ಬೆಂಗಳೂರು: ಸರ್ಕಾರಿ ವಸತಿಯನ್ನು ನಿಗದಿತ ಅವಧಿಯಲ್ಲಿ ಖಾಲಿ ಮಾಡದೇ ಇರುವ ನೌಕರರ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಕೈಗೆತ್ತಿಕೊಳ್ಳಬಹುದೇ?
‘ಇಲ್ಲ, ಸಿಎಟಿಗೆ ಆ ಅಧಿಕಾರವೇ ಇಲ್ಲ’ ಎಂದು ಹೈಕೋರ್ಟ್ನ ವಿಭಾಗೀಯ ಪೀಠ ಇತ್ತೀಚೆಗೆ ನೀಡಿರುವ ಆದೇಶವೊಂದರಲ್ಲಿ ಸ್ಪಷ್ಟಪಡಿಸಿದೆ.

ಏನು ಪ್ರಕರಣ?: ಡಿ.ಎನ್. ಸರೋಜಾ ದೇವಿ ಅವರು ಬೆಂಗಳೂರಿನ ಯಲಹಂಕದಲ್ಲಿರುವ ವಾಯುಪಡೆ ಕೇಂದ್ರದಲ್ಲಿ ಸ್ಟೆನೊ ಆಗಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಹೆಬ್ಬಾಳದಲ್ಲಿರುವ ವಾಯುಪಡೆ ತರಬೇತಿ ಕೇಂದ್ರದಲ್ಲಿ ಆಪ್ತ ಕಾರ್ಯದರ್ಶಿಯಾಗಿ ಬಡ್ತಿ ದೊರೆಯಿತು. ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವವರು, ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ವರ್ಗಾವಣೆ ಹೊಂದಿದ ತಕ್ಷಣ ಮೊದಲ ಕೇಂದ್ರದಲ್ಲಿ ಅವರಿಗೆ ನೀಡಿದ್ದ ಮನೆಯನ್ನು ತೆರವುಗೊಳಿಸಬೇಕು.

ಆದರೆ ಸರೋಜಾದೇವಿ ಅವರು ಹೆಬ್ಬಾಳ ಕೇಂದ್ರದ ಮನೆಗೆ ಸ್ಥಳಾಂತರಗೊಳ್ಳಲಿಲ್ಲ. ತಮ್ಮ ಪುತ್ರನಿಗೆ ಆರೋಗ್ಯದ ಸಮಸ್ಯೆ ಇದೆ ಎಂಬ ಕಾರಣ ನೀಡಿ, ವಾಸ್ತವ್ಯ ಬದಲಾಯಿಸಲು ಎರಡು ತಿಂಗಳ ಕಾಲಾವಕಾಶ ಕೋರಿದರು. ಇದಕ್ಕೆ ಯಲಹಂಕ ಕೇಂದ್ರದ ಅಧಿಕಾರಿಗಳು ‘ಅಸ್ತು’ ಎಂದರು. ಆದರೆ ಸರೋಜಾದೇವಿ ಅವರು ಎರಡು ತಿಂಗಳ ನಂತರವೂ, ವಾಸ್ತವ್ಯ ಸ್ಥಳಾಂತರಿಸಲಿಲ್ಲ.

ಇದರಿಂದ ಅಸಮಾಧಾನಗೊಂಡ ಅಧಿಕಾರಿಗಳು, ‘ಅವಧಿ ಮೀರಿ ಈ ಮನೆಯಲ್ಲಿ ವಾಸಿಸುವುದು ಅಕ್ರಮ. ಸಾರ್ವಜನಿಕ ಸ್ಥಳಗಳ ಅಕ್ರಮ ವಾಸ್ತವ್ಯ ಕಾಯ್ದೆಯ ಅಡಿ ನಿಮ್ಮ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ನೋಟಿಸ್ ನೀಡಿದರು. ಇದನ್ನು ಪ್ರಶ್ನಿಸಿ ಸರೋಜಾದೇವಿ ಅವರು ಸಿಎಟಿಯ ಬೆಂಗಳೂರು ಪೀಠದ ಮೊರೆ ಹೋದರು.

ಅರ್ಜಿಯ ವಿಚಾರಣೆ ನಡೆಸಿದ ಸಿಎಟಿ ಪೀಠ, ‘ಹೊಸ ಮನೆ ದೊರೆಯುವವರೆಗೂ ಈಗಿರುವಲ್ಲಿಯೇ ವಾಸಿಸಲು ಅವಕಾಶ ನೀಡಿ’ ಎಂದು ಯಲಹಂಕ ಕೇಂದ್ರದ ಅಧಿಕಾರಿಗಳಿಗೆ 2013ರ ಫೆಬ್ರುವರಿ 6ರಂದು ಆದೇಶಿಸಿತು. ಈ ಆದೇಶ ಪ್ರಶ್ನಿಸಿ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠ ಇದರ ವಿಚಾರಣೆ ನಡೆಸಿತು.

ಸರ್ಕಾರಿ ನಿವಾಸದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವ್ಯಕ್ತಿಯನ್ನು ಅಲ್ಲಿಂದ ಎತ್ತಂಗಡಿ ಮಾಡುವಾಗ ಸಾರ್ವಜನಿಕ ಸ್ಥಳಗಳ ಅಕ್ರಮ ವಾಸ್ತವ್ಯ ಕಾಯ್ದೆ ಅನ್ವಯ ಆಗುತ್ತದೆ. ಸರ್ಕಾರಿ ನೌಕರನೊಬ್ಬ ಇಂಥ ಮನೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ಸಿಎಟಿಗೆ ಇಲ್ಲ.

ಆಡಳಿತ ನ್ಯಾಯಮಂಡಳಿ ಕಾಯ್ದೆಯ ಅಡಿ ಅಸ್ತಿತ್ವಕ್ಕೆ ಬಂದಿರುವ ಸಿಎಟಿಗೆ, ಅಕ್ರಮ ವಾಸ್ತವ್ಯ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ವಿಭಾಗೀಯ ಪೀಠ ಈಚೆಗೆ ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.
‘ಆದರೆ ಸರೋಜಾದೇವಿ ಅವರ ಪುತ್ರನ ಆರೋಗ್ಯ ಸ್ಥಿತಿ ಪರಿಗಣಿಸಿ, ಅವರಿಗೆ ಆಗಸ್ಟ್ 31ರವರೆಗೆ ಈಗಿರುವ ಮನೆಯಲ್ಲೇ ವಾಸಿಸಲು ಅವಕಾಶ ನೀಡಬೇಕು’ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.