ಶನಿವಾರ, ಜೂನ್ 19, 2021
28 °C

‘ಭೀಮೆ ಬರೀ ನದಿಯಲ್ಲ, ಒಡಲ ಬಳ್ಳಿ’

ಪ್ರಕಾಶ ಮಸಬಿನಾಳ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿವಾಳ ಮಾಚಿದೇವ ವೇದಿಕೆ (ಆಲಮೇಲ): ‘ಭೀಮಾ ನದಿ ಬರೀ ನೀರಲ್ಲ, ಅದು ಒಡಲ ಬಳ್ಳಿ, ನದಿ ದಂಡೆ ಯವರ ಜಗಳಕ್ಕೆ ನೀರು ಸೊರಗದಿರಲಿ, ಭೀಮಾ ತೀರ ಎದೆಯೊಳಗಿನ ಹಳ್ಳ’ ಎಂಬ ಶಿವಕುಮಾರ ಉಪ್ಪಿನ ಅವರ ಕವನ, ‘ನಾ ಯಾಕ ಬ್ಯಾಡ ಹೇಳ್ರಿ ಎಂಬ ಹೆಣ್ಣಿನ ಧ್ವನಿಯನ್ನು ಬಿಂಬಿಸುವ ಕೆ.ಸುನಂದಾ ಅವರ ಒಳ ದನಿ ಸೇರಿದಂತೆ ಹಲವು ಕವಿಗಳ ಕವನಗಳು ಇಲ್ಲಿ ನಡೆಯುತ್ತಿರುವ ವಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸಾಹಿತ್ಯಾಸಕ್ತಿಗಳ ಮನದಲ್ಲಿ ಗಟ್ಟಿ ಯಾಗಿ ಉಳಿಯುವಂತೆ ಮಾಡಿದವು.ಕವನ, ಕಾಲ ಕೆಟ್ಟಿಲ್ಲ ದುರ್ಜನರ ತಲೆ ಕೆಟ್ಟಿದೆ ಎಂದು ಅತ್ಯಾಚಾರ, ದುಶ್ಚಟಗಳ ಕುರಿತು ಕವನ ವಾಚಿಸಿದ ಎನ್‌.ಎಂ ಚಪ್ಪರಬಂದ್‌ ಸೇರಿದಂತೆ ಹಲವು ಕವಿ ಗಳು ಪ್ರಸ್ತುತ ಸಾಮಾಜಿಕ ಸಮಸ್ಯೆ ಗಳನ್ನು ಬಿಡಿಸಿಟ್ಟರು.ಕವಿಗೋಷ್ಠಿ ಉದ್ಘಾಟಿಸಿ ಮಾತನಾ ಡಿದ ಸಾಹಿತಿ ಡಾ.ರಂಜಾನ್‌ ದರ್ಗಾ, ಕವಿಯ ಬಹುದೊಡ್ಡ ಶಕ್ತಿ ಎಂದರೆ ಸಮಾಜಕ್ಕೆ ಸತ್ಯವನ್ನು ತಿಳಿಸುವ ಜೊತೆಗೆ ತನ್ನಲ್ಲಿರುವ ಭಾವನೆಗಳನ್ನು ಕವನದ ಮೂಲಕ ಬಿಚ್ಚಿಡಬೇಕು ಎಂದರು.ಸಾಹಿತ್ಯ ಎಂಬುದು ಮನರಂಜನೆ ಗಲ್ಲ. ಸಾಮಾಜಿಕ ಪ್ರಜ್ಞೆ ಮೂಡಿಸುವ ಸಾಹಿತ್ಯಕ್ಕೆ ಹೆಚ್ಚು ಬೆಲೆ ಇದೆ. ಕನ್ನಡ ಸಾಹಿತ್ಯವು ಸಾಮಾಜಿಕ ಪ್ರಜ್ಞೆ ತಿಳಿಸು ವಂತಹ ಮೌಲ್ಯ ಹೊಂದಿದೆ. ಸಾಹಿತ್ಯದಿಂದ ಮನುಷ್ಯತ್ವ ರೂಪಿಸುವ ಕೆಲಸವಾಗಬೇಕಿದೆ. ಕವಿಗಳಿಗೆ ಕಾವ್ಯವೇ ಧರ್ಮವಾಗಬೇಕು ಎಂದು ಹೇಳಿದರು.ಕಾವ್ಯವು ಮನುಷ್ಯನಲ್ಲಿ ಮಾನ ವೀಯತೆ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಕನ್ನಡ ಸಾಹಿತ್ಯ ಪರಂಪರೆ ಅರಿತುಕೊಳ್ಳಬೇಕು. ಕನ್ನಡ ಭಾಷೆಯನ್ನು ಭಾಷಾ ವಿಜ್ಞಾನ ದೃಷ್ಟಿಯಿಂದ ಬೆಳೆಸಬೇಕು. ಬಸವಾದಿ ಶರಣರ ವಚನಗಳು ವಿಶ್ವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ. ಅವರು ನುಡಿದಂತೆ ನಡೆದರು. ಕಾಯಕ ತತ್ವಕ್ಕೆ ಮಹತ್ವ ನೀಡಿದರು. ವಚನ ಸಾಹಿತ್ಯವನ್ನು ವಿವಿಧ ದೇಶಗಳಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಅಂದು ಬಸವಣ್ಣನವರು ಯಾವ ಬೇಧವಿಲ್ಲದೇ ಸಮಾಜದಲ್ಲಿ ಸಾಮರಸ್ಯ ಹೆಚ್ಚಿಸುವ ಕೆಲಸ ಮಾಡಿದರು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಪ್ರೊ.ದೊಡ್ಡಣ್ಣ ಭಜಂತ್ರಿ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ  ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ಶಶಿಕಲಾ ವಸ್ತ್ರದ, ಶಾಸಕ ರಮೇಶ ಭೂಸನೂರ, ಬಾಗಲಕೋಟೆ ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಡಾ.ವಿಜಯ ಕುಮಾರ ಕಟಗಿಹಳ್ಳಿಮಠ ಉಪಸ್ಥಿತರಿ ದ್ದರು. ಪ್ರೊ.ಗುರುರಾಜ ಮೇಡಿದಾರ. ಗುರುರಾಜ ಚೌಧರಿ, ಬಸವರಾಜ ಅಗಸರ, ರೇಷ್ಮಾ ನದಾಫ, ಗೋಪಾಲ ಅಥರ್ಗಾ, ವಿಜಯಾ ಬಿರಾದಾರ, ರಾಜೇಂದ್ರಕುಮಾರ, ಭಾರತಿ ಪೂಜಾರ ಶರಣು ಚಟ್ಟಿ, ಶಿವಾನಂದ ಹಿರೇಮಠ ಸೇರಿದಂತೆ 30 ಕವಿಗಳು ಕವನ ವಾಚಿಸಿ ದರು. ಡಾ.ಕಾಂತು ಇಂಡಿ ಸ್ವಾಗತಿಸಿ ದರು. ರಮೇಶ ಕತ್ತಿ ನಿರೂಪಿಸಿದರು, ಮಲ್ಲಿಕಾ ರ್ಜುನ ಕಿವಡೆ ವಂದಿಸಿದರು. ಪಿ.ಸಿ. ಎಂಟಮಾನ, ಸಿದ್ದಣ್ಣ ಗೋಟ್ಯಾಳ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.