ಶನಿವಾರ, ಜನವರಿ 25, 2020
28 °C

‘ಯೋಗದಿಂದ ಸದೃಢ ಆರೋಗ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನ್ಯಾಯಾ ಧೀಶರು, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರಿಗಾಗಿ ರೋಟರಿ ಕ್ಲಬ್ ಕಲ್ಯಾಣ ನಗರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕ್ಕೆ ಸಂಬಂಧಿಸಿದಂತೆ ತಪಾ ಸಣೆ ಮಾಡಲಾಯಿತು. ಒಟ್ಟು 135 ಜನರು ಶಿಬಿರದ ಲಾಭ ಪಡೆದು ಕೊಂಡರು.ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಹಯೋಗ ದೊಂದಿಗೆ ರೋಟರಿ ಕ್ಲಬ್ ಹಮ್ಮಿಕೊಂಡಿರುವ ಆರೋಗ್ಯ ತಪಾಸಣಾ ಶಿಬಿರ ಮಾನವೀಯ ಸೇವಾ ಕಾರ್ಯದಲ್ಲೊಂದಾಗಿದೆ. ರೋಟರಿ ಸಂಸ್ಥೆ ಸಮಾಜಮುಖಿ ಸೇವಾ ಕಾರ್ಯಕ್ಕೆ ಹೆಸರುವಾಸಿಯಾಗಿದೆ ಎಂದು ಸ್ಥಳೀಯ ಜೆ.ಎಂ.ಎಫ್.ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಜಿ.ಕುಡವಕ್ಕಲಗೇರ ಪ್ರಶಂಸಿದರು.ಪ್ರತಿಯೊಬ್ಬ ವ್ಯಕ್ತಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯ ರಕ್ಷಣೆ ಮಾಡಿ ಕೊಳ್ಳಬೇಕು. ದೈಹಿಕ ಶ್ರಮದ ಕೊರತೆ ಯಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡದಂಥ ರೋಗಗಳು ಬರುತ್ತಿವೆ. ಹೀಗಾಗಿ ವ್ಯಾಯಾಮ, ಯೋಗದಂಥ ಚಟುವಟಿಕೆಗಳನ್ನು ದಿನಚರಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮನಸ್ಸು ವಿಕಾರಗೊಳ್ಳದ ರೀತಿಯಲ್ಲಿ ಸಂತರು, ಶರಣರ ಸತ್ಸಂಗದಲ್ಲಿ ಹಿತ ವಚನ ಪಡೆದುಕೊಂಡು ಮಾನಸಿಕ ಒತ್ತಡ ದೂರ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಡಾ.ಗಿರೀಶ ಕುಲಕರ್ಣಿ ‘ಮಧು ಮೇಹ’ ವಿಷಯ ಕುರಿತಾಗಿ ಉಪನ್ಯಾಸ ನೀಡಿ, ಈ ರೋಗದಿಂದ ಮುಕ್ತರಾಗ ಬೇಕು ಎಂದರೆ ವ್ಯಕ್ತಿ ಜೀವನ ದೃಷ್ಟಿ ಕೋನ ಮಾರ್ಪಾಡು ಮಾಡಿಕೊಳ್ಳ ಬೇಕು. ಮಧುಮೇಹ ರೋಗದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದರು.

ಡಾ.ಸಂಗಮೇಶ ಪಾಟೀಲ ‘ ಅಧಿಕ ರಕ್ತದೊತ್ತಡ’ ಕುರಿತು ಉಪನ್ಯಾಸ ನೀಡಿದರು

.

ರೋಟರಿ ಕ್ಲಬ್ ಅಧ್ಯಕ್ಷ ಡಾ.ಆರ್. ಆರ್.ನಾಯಕ ದೇವರಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಅಶ್ವಥನಾರಾಯಣ ಶಾಸ್ರ್ತಿ, ಸಹಾಯಕ ಸರಕಾರಿ ಅಭಿಯೋಜಕ ಆರ್.ಕೆ.ಕಾಳೆ, ಅಪರ ಸರ್ಕಾರಿ ವಕೀಲ ಎಸ್.ಜಿ. ಕುಲಕರ್ಣಿ ಆಗಮಿಸಿದ್ದರು. ಬಿ.ಜಿ.ನೆಲ್ಲಗಿ ವಕೀಲ ಸ್ವಾಗತಿಸಿ ನಿರೂಪಿಸಿ ದರು. ಎಸ್.ಬಿ.ಪಾಟೀಲ ದೇವರಹಿಪ್ಪರಗಿ ವಕೀಲ ವಂದಿಸಿದರು.

ಪ್ರತಿಕ್ರಿಯಿಸಿ (+)