ಗುರುವಾರ , ಫೆಬ್ರವರಿ 25, 2021
18 °C

‘ಮೊಬೈಲ್‌ ನಡಿಗೆಗೆ’ ನೂತನ ಮಾರ್ಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊಬೈಲ್‌ ನಡಿಗೆಗೆ’ ನೂತನ ಮಾರ್ಗ!

ಲಂಡನ್‌: ಪಾದಚಾರಿಗಳು ಮೊಬೈಲ್‌ನಲ್ಲಿ ಮಗ್ನರಾಗಿ ನಡೆಯುವುದರಿಂದ ಘಟಿಸುವ ಅಪಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ಬೆಲ್ಜಿಯಂ ನಗರದಲ್ಲಿ ಮೊಬೈಲ್‌ ನಡಿಗೆದಾರರಿಗೆ ಒಂದು ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿದೆ.ಬಿಳಿಯ ಬಣ್ಣದಿಂದ ಆ ರಸ್ತೆಯನ್ನು ಗುರುತಿಸಲಾಗಿದ್ದು, ರಸ್ತೆಯ ಮೇಲೆ ‘ಮೊಬೈಲ್‌ ನಡಿಗೆದಾರರ ಹಾದಿ’ ಎಂದು ಬರೆಯಲಾಗಿದೆ. ಮೊಬೈಲ್‌ನಲ್ಲಿ ಮಗ್ನರಾಗಿ ಇತರೆ ಪಾದಚಾರಿಗಳಿಗೆ ತೊಂದರೆಯಾಗಬಾರದು ಎಂದು ಈ ಮಾರ್ಗವನ್ನು ರೂಪಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.ಮೊಬೈಲ್‌ನಲ್ಲಿ ಮಗ್ನರಾಗಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು ಮೊಬೈಲ್‌ ಫೋನ್‌ ಹಾಳಾಗುವುದನ್ನು ತಪ್ಪಿಸುವ ಆಶಯದೊಂದಿಗೆ ಸ್ಮಾರ್ಟ್‌ಫೋನ್‌ ಕಂಪೆನಿಯಾದ ಎಂಲ್ಯಾಬ್‌ ಇದನ್ನು ನಿರ್ಮಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.