ಶನಿವಾರ, ಫೆಬ್ರವರಿ 27, 2021
27 °C

‘ಸಂಗೀತದಿಂದ ಆರೋಗ್ಯ ಸುಧಾರಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಗೀತದಿಂದ ಆರೋಗ್ಯ ಸುಧಾರಣೆ’

ಕನಕಪುರ: ಕಲೆ ಎಂಬುದು ಕಠಿಣ ಪರಿ­ಶ್ರಮದಿಂದ ಒಲಿಸಿಕೊಳ್ಳಬೇಕಾಗದ ವಿದ್ಯೆ. ಅದಕ್ಕೆ ನಿರಂತರ ಅಭ್ಯಾಸ ಅವಶ್ಯ ಎಂದು  ಸಂಗೀತ  ಶಿಕ್ಷಕಿ  ಶ್ರೀದೇವಿ ಹೇಳಿದರು.  ರೋಟರಿ ಭವನದಲ್ಲಿ ಶಾರದಾ ನೃತ್ಯ ಶಾಲೆಯ ವಾರ್ಷಿಕೋತ್ಸವ ಸಮಾರಂ­ಭ­ದಲ್ಲಿ ಭಾಗವಹಿಸಿ ಮಾತನಾಡಿದ ಅವರು,  

  ‘ಕಲೆಯೆಂಬುದು ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಗುರುತಿಸಿ ಹೊರ­ಹೊಮ್ಮಿಸಲು ಕಠಿಣ ಶ್ರಮ ಹಾಕಿದರೆ ನಿಜವಾಗಿಯೂ ಒಬ್ಬ ಪ್ರತಿಭಾವಂತ ಕಲೆಗಾರನಾಗಬಹುದು ಎಂದರು.   ಯೋಜನ ಸಂಯೋಜಕ ಸಿದ್ದೇಗೌಡ ಮಾತನಾಡಿ,‘ನಿರಂತರ ಅಭ್ಯಾಸದಿಂದ ಮನುಷ್ಯ ಎತ್ತರಕ್ಕೆ ಬೆಳೆಯಲು ಸಾಧ್ಯ. ಯಾವುದೇ ರಂಗದಲ್ಲಿ ಪರಿಶ್ರಮವಿಲ್ಲದೆ ಹೆಸರು ಗಳಿಸಲು ಸಾಧ್ಯವಿಲ್ಲ’ ಎಂದರು.ಸಂಗೀತ ಮನುಷ್ಯನಿಗೆ ಆರೋಗ್ಯವನ್ನು ನೀಡುತ್ತದೆ. ಮನಷ್ಯನ ಮನಸ್ಸು ಪ್ರಫುಲ್ಲವಾಗಿರಲು ಸಂಗೀತ ಒಂದು ಸಾಧನ ಎಂದು  ಹೇಳಿದರು.ರಂಗಕಲಾ ಶಿಕ್ಷಕ ಜಗದೀಶ್ವ­ರಾ­ಚಾರ್ಯ ಮಾತನಾಡಿ, ‘ಕಲೆ ಎಂಬುದು ಪ್ರತಿಯೊಬ್ಬರಲ್ಲೂ ಇರುವ ಒಂದು ಗುಪ್ತ ಪ್ರತಿಭೆ. ಅದನ್ನು ಹೆಕ್ಕಿ ತೆಗೆಯುವ  ಉತ್ತಮ ಶಿಕ್ಷಕರ ಅಗತ್ಯತೆ ಇದೆ ಎಂದರು. ಶಿಕ್ಷಕಿ ಹೇಮಲತಾ ಎಸ್.ಕೆ, ಸಮಾಜ ಸೇವಕ ಮಾಯಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.