ಬೆಂಗಳೂರು: ‘ಮಲೆನಾಡಿನ ಸಂಸ್ಕೃತಿಯು ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಆದರೋಪಚಾರ, ಸಂಶೋಧನೆಯಲ್ಲಿ, ಸಾಹಿತ್ಯ ಕೃಷಿಯಲ್ಲಿ ಮುಂದಿದೆ’ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಮಲೆನಾಡ ಸೇನೆ ಬೆಂಗಳೂರು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಸಂಗಮ ಮತ್ತು ಚಿತ್ರಕಲಾ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮಲೆನಾಡಿನ ದಟ್ಟ ಹಸಿರು, ಕಾಡು, ಬೆಟ್ಟದಂತೆ ಅಲ್ಲಿನ ಜನರ ಮನಸ್ಸು ಕೂಡ ವಿಶಾಲವಾದುದು. ಅವರು ತಮ್ಮ ಸೌಜನ್ಯಯುತವಾದ ನಡವಳಿಕೆಯಿಂದ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ’ ಎಂದರು.

‘ನಾವು ಎಲ್ಲಿ ಹೋದರೂ ನಮ್ಮ ಊರಿನ ಬಗೆಗಿನ ಅಭಿಮಾನ ಮರೆಯಾಗಬಾರದು. ಕುವೆಂಪು ಅವರು ನಮ್ಮ ನಾಡು, ಸಂಸ್ಕೃತಿಯ ಬಗೆಗೆ, ಅದರಲ್ಲೂ ಮುಖ್ಯವಾಗಿ ಮಲೆನಾಡಿನ ಬಗೆಗೆ ಇಟ್ಟುಕೊಂಡಿದ್ದ ಉತ್ಕಟ ಅಭಿಮಾನ ಎಲ್ಲರಿಗೂ ಪ್ರೇರಣಾದಾಯಕವಾಗಬೇಕು’ ಎಂದರು.

ಮಾಜಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ‘ಮಲೆನಾಡ ಸೇನೆಯು ಸಮಾಜಮುಖಿಯಾಗಿ ಪ್ರೇರಣೆ ನೀಡುವಂತಹ ಕಾರ್ಯವನ್ನು ಮಾಡಬೇಕು. ಸಂಯುಕ್ತ, ಸಂಘಟನೆಯಿಂದ ಬೆಳೆಯಬೇಕು’ ಎಂದು ಸಲಹೆ ನೀಡಿದರು.

‘ಮಲೆನಾಡಿನ ಜನರ ಬದುಕು ಅಡಿಕೆಯಲ್ಲಿದೆ. ಈ ವರ್ಷ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಹೆಚ್ಚಿದೆ. ಆದರೆ, ಬೆಳೆಯೇ ಇಲ್ಲದಿರುವುದು ಮಲೆನಾಡಿನ ಜನರ ಈ ವರ್ಷದ ದುರಂತವಾಗಿದೆ. ರಾಜ್ಯ ಸರ್ಕಾರವು ಗುಟ್ಕಾವನ್ನು ನಿಷೇಧಿಸಿದಾಗ ಗುಟ್ಕಾ ನಿಷೇಧ ಬೇಡವೆಂದು ನಾವು ಹೋರಾಟ ನಡೆಸಬೇಕಾಗಿ ಬಂತು. ಏಕೆಂದರೆ, ಗುಟ್ಕಾದಲ್ಲಿ ಅಡಿಕೆಯಿದೆ. ಅಡಿಕೆಯಲ್ಲಿ ಮಲೆನಾಡಿನ ಜನರ ಜೀವನವಿದೆ’ ಎಂದು ಹೇಳಿದರು.

‘ಅಡಿಕೆಯಿದ್ದರೆ ಹೊಗೆಸೊಪ್ಪು, ಗುಟ್ಕಾ ಬಳಕೆಗೆ ಬರುತ್ತದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್ನಲ್ಲಿ ಅಡಿಕೆಯನ್ನು ನಿಷೇಧಿಸಬೇಕು ಎಂದು ವಾದ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರವು ಅಲ್ಲಿ ರೈತರ ಪರ ಮಾತನಾಡುವ ವಕೀಲರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದು ಇಂದಿನ ಅಡಿಕೆ ಬೆಳೆಗಾರರ ಕಥೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.