ಗುರುವಾರ , ಫೆಬ್ರವರಿ 25, 2021
29 °C
ಜೆಡಿಎಸ್‌ ಮುಖಂಡ ಎಚ್‌ಡಿಕೆ ಆರೋಪ

‘ಮೊಯಿಲಿ, ಮೋದಿಗೆ ರಿಲಯನ್ಸ್ ಕಮಿಷನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊಯಿಲಿ, ಮೋದಿಗೆ ರಿಲಯನ್ಸ್ ಕಮಿಷನ್‌’

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಅಭ್ಯರ್ಥಿ ವೀರಪ್ಪ ಮೊಯಿಲಿ ಹಾಗೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರಕ್ಕೆ ರಿಲ­ಯನ್ಸ್‌ ಕಂಪೆನಿಯಿಂದ ಹಣ ಹರಿದು­ಬರುತ್ತಿದೆ ಎಂದು ಜೆಡಿಎಸ್‌ ಅಭ್ಯರ್ಥಿ ಎಚ್‌.­ಡಿ.ಕುಮಾರಸ್ವಾಮಿ ಆರೋಪಿ­ಸಿದರು.ಬುಧವಾರ ಚುನಾವಣಾಧಿಕಾರಿಗೆ ನಾಮ­ಪತ್ರ ಸಲ್ಲಿಸಿದ ನಂತರ ಸುದ್ದಿ­ಗಾರರ ಜತೆ ಮಾತನಾಡಿ, ಮೊಯಿಲಿಗೆ ರಿಲ­ಯನ್ಸ್  ಸಾವಿರಾರು ಕೋಟಿ ರೂಪಾಯಿ  ಕಮಿಷನ್‌ ರೂಪದಲ್ಲಿ ನೀಡಿದೆ. ಬಿಜೆಪಿಯ ನರೇಂದ್ರ ಮೋದಿ ಟನ್‌­ಗಟ್ಟಲೇ ಹಣ ಸುರಿದು ಚುನಾ­ವಣಾ ಪ್ರಚಾರ ಕಾರ್ಯದಲ್ಲಿ ತೊಡಗಿ­ದ್ದಾರೆ ಎಂದರು.ಮೋದಿ ಹಾಗೂ ಮೊಯಿಲಿ ವಿರುದ್ಧ ಆಪ್‌ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ಮಾಡಿ­­ರುವ ಆರೋಪಗಳು ಸತ್ಯಾಂಶ­ದಿಂದ ಕೂಡಿವೆ ಎಂದರು. ಚಿಕ್ಕಬಳ್ಳಾಪುರದ ಜನರು ಮತ್ತು ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.­ದೇವೇಗೌಡ ಅವರ ಒತ್ತಾ­ಯಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿ­ಸಿ­ದ್ದೇನೆ ಹೊರತು ನನಗೆ ಸ್ಪರ್ಧಿ­ಸಬೇಕೆಂಬ ಅಭಿಲಾಷೆ ಇರಲಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ನನ್ನ ಎದುರಾಳಿಯಾಗಿದ್ದಾರೆ. ಅವರು ಏನೇನು ಮಾಡಿದ್ದಾರೆ ಎಂಬುದನ್ನು ಬಯಲು ಮಾಡುತ್ತೇನೆ. ವಾಸ್ತವಾಂಶ ತಿಳಿ­ಸುತ್ತೇನೆ ಎಂದು ಹೇಳಿದರು.ರಾಮನಗರ ಬಿಟ್ಟು ಚಿಕ್ಕಬಳ್ಳಾಪುರ­ದಿಂದ ಸ್ಪರ್ಧಿಸುತ್ತಿರುವುದಕ್ಕೆ ನನ್ನನ್ನು ಕೆಲವರು ಪಲಾಯನವಾದಿ ಎಂದು ಟೀಕಿ­ಸುತ್ತಿದ್ದಾರೆ. ಆದರೆ ನಾನು ಹೇಡಿ, ಪಲಾಯನ­ವಾದಿಯಲ್ಲ.ನನ್ನ ಪತ್ನಿ ಇಲ್ಲಿನ ಮಗಳು. ಹಾಗಾಗಿ ನಾನು ಚಿಕ್ಕ­ಬಳ್ಳಾಪುರದ ಅಳಿಯ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾ­ಸಕ್ಕೆ ಕಟ್ಟು ಬಿದ್ದು ಚುನಾವಣೆಯಲ್ಲಿ ಸ್ಪರ್ಧಿ­ಸಿದ್ದೇನೆ  ಎಂದು ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ಜೆಡಿಎಸ್ ಒಂದು ಅಥವಾ ಎರಡು ಸ್ಥಾನ ಮಾತ್ರವೇ ಗೆಲ್ಲು­ತ್ತದೆ ಎಂದು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಹಗುರವಾಗಿ ಮಾತ­ನಾಡಿ­ದ್ದಾರೆ. ಆದರೆ 10–12 ಸ್ಥಾನ ಗೆಲ್ಲು­ವುದು ಖಚಿತ ಎಂದು ವಿಶ್ವಾಸ ವ್ಯಕ್ತ­ಪಡಿ­ಸಿ­­ದರು. ಪತ್ನಿ ಅನಿತಾ, ಶಾಸಕರಾದ ಜ­ಮೀರ್‌ ಅಹ­ಮದ್‌ ಖಾನ್‌, ಎಂ.ಕೃಷ್ಣಾರೆಡ್ಡಿ, ಮಂಜು­ನಾಥ್ ಇದ್ದರು.‘ಭಾವೋದ್ರೇಕದ ಕಣ್ಣೀರು’

ಚಿಕ್ಕಬಳ್ಳಾಪುರ: ಜನರ ಪ್ರೀತಿ ಮತ್ತು ವಿಶ್ವಾಸ ಕಂಡು ನನಗೆ ಮತ್ತು ನನ್ನ ಕುಟುಂ­ಬದ ಸದಸ್ಯರಿಗೆ ಭಾವೋದ್ರೇಕದಿಂದ ಸಹಜವಾಗಿಯೇ ಕಣ್ಣೀರು ಬರು­ತ್ತದೆ. ಅವರು ತೋರುವ  ಅಭಿ­ಮಾನ ಮತ್ತು ಪ್ರೀತಿ ಪದಗಳಲ್ಲಿ ವರ್ಣಿಸ­ಲಾಗದೇ ಕಣ್ಣೀರು ಹರಿಯುತ್ತದೆ ಇದನ್ನೇ ವ್ಯಂಗ್ಯವಾಗಿ ಟೀಕಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.