ಮಂಗಳವಾರ, ಜನವರಿ 28, 2020
25 °C

‘ಸಮಾಜದ ಸ್ವಾಸ್ಥ್ಯಕ್ಕೆ ಸಂಗೀತ ಶಾಲೆ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ:‘ಮನುಷ್ಯ ಮಾನಸಿಕ ಆರೋಗ್ಯ ನಿವಾರಣಗೆ ಸಂಗೀತವೇ ಔಷಧಿ. ಆದ್ದರಿಂದ ಪ್ರತಿಯೊಬ್ಬರು ಸಂಗೀತ ಅಭಿರುಚಿ ಬೆಳೆಸಿಕೊಳ್ಳಬೇಕು. ಅಲ್ಲದೇ, ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರತಿಯೊಂದು ಊರುಗಳಲ್ಲಿ ಸಂಗೀತ ಶಾಲೆ ತೆರೆಯ ಬೇಕು’ ಎಂದು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀ ಆಶಯ ವ್ಯಕ್ತಪಡಿಸಿದರು.ಅನು-–ಮೇಘನಾ ಸಂಗೀತ ವಿದ್ಯಾಲಯ ಮತ್ತು ಕನ್ನಡ ಮ್ತತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಇತ್ತೀಚೆಗೆ ಇಲ್ಲಿನ ಸಿದ್ಧದೇವಪುರದ ಬಸವಣ್ಣದೇವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಗೀತ ಆಲಿಸುವಿಕೆಯಿಂದ ಮನಸ್ಸು ಪ್ರಫುಲ್ಲಗೊಳ್ಳತ್ತದೆ. ಯುವ ಕರು ಪಾಶ್ಚಾತ್ಯ ಸಂಗೀತದ ಗೀಳು ಹಚ್ಚಿಕೊಳ್ಳದೇ, ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಬೇಕು’ ಎಂದರು.ಇದೇ ಸಂದರ್ಭದಲ್ಲಿ ಗಾಯನ ಹಾಡಿದ ಅಕ್ಕಮಹಾದೇವಿ ಹಾನಗಲ್‌ ಅವರ ಶಾಸ್ತ್ರೀಯ ಸಂಗೀತಕ್ಕೆ ಪಂಡಿತ ಹುಸೇನಸಾಬ್‌ ನದಾಫ್ ಮತ್ತು ನೀಲಕಂಠಪ್ಪ ಬಡಿಗೇರ ತಬಲಾ ಸಾಥ್ ನೀಡಿದರು. ನಗರಸಭೆ ಸದಸ್ಯೆ ಗಂಗಮ್ಮ ಎರೇಶಿಮಿ ಅಧ್ಯಕ್ಷತೆ ವಹಿಸಿದ್ದರು.  ನಗರಸಭೆ ಸದಸ್ಯ ಸುರೇಶ ದೊಡ್ಡಮನಿ,  ಸಿದ್ದಲಿಂಗಯ್ಯ ಹಾಲಯ್ಯನವರಮಠ  ಭಾಗವಹಿಸಿದ್ದರು. ಆರ್.ಸಿ.ನಂದಿಹಳ್ಳಿ ನಿರೂಪಿಸಿ, ವಂದಿಸಿದರು.

ಪ್ರತಿಕ್ರಿಯಿಸಿ (+)