ಸೋಮವಾರ, ಜುಲೈ 26, 2021
24 °C
ಬೆಟಗೇರಿ ಕೃಷ್ಣಶರ್ಮರ ಕಾವ್ಯದಲ್ಲಿ ದೇಶೀಯತೆ: ದತ್ತಿ ಉಪನ್ಯಾಸ

‘ಮಾತುಗಳನ್ನು ಕಾವ್ಯವಾಗಿಸಿದ ಕಲಾಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲೋಳಿ (ಮೂಡಲಗಿ): ‘ಮಾತುಗಳನ್ನು ಕಾವ್ಯವನ್ನಾಗಿಸುವ ಕಲಾತ್ಮಕತೆಯನ್ನು ಬೆಟಗೇರಿ ಕೃಷ್ಣಶರ್ಮರು ಹೊಂದಿದ್ದರು’ ಎಂದು ಎಸ್ಆರ್ಇಎಸ್ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಸುರೇಶ ಹನಗಂಡಿ ಹೇಳಿದರು.ಇಲ್ಲಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಸ್ಆರ್ಇಎಸ್‌ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೃಷ್ಣಶರ್ಮರು ಅಚ್ಚ ದೇಸೀ ಭಾಷೆಯನ್ನು ಕಾವ್ಯಕ್ಕೆ ಅಳವಡಿಸಿ ಕೊಂಡಿದ್ದರು  ಎಂದು ಅವರು  ಸ್ಮರಿಸಿಕೊಂಡರು.ನಲ್ವಾಡುಗಳು, ವಿರಹಿಣಿ, ಒಡ ನಾಡಿ, ಕಾರಹುಣ್ಣಿಮೆ, ಮುದ್ದಣ ಮಾತು ಪ್ರಮುಖ ಕವನ ಸಂಕಲನಗಳು ಸೇರಿ ದಂತೆ ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ, ಸಂಶೋಧನೆ ಚರಿತ್ರೆ ಮತ್ತು ಜಾನಪದ ಸಾಹಿತ್ಯಕ್ಕೆ ಅವರ ಕೊಡುಗೆಯು ಅಪಾರ ವಾಗಿದೆ ಎಂದರು.ರಾಮದುರ್ಗದ ಐ.ಎಸ್. ಯಾದ ವಾಡ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಪ್ರೊ. ರಾಜು ಕಂಬಾರ  ಲಾವಣಿ ಮತ್ತು ಗೀಗೀ ಸಾಹಿತ್ಯ ಕುರಿತು ಮಾತನಾಡಿ ‘ಜಾನಪದ ಸಾಹಿತ್ಯದ ಪ್ರಮುಖ ಪ್ರಕಾರವಾಗಿರುವ ಲಾವಣಿಗೆ ಎರಡು ನೂರು ವರ್ಷಗಳ ಇತಿಹಾಸವಿದೆ ಎಂದರು.ಸಾಹಿತ್ಯಕ ಮತ್ತು ಗೇಯತೆಯ ದೃಷ್ಟಿಯಿಂದ ಲಾವಣಿಗಳು ಸರ್ವಕಾಲಿಕ ಇಷ್ಟವಾಗುವಂತವು ಎಂದರು. ಪ್ರೊ. ಕೆ.ಎಸ್. ಪರವ್ವಗೋಳ ಕಾದಂ ಬರಿಕಾರ ಕೃಷ್ಣಮೂರ್ತಿ ಪುರಾಣಿಕರ ಕುರಿತು ಮಾತನಾಡಿ, ಪುರಾಣಿಕರು 120 ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ ಎಂದರು.ಯಾದವಾಡದ ಬಸಪ್ಪ ಇಟ್ಟಣ್ಣವರ ಲಾವಣಿ ಮತ್ತು ಗೀಗೀ ಹಾಡುಗಳನ್ನು ಮತ್ತು ಕಪರಟ್ಟಿ ಬಸವರಾಜ     ಹಿರೇಮಠ ಅವರು ಬೆಟಗೇರಿ ಕೃಷ್ಣಶರ್ಮರ ಹಾಡುಗಳನ್ನು ಹಾಡಿ ಜನಮನ ತಣಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಿರ್ದೇಶಕ ಬಿ.ಬಿ. ಬೆಳಕೂಡ ಅವರು ಮಾತನಾಡಿ ವಿದ್ಯಾರ್ಥಿಗಳು ಗೋಕಾಕ ನಾಡಿನ ಸಾಹಿತ್ಯ, ಕಲೆಯ ಪರಂಪರೆ ಯನ್ನು ಬೆಳೆಸಬೇಕು ಎಂದರು. ಕಸಾಪ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ, ಕಸಾಪ ಸಾಹಿತ್ಯ ಸೇವೆ ಕುರಿತ ವಿವರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್. ಕಡಾಡಿ, ನಿರ್ದೇಶಕರಾದ ಭೀಮಶೆಪ್ಪ ಕಡಾಡಿ, ಎಸ್.ಎಂ. ಖಾನಾಪುರ, ಮಲ್ಲಪ್ಪ ಕುರಬೇಟ, ಬಿ.ಬಿ. ಕಡಾಡಿ ಅತಿಥಿಯಾಗಿದ್ದರು. ಎಸ್.ಎಂ. ನಿಂಗನೂರ ನಿರೂಪಿಸಿ ದರು, ಡಿ.ಎಸ್. ಹುಗ್ಗಿ ವಂದಿಸಿದರು.

***

‘ಸಾಹಿತ್ಯ ಕ್ಷೇತ್ರದಲ್ಲೂ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಬೆಟಗೇರಿ ಕೃಷ್ಣಶರ್ಮರು ಜ್ಞಾನಪೀಠ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ’

-ಸುರೇಶ ಹನಗಂಡಿ,

ಪ್ರಾಚಾರ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.