ಶನಿವಾರ, ಜನವರಿ 18, 2020
20 °C
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮಂಡಳಿ ಚುನಾವಣೆಗೆ ನಾಮಪತ್ರ

‘ಸಮುದಾಯದ ಒಳಿತಿಗೆ ಸ್ಪರ್ಧೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ವಾರ್ತೆ

ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮಂಡಳಿಗೆ ಜ. 5ರಂದು ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವನ್ನು ರಾಜ­ಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನಡೆಸುವ ಉದ್ದೇಶದಿಂದ ನಿರ್ದೇ­ಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಬಿಜೆಪಿ ಮುಖಂಡ ಬ್ಯಾಟರಂಗೇಗೌಡ ಇಲ್ಲಿ ಸೋಮವಾರ ತಿಳಿಸಿದರು.ನಿರ್ದೇಶಕ ಮಂಡಳಿಗೆ ಜಿಲ್ಲೆಯಿಂದ ಇಬ್ಬರು ಆಯ್ಕೆ ಆಗಬೇಕಾಗಿದೆ. ಕಳೆದ 6 ತಿಂಗಳಿಂದ 15 ಸಾವಿರ ಮತ­ದಾರರನ್ನು ಖುದ್ದು ಭೇಟಿ ಮಾಡಿ ಮತ ಯಾಚಿಸಿದ್ದೇನೆ ಎಂದು ಪತ್ರಿಕಾಗೋಷ್ಠಿ­ಯಲ್ಲಿ ಹೇಳಿದರು.ಒಕ್ಕಲಿಗರ ಸಂಘ ಸೇವಾ ಕ್ಷೇತ್ರ-­ವಾಗಿದ್ದು, ಮತದಾರರು ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗುವು­ದಿಲ್ಲ ಎಂಬ ಭಾವನೆ ಇದೆ. ಚುನಾ­ವಣೆಗಾಗಿ ಹಣ ಖರ್ಚು ಮಾಡುವ­ವರಿಗೆ ನಿಜವಾಗಿಯೂ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಹಣವನ್ನು ಸಮಾಜಕ್ಕೆ ದಾನ ಮಾಡಬೇಕು ಎಂದು ಸಲಹೆ ನೀಡಿದರು.ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಮತದಾರರಿದ್ದು, ತುಮಕೂರು ನಗರ­ದಲ್ಲಿ 5400, ಕುಣಿಗಲ್‌ 5700, ತುರುವೇಕೆರೆ 3400, ತಿಪಟೂರು 800, ಗುಬ್ಬಿ 1000, ಚಿಕ್ಕನಾಯ­ಕನಹಳ್ಳಿ 45, ಶಿರಾ 550, ಮಧುಗಿರಿ 1600, ಕೊರಟಗೆರೆ 1200, ಪಾವಗಡದಲ್ಲಿ 80 ಮತದಾರರು ಇದ್ದಾರೆ.

ಪ್ರತಿಕ್ರಿಯಿಸಿ (+)