ಮಂಗಳವಾರ, ಜೂನ್ 22, 2021
29 °C

‘ರಕ್ತದಾನ: ತಪ್ಪು ತಿಳಿವಳಿಕೆ ಸಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್‌: ‘ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಆಸರೆ ಫೌಂಡೇಷನ್‌ ಅಧ್ಯಕ್ಷ ಆರ್‌.ಕೃಷ್ಣರಾಜು ಹೇಳಿದರು.ತಾಲ್ಲೂಕಿನ ಚಂದಾಪುರದಲ್ಲಿ ಆಸರೆ ಫೌಂಡೇಷನ್‌, ಆರ್ಟ್‌ ಆಫ್‌ ಲಿವಿಂಗ್‌ ಮತ್ತು ಸೇವಾಭಾರತಿ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.‘ರಕ್ತದಾನದಿಂದ ಒಬ್ಬ ವ್ಯಕ್ತಿಯ ಜೀವ ಉಳಿಸಿದ ತೃಪ್ತಿ ದಾನಿಗಳಿಗೆ ದೊರಕುತ್ತದೆ. ಹಾಗಾಗಿ ರಕ್ತದಾನ ಶಿಬಿರಗಳಲ್ಲಿ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಬೇಕು’ ಎಂದರು.ಫೌಂಡೇಷನ್‌ನ ಉಪಾಧ್ಯಕ್ಷ ಬಿ.ಎಸ್‌.ನೀಲಕಂಠಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಶಾರದಾಶ್ರಮದ ರಾಮ­ಪ್ರಿಯಾಂಭ, ಬಿಜೆಪಿ ಮುಖಂಡ ನಾಗರಾಜರೆಡ್ಡಿ, ಚಂದಾಪುರ ಅಕ್ಕ ಬಳಗದ ಅಧ್ಯಕ್ಷೆ ಮಂಜುಳಾ, ಪ್ರತಿಷ್ಠಾನದ ಎಂ.ಕೃಷ್ಣಾರೆಡ್ಡಿ  ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.