ಮಂಗಳವಾರ, ಜೂನ್ 22, 2021
27 °C

‘ಮೋದಿ, ರಾಹುಲ್ ಇಬ್ಬರೂ ಅಂಬಾನಿ ಚಮಚಾಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ರಿಲಯನ್ಸ್ ಇಂಡ­ಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿಯವರ ‘ಚಮಚಾ’­ಗಳು ಎಂದು ಅರವಿಂದ ಕೇಜ್ರಿವಾಲ್‌ ವ್ಯಂಗ್ಯವಾಡಿದ್ದಾರೆ.ಕಾನ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ‘ಮೋದಿ ಅಲೆ’ ಇದೆ ಎಂಬುದನ್ನು ನಿರಾಕರಿಸಿದ ಅವರು ಅದು ‘ಹಣ ನೀಡಿರುವ ಟಿವಿ ವಾಹಿನಿಗಳ ಸಮೀಕ್ಷೆಗಳಿಗೆ’ ಸೀಮಿತವಾಗಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹೇಳಿ­ದರು.ಬಿಜೆಪಿ ಸೋನಿಯ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವ­ರೊಡನೆ ಒಳ ಒಪ್ಪಂದ ಮಾಡಿಕೊಂ­ಡಿರುವಂತಿದೆ, ಹಾಗಾಗಿ ಬಿಜೆಪಿ ತಾನು ಅಧಿಕಾರ­ದಲ್ಲಿರುವ ರಾಜಸ್ತಾನದಲ್ಲಿ ವಾದ್ರ ಅವರ ಭೂಹಗರಣ ಕುರಿತು ಯಾವುದೇ ತನಿಖೆ ನಡೆಸಿಲ್ಲ ಎಂದು ಆರೋಪಿ­ಸಿದರು. ಕಾನ್ಪುರದಲ್ಲಿ ಕಾಂಗ್ರೆಸ್ ಕಾರ್ಯ­ಕರ್ತರು ಕೇಜ್ರಿವಾಲ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.