ಶಿಲ್ಲಾಂಗ್ (ಪಿಟಿಐ): ಸ್ವದೇಶಿಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಲಘು ಯುದ್ಧ ವಿಮಾನ (ಎಲ್ಸಿಎ) ‘ತೇಜಸ್’, ಮಿಗ್–21 ಎಫ್ಎಲ್ ಸ್ಥಾನದಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಲಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಎನ್ಎಕೆ ಬ್ರೌನ್ ಗುರುವಾರ ತಿಳಿಸಿದ್ದಾರೆ.

‘ಒಂದು ಪ್ರಮುಖ ಹಂತ ಕ್ರಮಿಸಿದೆ (ಮಿಗ್–21ಎಫ್ಎಲ್) ಹಾಗೂ ನಾವು ವಾಯುಪಡೆಗೆ ಹೊಸದನ್ನು (ತೇಜಸ್) ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಇಲ್ಲಿನ ಈಶಾನ್ಯ ಏರ್ ಕಮಾಂಡ್ ಪ್ರಧಾನ ಕಚೇರಿಯಲ್ಲಿ ಅವರು ತಿಳಿಸಿದ್ದಾರೆ.

‘ನಾವು ಮಾರ್ಕ್–1 ಮಾದರಿಯ 40 ವಿಮಾನಗಳನ್ನು ಪಡೆಯಲಿದ್ದೇವೆ. 2014ರ ಅಂತ್ಯದ ವೇಳೆಗೆ ತೇಜಸ್ ದಾಳಿಗೆ ಸಜ್ಜಾಗಲಿದೆ. ರಕ್ಷಣಾ ಸಚಿವ ಎ ಕೆ ಆಂಟನಿ ಅವರು ಡಿಸೆಂಬರ್ 20ರಂದು ಬೆಂಗಳೂರಿನಲ್ಲಿ ತೇಜಸ್ ಅನ್ನು ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಗೊಳಿಸಲಿದ್ದಾರೆ’ ಎಂದೂ ಬ್ರೌನ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಕಲೈಕುಂದಾ ವಾಯು ನೆಲೆಯಲ್ಲಿ ಬುಧವಾರ 50 ವರ್ಷಗಳ ಸೇವೆಯ ಬಳಿಕ ಹಾರಾಟ ನಿಲ್ಲಿಸಿದ ‘ಮಿಗ್–21 ಎಫ್ಎಲ್’ ವಿಮಾನದ ಬಗ್ಗೆ ಪ್ರತಿಕ್ರಿಯಿಸಿದ ಬ್ರೌನ್, ‘ವಾಯು ಪಡೆಗೆ ಅದೊಂದು ಸ್ಮರಣೀಯ ಕ್ಷಣ. ಅದೊಂದು ಪರ್ವಕಾಲ. ಆ ವಿಮಾನ ನನ್ನನ್ನು ಸೇರಿದಂತೆ ಎಲ್ಲಾ ಯುದ್ಧ ವಿಮಾನಗಳ ಪೈಲಟ್ಗಳಿಗೆ ಹಾಗೂ ಒಂದು ತಲೆಮಾರಿನ ಪೈಲಟ್ಗಳಿಗೆ ತರಬೇತಿ ನೀಡಿತ್ತು. ಜೊತೆಗೆ ಅದು ತನ್ನ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿದೆ’ ಎಂದು ಅಭಿಪ್ರಾಯ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.