ಬುಧವಾರ, ಜನವರಿ 29, 2020
29 °C

‘ಸರ್ದಾರ್‌ ಪಟೇಲ್‌ ಅಪ್ರತಿಮ ನಾಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ದೇಶ ಕಂಡ ಅಪ್ರತಿಮ ನಾಯಕ. ಭಾರತವನ್ನು ವಿಭಜನೆ ಮಾಡ­ದಂತೆ ಬ್ರಿಟಿಷ್‌ ಭಾರತದ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್‌ ಮೌಂಟ್‌ ಬ್ಯಾಟನ್‌ಗೆ ಆಗಲೇ ಎಚ್ಚರಿಕೆ ನೀಡಿದವರು ಪಟೇಲ್‌. ಒಂದು ವೇಳೆ, ಪಟೇಲರೇ ದೇಶದ ಪ್ರಥಮ ಪ್ರಧಾನ­ಮಂತ್ರಿಯಾಗಿದ್ದರೆ, ಭಾರತ ಜಗತ್ತಿ­ನಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರ­ವಾಗಿ­ರುತ್ತಿತ್ತು’ ಎಂದು ಧನ್ಯೋಸ್ಮಿ ಯೋಗ ಕೇಂದ್ರದ ಗುರುಗಳಾದ ವಿನಾಯಕ ತೆಲಗೇರಿ ಅಭಿಪ್ರಾಯಪಟ್ಟರು.ನಗರದಲ್ಲಿ ಭಾರತೀಯ ಜನತಾ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಏಕತಾ ರ್‍್ಯಾಲಿ’ಯ ನಂತರ ಮೂರು ಸಾವಿರ ಮಠದ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿ­ಯಾಗಿ ಅವರು ಮಾತನಾಡಿ­ದರು. ‘ಪಟೇಲರು ಕೋರ್ಟ್‌ನಲ್ಲಿ ತಮ್ಮ ಕಕ್ಷಿದಾರರ ಪರ ಕೋರ್ಟ್‌ನಲ್ಲಿ ವಾದ ಮಂಡಿ­­ಸು­ತ್ತಿರುವ ಸಂದರ್ಭದಲ್ಲಿ ಒಂದು ಟೆಲಿಗ್ರಾಂ ಬಂದಿತು. ಅದರಲ್ಲಿ ಅವರ ಪತ್ನಿ ಜವೇರಿಬಾಯಿ ಪಟೇಲ್‌ ನಿಧನರಾದ ಸುದ್ದಿ ಇತ್ತು. ಈ ವಿಷಯ ತಿಳಿದಾಗಲೂ ವಿಚಲಿತರಾಗದ ಪಟೇಲ್‌, ವಾದ ಮಂಡಿಸಿ, ಅದರಲ್ಲಿ ಗೆಲುವು ಸಾಧಿಸಿದರು’ ಎಂದರು.ಆರ್‌.ಪಿ. ನವಲೆ ಹಾಜರಿದ್ದರು. ಸತೀಶ ಶೇಜ­ವಾಡಕರ ನಿರೂಪಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗ­ರಾಜ ಪಾಟೀಲ ನಿರೂಪಿಸಿದರು.  ಸಿದ್ದು ಮೊಗಲಿಶೆಟ್ಟರ್, ರಾಜು ಜರತಾರ­­ಗರ್,­ ­ಗೋಪಾಲ ಬದ್ದಿ, ಸುದರ್ಶನ್ ದಿನ್ನಿ­­ಹಳ್ಳಿ,  ಡಿ.ಕೆ. ಚವ್ಹಾಣ್, ಉಮಾ ಅಕ್ಕೂರ, ರಂಜನಾ ಬಂಕಾಪುರ,ಸುಧೀರ ಸರಾಫ್,  ಮಹೇಂದ್ರ ಕೌತಾಳ, ಶಿವು ಮೆಣಸಿನಕಾಯಿ ಹಾಗೂ  ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯ­ಕರ್ತರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.ವಲ್ಲಭಭಾಯಿ ಪಟೇಲ್‌ರಾಷ್ಟ್ರೀಯ ಏಕತಾ ವತಿಯಿಂದ ಆಯೋ­ಜಿ­­ಸಲಾಗಿದ್ದ ರ್‍್ಯಾಲಿ  ಚನ್ನಮ್ಮ ವೃತ್ತ­ದಿಂದ ಆರಂಭ­ಗೊಂಡು, ಲ್ಯಾಮಿಂಗ್ಟನ್‌ ರಸ್ತೆ, ಕೊಪ್ಪಿ­ಕರ್‌ ರಸ್ತೆ, ದುರ್ಗದ ಬೈಲ್‌, ದಾಜಿ­ಬಾನ್‌ ಪೇಟ್‌ ಮಾರ್ಗ­ವಾಗಿ ಮೂರು­ಸಾವಿರ ಮಠದ ಬಳಿ ಸಮಾರೋಪಗೊಂಡಿತು.

ಪ್ರತಿಕ್ರಿಯಿಸಿ (+)