯಸ್ಥ ಪ್ರೊ.ಡೇನಿಯಲ್ ವ್ಯಾಗ್ನರ್ ಸಲಹೆ ನೀಡಿದರು.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘2015ರ ಬಳಿಕ ಶಿಕ್ಷಣ ಗುಣಮಟ್ಟದ ಪುನರ್ಚಿಂತನೆ’ ಕುರಿತು ಅವರು ಉಪನ್ಯಾಸ ನೀಡಿದರು.
‘ಭಾರತದಂತಹ ದೇಶಗಳಲ್ಲಿ ಶಿಕ್ಷಣದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳಲು ಅಪೂರ್ವ ಅವಕಾಶ ಇದೆ. ತಂತ್ರಜ್ಞಾನದ ತೀವ್ರ ಪ್ರಗತಿಯ ಈ ಕಾಲದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯನ್ನೇ ಅವಲಂಬಿಸುವುದು ಸೂಕ್ತ ಅಲ್ಲ. ಅರ್ಥಶಾಸ್ತ್ರದಂತಹ ಪಠ್ಯಕ್ರಮಗಳನ್ನು ಶಿಕ್ಷಕರ ನೆರವಿಲ್ಲದೆ ಪಾಠ ಮಾಡಬಹುದು’ ಎಂದು ಅವರು ಅಭಿಪ್ರಾಯಪಟ್ಟರು.
‘ಸಮಾಜದ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಈ ವಿಷಯದಲ್ಲಿ ತಾರತಮ್ಯ ನಡೆಸಬಾರದು. ಸಾರ್ವಜನಿಕರಲ್ಲಿ ಶಿಕ್ಷಣದ ಅವಶ್ಯಕತೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಶಾಲಾ ಚಟುವಟಿಕೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದರು.
‘ಬಹುತೇಕ ಸರ್ಕಾರಗಳು ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುತ್ತಿವೆ. ಈ ಅನುದಾನ ಸದ್ಭಳಕೆಯಾಗುವಂತೆ ನೋಡಿಕೊಳ್ಳುವುದು ಸರ್ಕಾರಗಳ ಜವಾಬ್ದಾರಿ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.