ಮಂಗಳವಾರ, ಮಾರ್ಚ್ 9, 2021
18 °C

‘ಯೋಜನೆ ಒಳ್ಳೆಯದು, ಹಣ ವಿಳಂಬ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಯೋಜನೆ ಒಳ್ಳೆಯದು, ಹಣ ವಿಳಂಬ’

ಕನಕಗಿರಿ: ಜಿಲ್ಲಾ ಪಂಚಾಯಿತಿ  ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಒಳ್ಳೆಯದು, ಆದರೆ ಉದ್ಯೋಗ ಖಾತರಿ ಯೋಜ­ನೆಯ ₨ 4500 ಮೊತ್ತವನ್ನು ವಿಳಂಬ­ವಾಗಿ ನೀಡಲಾಗುತ್ತಿದೆ ಎಂಬ ಅಭಿಪ್ರಾ­ಯವನ್ನು ಇಲ್ಲಿನ ಫಲಾನುಭವಿಗಳು ತಿಳಿಸಿದ ಘಟನೆ ನಡೆಯಿತು.ಮಂಗಳವಾರ ವೈಯಕ್ತಿಕ ಶೌಚಾಲ­ಯಗಳ ಭೌತಿಕ ಮಟ್ಟ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿಯ ಗ್ರಾಮ ಸಂಪನ್ಮೂಲ ಸಂಯೋಜಕರಿಗೆ ಸಾಕಷ್ಟು ಜನ ದೂರಿದರು.ಶೌಚಾಲಯ ನಿರ್ಮಾಣ ಮಾಡಿಕೊ­ಳ್ಳುವ ಪರಿಶಿಷ್ಟ ಜಾತಿ, ಜನಾಂಗದವರಿಗೆ ₨ 15, 000 ಸಾವಿರ, ಇತರೆ ಜನಾಂಗ­ದ­ವ­ರಿಗೆ  ₨ 9200 ನೀಡಲಾಗುತ್ತಿದೆ, ಗ್ರಾಮ ಪಂಚಾಯಿತಿಯವರು ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ ₨ 4700 ಚೆಕ್ ನೀಡಿದ್ದಾರೆ, ಮಹಾತ್ಮ­ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ  ಖಾತರಿ ಯೋಜನೆಯ  ₨ 4500 ಹಣ ಖಾತೆಗೆ ಜಮಾವಣೆ­ಗೊಂಡಿಲ್ಲ ಎಂದು ಫಲಾನುಭವಿ ಹುಸೇನಸಾಬ ಲೈನದಾರ ಹೇಳಿದರೆ, ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹ ಧನ ₨ 5000 ಸಾವಿರ ಇನ್ನೂ ಮಂಜೂರಿಯಾಗಿಲ್ಲ ಎಂದು ಫಲಾನುಭವಿ ರಂಗಪ್ಪ  ದೂರಿದರು.ಚುನಾವಣೆಯ ನೀತಿ ಸಂಹಿತೆ ಸಹ ಈಗ ಖಾತರಿ ಹಣ ನೀಡಲು ಬ್ರೇಕ್ ಹಾಕಿದೆ, ಕಳೆದ ಎರಡು ತಿಂಗಳ ಹಿಂದೆ ಕಟ್ಟಿಸಿಕೊಂಡ ಶೌಚಾಲಯಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಫಲಾನುಭವಿ ಅವರು ದೂರಿದರು.ಇಲ್ಲಿನ ಗ್ರಾಮ ಪಂಚಾಯಿತಿ ಒಟ್ಟು 900 ಶೌಚಾಲಯ ನಿರ್ಮಾಣದ ಗುರಿ ಹಾಕಿಕೊಂಡಿದ್ದು 300ಕ್ಕೂ ಹೆಚ್ಚು  ಗುರಿ ಸಾಧಿಸಿದೆ ಎಂದು ಸಂಯೋಜಕ ಕರಿಯಣ್ಣ ಕಾಟಾಪುರ  ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.