ಸೋಮವಾರ, ಜನವರಿ 20, 2020
26 °C
ಕುಂಚಿಟಿಗ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಅಭಿಮತ

‘ಮೂಢನಂಬಿಕೆಗಳು ಬದುಕನ್ನು ಕೆಡಿಸುತ್ತವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಪುರಾಣ ಕಾಲದಿಂದಲೂ ಬಹುಪಾಲು ಜನ ಸಂಸಾರಸ್ಥರಾಗಿಯೇ, ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಅಂಥವರ ಸಾಲಿನಲ್ಲಿ ಕೆಂಚಾವಧೂತರೂ ಪ್ರಮುಖರು’ ಎಂದು ಕುಂಚಿಟಿಗ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದಲ್ಲಿ ಹಠ ರಾಜಯೋಗಿ ಕೆಂಚಾವಧೂತರ ಕಾರ್ತಿಕ ದೀಪೋತ್ಸವ, ಧ್ವನಿ ಸುರುಳಿ ಬಿಡುಗಡೆ, ಸಮುದಾಯ ಭವನ ಹಾಗೂ ಮಹಾದ್ವಾರ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಮೂಢ ನಂಬಿಕೆಗಳು ಬದುಕನ್ನು ಕೆಡಿಸುತ್ತವೆ. ನಮಗೆ ನಂಬಿಕೆಗಳು ಬೇಕು, ಅವು ಮನುಷ್ಯನಿಗೆ ದಾರಿ ದೀಪವಾಗಬೇಕು’ ಎಂದರು.ಜಾನಪದ ತಜ್ಞ ಡಾ.ಮೀರ ಸಾಬೀಹಳ್ಳಿ ಶಿವಣ್ಣ ಮಾತನಾಡಿ, ವಿಜ್ಞಾನಕ್ಕೆ ಪವಾಡ ರಹಸ್ಯ ಅರ್ಥವಾಗುವುದಿಲ್ಲ. ಪವಾಡದ ಹಿಂದೆ ನಿಗೂಢ ಅರ್ಥಗಳಿರುತ್ತವೆ. ಅದು ಜಾದುವಿನಂತೆ ಕಂಡರೂ, ಅರ್ಥೈಸಿಕೊಳ್ಳುವ ರೀತಿ ಬೇರೆಯಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಕಾಂತರಾಜ್, ಕವಿತಾ,  ತಿಪ್ಪೇಸ್ವಾಮಿ, ಕೆ.ಟಿ. ಹಳ್ಳಿ ನಾಗರಾಜ್, ಸ್ನೇಹಾ ನನ್ನಿವಾಳ ಇತರರು ಇದ್ದರು.

ಪ್ರತಿಕ್ರಿಯಿಸಿ (+)