ಮಂಗಳವಾರ, ಮಾರ್ಚ್ 2, 2021
31 °C

‘ಬಿಜೆಪಿ ರಾಷ್ಟ್ರೀಯವಾದಿ;ಎಎಪಿ ರಾಷ್ಟ್ರ ವಿರೋಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಿಜೆಪಿ ರಾಷ್ಟ್ರೀಯವಾದಿ;ಎಎಪಿ ರಾಷ್ಟ್ರ ವಿರೋಧಿ’

ಗಾಜಿಯಾಬಾದ್‌ (ಐಎಎನ್‌ಎಸ್‌): ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕಮಾತ್ರ ‘ರಾಷ್ಟ್ರೀಯವಾದಿ’ ಪಕ್ಷವಾಗಿದ್ದು, ಆಮ್‌ ಆದ್ಮಿ ಪಕ್ಷ  (ಎಎಪಿ) ‘ರಾಷ್ಟ್ರವಿರೋಧಿ’ ಪಕ್ಷವಾಗಿದೆ ಎಂದು ಗಾಜಿಯಾಬಾದ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸೇನೆಯ ಮಾಜಿ ಮುಖಸ್ಥ ವಿ.ಕೆ.ಸಿಂಗ್‌ ಗುರುವಾರ ಟೀಕಿಸಿದ್ದಾರೆ.

‘ಎಎಪಿ ರಾಷ್ಟ್ರ ವಿರೋಧಿಯಾಗಿದ್ದು, ಅವರು ಗಡಿನಿಯಂತ್ರಣ ರೇಖೆಯನ್ನು (ಎಲ್‌ಒಸಿ) ಅಂತರರಾಷ್ಟ್ರೀಯ ಸೀಮೆಯನ್ನಾಗಿಸಬೇಕು ಎಂದು ವಾದಿಸುತ್ತಾರೆ.ಕಾಶ್ಮೀರ್‌ದಲ್ಲಿ ಜನಮತಗಣನೆ ಪರವಾಗಿ ನಿಲ್ಲುತ್ತಾರೆ’ ಎಂದು ಜರಿದ ಸಿಂಗ್‌, ‘ಬಿಜೆಪಿ ಏಕಮಾತ್ರ ರಾಷ್ಟ್ರೀಯವಾದಿ ಪಕ್ಷ’ ಎಂದು ಬಣ್ಣಿಸಿದರು.

ಎಎಪಿ ಅಭ್ಯರ್ಥಿ ಶಾಜಿಯಾ ಇಲ್ಮಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದ ಸಿಂಗ್‌, ‘ಓರ್ವ ದೇಶಭಕ್ತ ಹಾಗೂ ಶಿಸ್ತಿನ ಸಿಪಾಯಿ’ಯಾಗಿ ಗಾಜಿಯಾಬಾದ್‌ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವೆ. ನನಗೆ ಯಾರು ಪ್ರತಿಸ್ಪರ್ಧಿಗಳಲ್ಲ. ಬಡತನ, ಸಾಮಾಜಿಕ ಅಸಮಾನತೆ ಹಾಗೂ ಈ ನಗರದೊಂದಿಗೆ ಅನುಸರಿಸಿದ ಮಲತಾಯಿ ಧೋರಣೆಯ ವಿರುದ್ಧ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ನುಡಿದರು.

ಕಾಂಗ್ರೆಸ್‌ ವಿರುದ್ಧವೂ ಹರಿಹಾಯ್ದ ಸಿಂಗ್, ‘ಸೇನೆಯ ಅಗತ್ಯಗಳಿಗೆ ಕಾಂಗ್ರೆಸ್‌ ಸರ್ಕಾರ ‘ಹೆಚ್ಚಿನ ಪ್ರಾಶಸ್ತ್ಯ’ ನೀಡಿರಲಿಲ್ಲ. ರಕ್ಷಣೆ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜ್‌ ಬಬ್ಬರ್‌ ಅವರಿಗೆ ಸಶಸ್ತ್ರಪಡೆಗಳ ಬಗ್ಗೆ ಅಆಇಈಯೂ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.