ಮಂಗಳವಾರ, ಜನವರಿ 28, 2020
19 °C

‘ಮಠ–ಮಂದಿರಗಳಿಂದ ಧರ್ಮ ಸಂಸ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಭಾರತೀಯರ ಧರ್ಮ­ಸಂಸ್ಕಾರ­­ಗಳು ಪರಂಪರಾಗತವಾಗಿ ಮಠ­ಮಂದಿರಗಳ ತಳಹದಿಯ ಮೇಲೆ ಮುನ್ನಡೆಯುತ್ತಿವೆ. ಅದರಿಂದಾಗಿ ಸರ್ಕಾರ ಮೂಢನಂಬಿಕೆಗಳ ವಿರುದ್ಧ ಹೊಸ ಕಾಯ್ದೆ ರೂಪಿಸುವುದು ಸರಿ­ಯಾದ ಕ್ರಮವಲ್ಲ ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ ಪ್ರಸಾದ ಹೇಳಿದರು.ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹುಚ್ಚೇಶ್ವರಮಠದಲ್ಲಿ ಗುರುವಾರ ನಡೆದ 9ನೇ ವರ್ಷದ ಇಷ್ಟಲಿಂಗ  ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಮತ್ತು  ಭಗವದ್ಗೀತೆ ಪ್ರವಚನ ಕಾರ್ಯಕ್ರಮವನ್ನು ಉದ್ಘಾ­ಟಿಸಿ ಅವರು ಮಾತನಾಡಿದರು.ಡಾ.ಆರ್‌.ಎಸ್‌.ಅರಳೆಲೆಹಿರೇಮಠ ಮಾತನಾಡಿ, ಬಾಹ್ಯವಿರೋಧಿಗಳಿಗಿಂತ ಆಂತರಿಕವಾಗಿ ನಮ್ಮಲ್ಲಿರುವ ವಿರುದ್ಧ­ಶಕ್ತಿಯನ್ನು ತೆಗೆದು ಹಾಕುವ ಮೂಲಕ ಧರ್ಮದ ದಾರಿಯಲ್ಲಿ ನಡೆಸಲು ಶಿದ್ದಾಂತ ಶಿಖಾಮಣಿ ಗ್ರಂಥಗಳು ಅವಶ್ಯವಾಗಿದೆ ಎಂದರು.ಹುಬ್ಬಳ್ಳಿ ಪಂಚಗ್ರಹ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸದ್ಗುರುವಿನ ಉಪ­ದೇಶಗಳಿಂದ ಮನುಕುಲದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದರು.ಕಾಶಿಪೀಠದ ಜಗದ್ಗರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಮುಕ್ತಿ ಮಾರ್ಗಕ್ಕಾಗಿ ಭಕ್ತಿ ದಾರಿ ಅವಶ್ಯ­ವಾಗಿದೆ. ಅದಕ್ಕೆ ಸಿದ್ದಾಂತ ಶಿಖಾಮಣಿ ಗ್ರಂಥ ಅಧ್ಯಯನ ಅಗತ್ಯ­ವಾಗಿದೆ ಎಂದರು.ಹೊತ್ನಹಳ್ಳಿ ಶಾಂತವೀರಮಠದ ಶಂಭುಲಿಂದ ಸ್ವಾಮೀಜಿ, ಹಾವೇರಿ ಎಲ್‌ಐಸಿ ಅಧಿಕಾರಿ ವಿ.ಜಿ.­ಹರ್ಲಾ­ಪುರ, ಮುಂಬೈ ವ್ಯಾವಾರಸ್ಥ ಆರ್‌.ಬಿ.ಹೆಬ್ಬಳ್ಳಿ, ಬಿ.ಟಿ.ವಿರೇಶ ಮತ್ತಿತರರು ಉಪಸ್ಥಿತರಿದ್ದರು.ಸಿದ್ದಾಂತ ಶಿಖಾಮಣಿ ಹೊಸ ಆವೃತಿ ಗ್ರಂಥ ಬಿಡುಗಡೆ ಹಾಗೂ ಕಾಶಿಪೀಠದ ವೆಬ್‌ಸೈಟ್‌ ಅನ್ನು ಬಿಡುಗಡೆ ಮಾಡಲಾಯಿತು.

ಪರಶುರಾಮ ನರೇಗಲ್ಲ ಸಂಗಡಿಗರು ಸಂಗೀತ ಸೇವೆ ನೀಡಿರು. ಗಂಗೂಬಾಯಿ ದೇಸಾಯಿ ಸ್ವಾಗತಿಸಿದರು. ಸಿ.ಎನ್‌.ಶಿಗ್ಗಾವಿ ನಿರೂಪಿಸಿದರು. ಬಂಕಾನಾಥ ಮಹಿಳಾ ರುದ್ರಬಳಗದಿಂದ ರುದ್ರಪಠಣ ಜರುಗಿತು.

ಪ್ರತಿಕ್ರಿಯಿಸಿ (+)