ಬುಧವಾರ, ಮಾರ್ಚ್ 3, 2021
19 °C

‘ವಿಷ್ಣುವರ್ಧನ್‌ ಪ್ರಬುದ್ಧ ನಟರಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿಷ್ಣುವರ್ಧನ್‌ ಪ್ರಬುದ್ಧ ನಟರಲ್ಲ’

ಮುಂಬೈ: ನಟ ವಿಷ್ಣುವರ್ಧನ್‌ ಪ್ರಬುದ್ಧ ನಟರಲ್ಲ ಎಂದು ಬಾಲಿವುಡ್‌ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅವರು ಟ್ವೀಟ್‌ ಮಾಡುವ ಮೂಲಕ ಮತ್ತೊಂದು  ವಿವಾದ ಹುಟ್ಟು ಹಾಕಿದ್ದಾರೆ.ನಟ ಕಿಚ್ಚ ಸುದೀಪ್‌ ಅವರನ್ನು ಹೊಗಳುವ ಭರದಲ್ಲಿ ವಿಷ್ಣುವರ್ಧನ್‌ ಅವರ ನಟನೆ ಪ್ರಬುದ್ಧವಾದುದಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಈ ಹಿಂದೆ  ತಮಿಳಿನ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರನ್ನು ಗೇಲಿ ಮಾಡಿ ವಿವಾದಕ್ಕೆ ತುತ್ತಾಗಿದ್ದರು.ಸುದೀಪ್‌ ಅಭಿನಯದ ಕೋಟಿಗೊಬ್ಬ –2 ಸಿನಿಮಾವನ್ನು ನೋಡಿದ ಬಳಿಕ ಟ್ವೀಟ್‌ ಮಾಡಿರುವ ವರ್ಮಾ, ‘ಸುದೀಪ್‌ ನಿಮ್ಮ ಕೋಟಿಗೊಬ್ಬ–2 ಸಿನಿಮಾ ನೋಡಿದೆ, ನಿಮ್ಮ ನಟನೆಯನ್ನು ವಿಷ್ಣುವರ್ಧನ್‌ಗೆ ಹೋಲಿಸಿದರೆ, ವಿಷ್ಣುವರ್ಧನ್‌ ಪ್ರಬುದ್ಧರಲ್ಲ ಅನ್ನಿಸುತ್ತಾರೆ. ಇದನ್ನು ಅವರ ಅಭಿ ಮಾನಿಗಳು ಒಪ್ಪಿಕೊಳ್ಳದಿದ್ದರೆ ಅವರು ಅಪ್ರಬುದ್ಧರು ಎಂದು ಟ್ವೀಟ್‌ ಮಾಡಿದ್ದಾರೆ.ವರ್ಮಾ ಅವರ ಹೊಗಳಿಕೆಗೆ ಟ್ವೀಟ್  ಮೂಲಕ ಪ್ರತಿಕ್ರಿಯಿಸಿರುವ ಸುದೀಪ್‌, ‘ನಾನು ವಿಷ್ಣು ಸರ್‌ ಅವರಿಗೆ ಯಾವ ರೀತಿಯಲ್ಲೂ ಸರಿ ಸಾಟಿ ಇಲ್ಲ’ ಎಂದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವರ್ಮಾ ಅವರು ವಿಷ್ಣುವರ್ಧನ್‌ ಬಗ್ಗೆ  ಮಾಡಿರುವ ಟ್ವೀಟ್‌ ಅನ್ನು ತಮ್ಮ ಟ್ವಿಟ್ಟರ್‌ ಪೇಜ್‌ನಿಂದ ತೆಗೆದು ಹಾಕಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.