ಮಂಗಳವಾರ, ಜನವರಿ 21, 2020
18 °C

‘ಸಕ್ಕಿಂಗ್ ಯಂತ್ರದ ಜಾಗೃತಿ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆನ್ನಬೆಟ್ಟು (ಮೂಲ್ಕಿ): ಕೇವಲ ನಗರದಲ್ಲಿ ಮಾತ್ರ ಸೀಮಿತವಾಗಿದ್ದ ಸಕ್ಕಿಂಗ್ ಯಂತ್ರವನ್ನು ಮುಂದಿನ ದಿನದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ವಿತರಿಸಲಾಗುವುದು. ಪ್ರಥಮ ಹಂತವಾಗಿ ಮೆನ್ನ­ಬೆಟ್ಟು ಗ್ರಾಮ ಪಂಚಾಯಿತಿಗೆ ನೀಡಿದ್ದು ಈ ಬಗ್ಗೆ ಜನ ಜಾಗೃತಿಯೂ ಅಗತ್ಯವಾಗಿದೆ ಎಂದು ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.ಕಿನ್ನಿಗೋಳಿ ಬಳಿಯ ಮೆನ್ನಬೆಟ್ಟು ಗ್ರಾಮ ಪಂಚಾ­ಯಿತಿಗೆ ಸಕ್ಕಿಂಗ್ ಯಂತ್ರವನ್ನು ಬುಧವಾರ ಹಸ್ತಾಂತ­ರಿಸಿದ ಅವರು ಈ ಬಗ್ಗೆ ಗ್ರಾಮ ಪಂಚಾಯಿತಿಯ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡಿದರು.ಸಕ್ಕಿಂಗ್ ಯಂತ್ರದ ಬಗ್ಗೆ ಅದರ ಪ್ರವರ್ತಕರಾದ ಮೈಸೂರು ಭಗೀರಥ ಸಂಸ್ಥೆಯ ಕುಲಕರ್ಣಿ ಅವರು ಯಂತ್ರದ ಚಾಲನೆಯ ಮಾಹಿತಿ ನೀಡಿದರು.ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾ­ರ್ದನ ಕಿಲೆಂಜೂರು ಗ್ರಾಮದ ಅಭಿವೃದ್ಧಿಯಲ್ಲಿ ತೊಡ­ಕಾಗಿರುವ ಹಲವು ಸಮಸ್ಯೆಗಳನ್ನು ಹಾಗೂ ಕಟೀಲು ಕ್ಷೇತ್ರದಲ್ಲಿ ಆಗಬೇಕಾಗಿರುವ ಕಾಮ­ಗಾರಿ­ಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಸದಸ್ಯ ಕೇಶವ ಕರ್ಕೇರ, ಜಿಲ್ಲಾ ನೆರವು ಘಟಕದ ಮಂಜುಳಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಇನ್ನಿತರರು ಹಾಜರಿದ್ದರು.ಕಳೆದ ಕೆಲವು ತಿಂಗಳುಗಳ ಹಿಂದೆ ಮೆನ್ನಬೆಟ್ಟು ಗ್ರಾಮದ ಕಿನ್ನಿಗೋಳಿಯ ಹೋಟೆ­ಲ್‌ನ ಶೌಚಾಲ­ಯದ ಗುಂಡಿಯಲ್ಲಿ ಕಾರ್ಮಿಕನೊಬ್ಬ ಮಾನವ ಶ್ರಮ­ದ ಮೂಲಕ ತ್ಯಾಜ್ಯವನ್ನು ತೆಗೆಯು­ತ್ತಿದ್ದಾಗ ಗುಂಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಬಳಿಕ ಸಕ್ಕಿಂಗ್ ಯಂತ್ರಕ್ಕೆ ಮೆನ್ನಬೆಟ್ಟು ಗ್ರಾಮ ಪಂಚಾಯಿ­ತಿಯು ಜಿಲ್ಲಾ ಪಂಚಾಯಿತಿ ಮೂಲಕ ಬೇಡಿಕೆ ಸಲ್ಲಿಸಿತ್ತು.

ಪ್ರತಿಕ್ರಿಯಿಸಿ (+)