ಶುಕ್ರವಾರ, ಜೂನ್ 25, 2021
22 °C

‘ಸಂಧಾನದಿಂದ ಪ್ರಕರಣ ಇತ್ಯರ್ಥಕ್ಕೆ ಲೋಕ ಅದಾಲತ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಗುರುತರವಲ್ಲದ ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ರಾಜಿ ಸಂಧಾನದ ಮೂಲಕ ಬಗೆಹರಿಸಿ ಕೊಳ್ಳಲು ಲೋಕ ಅದಾಲತ್ ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾದ ಎಚ್.ಎಸ್.ಕಮಲ ಅಭಿಪ್ರಾಯ ಪಟ್ಟರು.

ಇಲ್ಲಿನ ನ್ಯಾಯಾಲಯದಲ್ಲಿ ಶುಕ್ರವಾರ ತಾಲ್ಲೂಕು ಕಾನೂ ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯ ದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು, ದೇಶ ಆರ್ಥಿಕವಾಗಿ ಅಭಿವೃದ್ಧಿಯಾ ದಂತೆ ನ್ಯಾಯಾಲಯಕ್ಕೆ ಬರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ, ಕಾನೂನು ಸೇವಾ ಪ್ರಾಧಿಕಾರದವತಿಯಿಂದ ಜನ ಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಿ ಪ್ರಕರಣಗಳನ್ನು ಸಂಧಾನ ಮೂಲಕ ಬಗೆಹರಿಸಲು ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.ಬ್ಯಾಂಕ್‌ನಿಂದ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡದಿದ್ದಾಗ ಪ್ರಕರಣ ಗಳು ನ್ಯಾಯಾಲಯದ ಮೇಟ್ಟಿಲೇರು ತ್ತವೆ. ಸಾಲದ ಮೇಲೆ ಬಡ್ಡಿ, ಚಕ್ರಬಡ್ಡಿ ಬೆಳೆದು ಸಾಲಗಾರರು ಸಾಲದಲ್ಲಿಯೇ ಉಳಿಯುವ ಸ್ಥಿತಿ ನಿರ್ಮಾಣ ವಾಗುತ್ತದೆ. ಹಾಗಾಗಿ ಬ್ಯಾಂಕ್ ವ್ಯವಸ್ಥಾಪಕರು ಬಡ್ಡಿ ರಿಯಾಯಿತಿ ತೋರಿಸಿ ಪ್ರಾಥಮಿಕ ಹಂತದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿದರೆ ಸಾಲ ಮರುಪಾವತಿಯಾಗಲು ಸಾಧ್ಯ. ಇದರಿಂದ ನ್ಯಾಯಾಲಕ್ಕೆ ಬರುವ ದಾವೆ ಗಳು ಕಡಿಮೆಯಾಗಲಿವೆ. ಜೀವನಾಂಶ ದ ಪ್ರಕರಣ ಮತ್ತು ದೌರ್ಜನ್ಯದ ಪ್ರಕ ರಣಗಳನ್ನು ಪೊಲೀಸರ ಮಧ್ಯಸ್ಥಿಕೆ ಯಲ್ಲಿ ಬಗೆಹರಿಸಿದರೆ ಸಾಕಷ್ಟು ಕುಟುಂಬಗಳು ಉಳಿಸಲು ಸಾಧ್ಯ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಮಂಜು ನಾಥ ನಾಯಕ್ ಮಾತನಾಡಿ, ಲೋಕ್ ಅದಾಲತ್ ಮೂಲಕ ನ್ಯಾಯಾಲಯ ದಲ್ಲಿರುವ ಪ್ರಕರಣಗಳನ್ನು ಬಗೆಹರಿ ಸಲಾಗುತ್ತದೆ. ಮೊದಲನೇ ಹಂತದ ಲೋಕ್ ಅದಾಲತ್‌ನಲ್ಲಿ ಈ ನ್ಯಾಯಾ ಲಯದ ವ್ಯಾಪ್ತಿಯಲ್ಲಿ ಈಗಾಗಲೇ 75 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇಲ್ಲಿ 230 ಸಿವಿಲ್ ಪ್ರಕರಣಗಳು,430 ಕ್ರಿಮಿನಲ್ ಪ್ರಕರಣಗಳಿವೆ, 99 ಚೆಕ್ ಬೌನ್ಸ್‌ ಪ್ರಕರಣಗಳು, 28 ಬ್ಯಾಂಕ್ ದಾವೆಗಳಿಗೆ. ಬ್ಯಾಂಕು ದಾವೆಗಳಲ್ಲಿ ಸಾಕಷ್ಟನ್ನು ಪ್ರಾಥಮಿಕ ಹಂತದಲ್ಲೇ ರಾಜಿ ಮಾಡಬಹುದಾಗಿದ್ದು ಇದಕ್ಕೆ ವಕೀಲರು, ಕಕ್ಷಿದಾರರು, ಬ್ಯಾಂಕುಗಳ ಸಹಕಾರ ಅಗತ್ಯ ಎಂದು ಹೇಳಿದರು. ಸಿವಿಲ್ ನ್ಯಾಯಾಧೀಶ ಎಚ್.ಕೆ.ನವೀನ್  ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಕೆ.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ವಕೀಲ ಎಚ್.ಎಸ್. ಲೋಹಿತಾಶ್ವಾಚಾರ್, ಪೊಲೀಸ್ ಇನ್ಸ್ ಪೆಕ್ಟರ್ ಬಿ.ಸದಾ ನಂದ್‌, ತಹಶೀಲ್ದಾರ್ ಜೆ,ಕೃಷ್ಣ ಮೂರ್ತಿ, ವಲಯ ಅರಣ್ಯಾಧಿ ಕಾರಿಗಳಾದ ರಂಗಸ್ವಾಮಿ, ಕೇಶವ ಮೂರ್ತಿ, ಸಿಡಿಪಿಓ ಜ್ಯೋತಿಲಕ್ಷ್ಮಿ, ವಕೀಲರಾದ ಚಂದ್ರಶೇಖರ್, ದಿವಾಕರ್, ವೆಂಕಟೇಶ್ ಮೂರ್ತಿ, ಯಶೋಧ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.