ಗಜೇಂದ್ರಗಡ: ಅಂಗವಿಕಲರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿವೆ, ಆದರೆ ಆಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅದಕ್ಕೆ ಸರ್ಕಾರದ ಕನಿಷ್ಠ ಯೋಜನೆಗಳಿಂದ ವಂಚಿತಗೊಂಡು ಬಾಲಕನೊಬ್ಬ ನರಕ ಸದೃಶ ಜೀವನ ಸಾಗಿಸುತ್ತಿರುವುದೇ ಇದಕ್ಕೆ ಉದಾಹರಣೆ.

ರೋಣ ತಾಲ್ಲೂಕಿನ ರಾಜೂರ ಗ್ರಾಮದ ಪ್ರಕಾಶ ದೇವಪ್ಪ ಸುಣಗಾರ ಎಂಬ ಆರು ವರ್ಷದ ನತದೃಷ್ಟ ಅಂಗವಿಕಲನ ಕಣ್ಣೀರ ಕತೆ ಹೇಳತೀರದು.

ರಾಜೂರ ಗ್ರಾಮದ ದೇವಪ್ಪ ಹಾಗೂ ನೀಲವ್ವ ಎಂಬ ಬಡ ದಂಪತಿಯ ಮಗು ಪ್ರಕಾಶನನ್ನು ಅಂಗವೈಕಲ್ಯ ಹಿಂಡಿ ಹಿಪ್ಪೆಯನ್ನಾಗಿಸಿದೆ. ಆರು ವರ್ಷಗಳ ಹಿಂದೆ ದಂಪತಿಗಳಿಗೆ ಮುದ್ದಾದ ಗಂಡು ಮಗು ಜನಿಸಿದ ಸಂಭ್ರಮದಲ್ಲಿದ್ದ ಈ ಕುಟುಂಬಕ್ಕೆ ಮಗು ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಸಂಗತಿ ಸಹಜವಾಗಿಯೇ ಆಘಾತವನ್ನುಂಟು ಮಾಡಿತ್ತು.

ಮಗು ಪ್ರಕಾಶನನ್ನು ವೈಕಲ್ಯದಿಂದ ಮುಕ್ತಿಗೊಳಿಸಲು ಕುಟುಂಬಸ್ಥರು ಸಾಕಷ್ಟು ಶ್ರಮಿಸಿದರು. ಆದರೆ ಬೆನ್ನಿನಲ್ಲಿನ ನರಗಳು ಒಂದೆಡೆ ಸೇರಿ ಗಂಟಾಗಿದ್ದರಿಂದ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ‘ಶಸ್ತ್ರ ಚಿಕಿತ್ಸೆ ಮಾಡಿದರೆ ಮಗು ಬದುಕುಳಿಯುವ ಸಾಧ್ಯತೆಗಳು ತೀರಾ ವಿರಳ’ ಎಂಬ ತಜ್ಞ ವೈದ್ಯರ ಸಲಹೆಯಿಂದ ಬಾಲಕ ಪ್ರಕಾಶನಿಗೆ ವೈಕಲ್ಯ ಶಾಶ್ವತ ಎಂಬ ನಿರ್ಧಾರಕ್ಕೆ ಕುಟುಂಬಸ್ಥರು ಬದ್ಧರಾದರು.

ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೂ ಸದ್ಯ ಬಾಲಕ ಪ್ರಕಾಶನಿಗೆ ಆರು ವರ್ಷಗಳು ಪೂರ್ಣಗೊಂಡಿವೆ. ದಿನಗಳು ಉರುಳಿದಂತೆ ಬಾಲಕ ಪ್ರಕಾಶನ ದೇಹದ ಗಾತ್ರ ದೊಡ್ಡದಾಗುತ್ತಿದೆ. ನಿತ್ಯ ಕರ್ಮಾದಿಗಳಿಗೆ ಬೇರೊಬ್ಬರ ಆಸರೆ ಅನಿವಾರ್ಯವಾಗಿದೆ. ಇದರ ಮಧ್ಯೆಯೂ ಮಗನಿಗೆ ಶಾಪವಾಗಿ ಪರಿಣಮಿಸಿರುವ ಅಂಗವಿಕಲತೆಯನ್ನು ನಿವಾರಿಸುವುದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿರುವ ಬಡ ದಂಪತಿಗೆ ಬಡತನ ಅಡಿಯನ್ನುಂಟು ಮಾಡಿದೆ.

ಸುಣ್ಣ ತಯಾರಿಕೆಯನ್ನೇ ಬದುಕಿಗೆ ಆಸರೆಯನ್ನಾಗಿಸಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ಈ ಕುಟುಂಬಕ್ಕೆ ಸದ್ಯ ಮಗನಿಗೆ ಅಂಟಿಕೊಂಡಿರುವ ವೈಕಲ್ಯ ನಿವಾರಿಸುವುದು ಕಷ್ಟ ಸಾಧ್ಯವಾಗಿದೆ. ದಿನದ ದುಡಿಮೆಯಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟ ಸಾಧ್ಯವಾಗಿರುವಾಗ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಮಗನನ್ನು ವೈಕಲ್ಯದಿಂದ ಮುಕ್ತಿ ಕೊಡಿಸುವುದು ಹೇಗೆ ಸಾಧ್ಯ? ಎಂಬ ಚಿಂತೆ ಪಾಲಕರಿದ್ದಾರೆ.

ಸರ್ಕಾರ ‘ಬಾಲ ಸಂಜೀವಿನಿ’, ‘ಸುವರ್ಣ ಆರೋಗ್ಯ ಚೈತನ್ಯ’ ಸೇರಿದಂತೆ ಹತ್ತು–ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ವಿಕಲ ಚೇತನ ಬಾಲಕ ಪ್ರಕಾಶನ ವೈದ್ಯಕೀಯ ವೆಚ್ಚ ಭರಿಸಲು ಸಂಪೂರ್ಣ ವಿಫಲವಾಗಿದೆ. ಬದುಕಿನಲ್ಲಿ ಹತ್ತಾರು ಕನಸುಗಳನ್ನು ಹೊಂದಿ ಭರವಸೆಯ ಬದುಕು ಸಾಧಿಸಬೇಕು ಎಂಬ ಬಾಲಕನ ಹಾಗೂ ಪಾಲಕರ ಕನಸಿಗೆ ಅಂಗವೈಕಲ್ಯ ಅಡ್ಡಿಯನ್ನುಂಟು ಮಾಡಿರುವುದು ವಿಪರ್ಯಾಸವೇ ಸರಿ.

ಅಂಗವಿಕಲರ ಬಾಳು ಹಸನಾಗಿಸಲು ಸರ್ಕಾರಗಳು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಳೇ ಇವೆ. ಅಂಗವಿಕಲರ ಬಾಳಿನಲ್ಲಿ ಮಾತ್ರ ಹೊಂಬೆಳಕು ಮೂಡುತ್ತಿಲ್ಲ. ಸರ್ಕಾರಿ ಯೋಜನೆಗಳ ಅಸಮರ್ಪಕ ಅನುಷ್ಠಾನದಿಂದಾಗಿ ಅಸಂಖ್ಯಾತ ವಿಕಲ ಚೇತನರು ತಮ್ಮದಲ್ಲದ ತಪ್ಪಿಗಾಗಿ ಪರಾವಲಂಬಿಗಳಾಗಿ ದಯನೀಯ ಬದುಕು ಸಾಗಿಸುವಂತಾಗಿದೆ. ಬಾಲಕನ ಕುಟುಂಬದ ಸಂಪರ್ಕ ಸಂಖ್ಯೆ 9611672199.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.