ಕೊಳ್ಳೇಗಾಲ: ಕೆಲವೇ ದಿನಗಳಲ್ಲಿ ತಾಲ್ಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಲಿದೆ ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.

ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಮೈಸೂರು ಒಡಿಪಿ ಕೊತ್ತನೂರು ನಿಸರ್ಗ ಕೇಂದ್ರ ಸಮಿತಿ, ಬಾಣೂರು, ಸುಂಡ್ರಳ್ಳಿ ಆಕಾಶ ಕೇಂದ್ರ ಸಮಿತಿ, ತೆಳ್ಳನೂರು, ಅಂಕಣಾಪುರ ಕಾವೇರಿ ಕೇಂದ್ರ ಸಮಿತಿ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ನಿಸರ್ಗ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಿಎಂಆರ್ವೈ ಯೋಜನೆಯಡಿ ಮುಕ್ತಾಯಗೊಳ್ಳುವ ಹಂತದಲ್ಲಿದ್ದು ಈಗಾಗಲೇ ಈ ಯೋಜನೆಯಡಿ 84 ಲಕ್ಷ ಜನರು ಸಾಲ ಸೌಲಭ್ಯ ಪಡೆದು ಸಮರ್ಪಕವಾಗಿ ಮರುಪಾವತಿಸದ ಕಾರಣ ಈ ಯೋಜನೆ ಕೊನೆಗೊಳ್ಳುವಂತಾಗಿದೆ ಎಂದರು.

ಮಹಿಳೆಯರು ಸಾಲ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳದೆ ಆರ್ಥಿಕವಾಗಿ ಸಬಲೀಕರಣರಾಗುವ ಕೈಕಸಬುಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಿ. ದೇವರಾಜು, ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಪುಟ್ಟಯ್ಯ, ಮೈಸೂರು ಒಡಿಪಿ ನಿರ್ದೇಶಕ ಸ್ಟ್ಯಾನಿ ಡಿ. ಅಲ್ಮೇಡಾ, ಗೀತಾ ಬಾವಿ, ತೆಳ್ಳನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಸದಸ್ಯ ಗೋವಿಂದರಾಜು, ಭಾಸ್ಕರ್, ರತ್ನಮ್ಮ, ಬಾಣೂರು– ಸುಂಡ್ರಳ್ಳಿ ಆಕಾಶ ಕೇಂದ್ರ ಸಮಿತಿ ಅಧ್ಯಕ್ಷ ಸಿದ್ದರಾಜು, ತೆಳ್ಳನೂರು ಅಂಕಣಾಪುರ ಕಾವೇರಿ ಕೇಂದ್ರ ಸಮಿತಿ ಅಧ್ಯಕ್ಷ ಟಿ.ಪಿ. ಕೃಷ್ಣ, ತೆಳ್ಳನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲಕೃಷ್ಣ, ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ದಯ್ಯ, ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಡಿ. ಕುಮಾರ್, ರೈತ ಸಂಘದ ಅಧ್ಯಕ್ಷ ಯಾಲಕ್ಕಿಗೌಡ, ಒಡಿಪಿ ಕಾರ್ಯಕರ್ತ ಸದಾಶಿವ್, ದೊಡ್ಡಯ್ಯ, ಹೊಂಗಯ್ಯ, ರಾಜೇಶ್, ಕೆಂಪಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.