ಬೆಳಗಾವಿ: ‘ಜಗತ್ತಿನಲ್ಲಿ ಹಲವಾರು ವೀರ –ಶೂರ ಮಹಾರಾಜರು ಆಗಿ ಹೋಗಿದ್ದಾರೆ. ಅವರಲ್ಲಿ ಜಾಣತಾ ರಾಜಾ ಶಿವಾಜಿ ಮಹಾರಾಜರು ವಿಶ್ವಮಾನ್ಯ ನಾಯಕರಾಗಿ ಗುರುತಿಸಲ್ಪಡುತ್ತಾರೆ’ ಎಂದು ಶಾಸಕ ಸಂಭಾಜಿ ಪಾಟೀಲ ಹೇಳಿದರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹ ಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಾತಿ, ಭಾಷೆಗಳ ಬೇಧ ಎಣಿಸದೇ ಮಹಿಳೆಯರಲ್ಲಿ ತಾಯಿಯನ್ನು ಕಾಣುತ್ತಿದ್ದ ರಾಷ್ಟ್ರ ರಕ್ಷಕ, ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದ ಶಿವಾಜಿ ಮಹಾರಾಜರ ಜೀವನ ನಮಗೆ ಆದರ್ಶ ಪ್ರಾಯವಾಗಿದೆ. ನಾವೆಲ್ಲ ಸಹೋದರ ಭಾವನೆಯಿಂದ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದ ಅವರು, ಶಿವಾಜಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಸಾಂಸ್ಕೃತಿಕ ಸಾಮರಸ್ಯಕ್ಕೆ ನಾಂದಿ ಹಾಡಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಯ.ರು.ಪಾಟೀಲ ಅವರು, ಶಿವಾಜಿಯ ಮೂಲ ನೆಲ ಕನ್ನಡವಾಗಿದ್ದು, ಅವರು ವಿಜಾಪುರ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಗ್ಗೆ ದಾಖಲೆಗಳಿವೆ. ಕನ್ನಡಿಗರೂ ಸಹ ಶಿವಾಜಿ ಮಹಾರಾಜರಿಗೆ ಮೊದಲಿನಿಂದಲೂ ಗೌರವ ಕೊಡುತ್ತಾ ಬಂದಿದ್ದಾರೆ.

ವಿಜಯನಗರದ ಅರಸರ ಆಡಳಿತ ಹಾಗೂ ಶಿವಾಜಿ ಮಹಾರಾಜರ ಆಡಳಿತದಲ್ಲಿ ಹಲವಾರು ಸಾಮ್ಯಗಳಿವೆ. ರಾಷ್ಟ್ರಭಕ್ತಿಯ ಮೂಲಕ ಜನಸಾಮಾನ್ಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಜನೋಪಯೋಗಿ ಯೋಜನೆಗಳನ್ನು ತಮ್ಮ ಆಡಳಿತದಲ್ಲಿ ಅವರು ಜಾರಿಗೆ ತಂದಿದ್ದರು. ಅವರ ಸಾಹಸಗಾಥೆ ಮನೆ ಮಾತಾಗಿದ್ದಾರೆ. ಛತ್ರಪತಿ ಶಿವಾಜಿ ದೇಶದ ಆಸ್ತಿಯಾಗಿದ್ದು, ಅವರು ಯಾವುದೇ ಭಾಷೆ ಹಾಗೂ ಪ್ರದೇಶಕ್ಕೆ ಸೀಮಿತವಾದವರಾಗಿರಲಿಲ್ಲ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಬಿ.ಘಾಟಗೆ ಅವರು ಉಪನ್ಯಾಸ ನೀಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಜನರಲ್ಲಿ ಸಾಂಸ್ಕೃತಿಕ ಬಾಂಧವ್ಯ ಮೊದಲಿನಿಂದಲೂ ಇದೆ. ಅದಕ್ಕೆ ಕಾರಣ ಶಿವಾಜಿ ಮಹಾರಾಜರು. ಪರಕೀಯರ ದಾಳಿ, ಬರಗಾಲಗಳು, ಸ್ವರಾಜ್ ಪರಿಕಲ್ಪನೆ ಅವರಲ್ಲಿ ಮೊಳಕೆಯೊಡಲು ಮೂಲ ಪ್ರೇರಣೆಯಾಗಿದ್ದವು. ಹರಹರ ಮಹಾದೇವ ಹಾಗೂ ಭಗವಾಧ್ವಜಗಳ ಮೂಲಕ ತಮ್ಮ ಸೈನಿಕರಲ್ಲಿ ಹುರುಪು, ಹುಮ್ಮಸ್ಸನ್ನು ತುಂಬಿದ್ದ ಅವರು ವಿಶ್ವಮಾನ್ಯ ನಾಯಕರೆಂಬುದಕ್ಕೆ ಕವಿ ರವೀಂದ್ರನಾಥ ಟಾಗೋರ ಅವರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಕವಿತೆ ಬರೆದಿದ್ದು ಸಾಕ್ಷಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಎನ್.ಜಯರಾಂ ಉಪಸ್ಥಿತಿದ್ದರು. ವಿನಾಯಕ ಮೋರೆ ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಎಸ್.ಯು. ಜಮಾದಾರ ನಿರೂಪಿಸಿ, ವಂದಿಸಿದರು.

ಭವ್ಯ ಮೆರವಣಿಗೆ:- ಇದಕ್ಕೂ ಮೊದಲು ಶಿವಾಜಿ ಪಾರ್ಕ್ನಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಶಿವಾಜಿ ಮಹಾರಾಜರ ಭಾವಚಿತ್ರ ಹಾಗೂ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ಜಾಂಚ್ ಪಥಕ, ವೇಷಧಾರಿಗಳು, ಕರಡಿ ಮಜಲು ಸೇರಿದಂತೆ 20 ಕ್ಕೂ ಹೆಚ್ಚು ವಿವಿಧ ಕಲಾತಂಡಗಳು ಭಾಗವಹಿಸಿದ್ದವು.

ಸಮಾರಂಭಕ್ಕೆ ಜನರ ಕೊರತೆ: ಶಿವಾಜಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಕೇವಲ ಕಲಾ ತಂಡಗಳು ಮಾತ್ರ ಕಂಡುಬಂದವು. ನಗರದಲ್ಲಿ ಮರಾಠಿ ಭಾಷಿಕರು ಇದ್ದರೂ ಸಹ ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ. ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲೂ ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಿರಲಿಲ್ಲ.

ಮೆರವಣಿಗೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಂಜಯ ಪಾಟೀಲ ಮರಾಠಿಯಲ್ಲಿ ಮಾತನಾಡಿದರೆ, ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಕನ್ನಡದಲ್ಲಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.