ಚಿಕ್ಕಮಗಳೂರು: ಮೋದಿ ಅಲೆಯ ಸುನಾಮಿ ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜುಗೊಂಡಿದ್ದಾರೆ ಎಂದು ಭಾರತೀಯ ದಕ್ಷಿಣ ರೈಲ್ವೆ ವಲಯ ಪ್ರಯಾಣಿಕರ ಸೌಲಭ್ಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 13 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಪೂರ್ಣಗೊಳಿಸಿದ್ದು, ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಪಕ್ಷಕ್ಕೆ ಈ ಚುನಾವಣೆಯಲ್ಲಿ 20 ಸ್ಥಾನಗಳು ಲಭಿಸಲಿವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದು ಬೇರೆ ಪಕ್ಷದವರು ಹೇಳುತ್ತಿದ್ದರೆಯೇ ಹೊರತು ಕಾಂಗ್ರೆಸ್ ಪಕ್ಷದಲ್ಲಿ ಈ ಮಾತನ್ನು ಯಾರು ಆಡುತ್ತಿಲ್ಲ. ಒಂದು ವೇಳೆ ಪಕ್ಷ ಈ ಜನರಿಗೆ ಅನ್ಯಾಯ ಮಾಡಿದ್ದರೆ, ಅವರ್್ಯಾರು ಪಕ್ಷ ಬೆಂಬಲಿಸುತ್ತಿರಲಿಲ್ಲ ಎಂದರು.

ಬಿಜೆಪಿ ರಾಜ್ಯದಲ್ಲಿ ನಡೆಸಿದ ದುರಾಡಳಿತವನ್ನು ಯಾರು ಮರೆತ್ತಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಎಂದು ಬೇರೆ ಪಕ್ಷದವರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಖಂಡರು ನಿರ್ಧರಿಸಿದ್ದರು. ಆಗ ನಾವು ಹೇಳಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸುವ ಮೂಲಕ ಧರ್ಮಸಿಂಗ್ ಹೆಸರನ್ನು ಸೂಚಿಸುವ ಮೂಲಕ ದಲಿತರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದರು ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ದಲಿತರಿಗೆ ಉತ್ತಮ ಖಾತೆಗಳನ್ನು ಪಕ್ಷ ನೀಡಿದೆ. ಜೆಡಿಎಸ್ ಬ್ಲಾಕ್ ಮೇಲ್ ಮಾಡಲು ಉದಯಿಸಿದ ಪಕ್ಷವಾಗಿ ಕಾಣುತ್ತಿದೆ. ಅದರ ನಾಟಕ ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ನಂತರ ಲೋಕಸಭೆಗೆ ನಿಂತು ಗೆದ್ದ ಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜಕೀಯ ದೊಂಬರಾಟ ಆಡುತ್ತಿದ್ದಾರೆಂದು ಟೀಕಿಸಿದರು.

ಗುಜರಾತ್ನಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ದೇಶದಲ್ಲಿ 12ನೇ ಸ್ಥಾನವನ್ನು ಅಭಿವೃದ್ಧಿಯಲ್ಲಿ ಆ ರಾಜ್ಯ ಪಡೆದಿದೆ. ಅಲ್ಲಿ ನಡೆದಿರುವ ಅಭಿವೃದ್ಧಿ ದೇಶಕ್ಕೆ ಮಾದರಿಯಲ್ಲ. ಕಾರ್ಪೊರೇಟ್ ಕುಟುಂಬಗಳು ಆ ರೀತಿ ಬಿಂಬಿಸಲು ಮುಂದಾಗಿವೆ ಎಂದು ಹೇಳಿದರು.

ಸೇವಾ ದಳದ ರಾಜ್ಯ ಮುಖ್ಯ ಸಂಘಟಕ ಭೀಮಶಂಕರ್ ಮಾತನಾಡಿ, ಸೇವಾ ದಳದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆಂದರು. ರಾಜ್ಯ ಕಾರ್ಯದರ್ಶಿ ಹಾಲಪ್ಪಗೌಡ, ನವೀನ್, ಮಲ್ಲೇಶ್, ಸಿದ್ದರಾಮಯ್ಯ, ಆನಂದಕುಮಾರ್, ಹಿರೇಮಗಳೂರು ರಾಮಚಂದ್ರ, ನಗೀನಾ ಬಾನು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.