ಮಂಗಳವಾರ, ಜನವರಿ 21, 2020
29 °C

‘ಸುಗಮ ಸಂಚಾರಕ್ಕೆ ಪಪಂ ಆಡಳಿತದಿಂದ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುನಗುಂದ: ನಗರದಲ್ಲಿ ಹಾಯ್ದು ಹೋದ ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿ 20 ರ ಪ್ರಮುಖ ರಸ್ತೆಯ ಬದಿಯಲ್ಲಿ ತಳ್ಳುಗಾಡಿ ವ್ಯಾಪಾರಿಗಳಿಂದ ನಡೆಯುವ ರಸ್ತೆ ಅತಿಕ್ರಮಣ ತಡೆಯಲು ಸೋಮವಾರ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ನಿರ್ದಿಷ್ಟ ಗೆರೆ ಹಾಕುವ ಮೂಲಕ ಕ್ರಮ ಕೈಗೊಳ್ಳಲಾಯಿತು.ನಗರದ ಚೆನ್ನಮ್ಮ ವೃತ್ತದಿಂದ ಬಸ್ ನಿಲ್ದಾಣದ ವರೆಗೆ ತಳ್ಳುಗಾಡಿ, ಹಣ್ಣು ಮತ್ತು ಇತರೆ ಸಣ್ಣಪುಟ್ಟ ವ್ಯಾಪಾರಿಗಳು ನಿತ್ಯ ತಮ್ಮ ಅಂಗಡಿಗಳನ್ನು ದಾರಿಯಲ್ಲಿ ಹಚ್ಚಿ ವಾಹನ ಮತ್ತು ಜನ ಸಂಚಾರಕ್ಕೆ ಅಡತಡೆ ಮಾಡುತ್ತಿದ್ದರು. ಈಗಾಗಲೇ ಅವರಿಗೆ ಅನೇಕ ಬಾರಿ ಹೇಳಿದರೂ ಅವರು ಸ್ಪಂದಿಸಿದ್ದಿಲ್ಲ. ಅನಿವಾರ್ಯ ಗೆರೆ ಹಾಕಲಾಗಿದೆ. ಈ ಗೆರೆ ದಾಟಿ ಬಂದರೆ ಅನಿವಾರ್ಯ ದಂಡ ಹಾಕುವುದು ಮತ್ತು ಬಿಗಿಯಾದ ಶಿಸ್ತು ಕ್ರಮಗಳನ್ನು ಅನುಸರಿಸಬೇಕಾಗುವುದು ಎಂದು ಅಂಗಡಿಕಾರರಿಗೆ ತಿಳಿಸಲಾಯಿತು.ಸ್ಥಳದಲ್ಲಿ ಪಪಂ ಮುಖ್ಯಾಧಿಕಾರಿ ಅರವಿಂದ ಜಮಖಂಡಿ ಮತ್ತು ಪಿಎಸ್ಐ ಜಗದೀಶ ಗೌಳಿ ಇದ್ದು ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ಹೇಳಿದರು. ಅದರಂತೆ ಸಾರ್ವಜನಿಕರು ತಮ್ಮ ವಾಹನಗಳನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಸಹಕರಿಸಬೇಕು. ಈ ರಸ್ತೆಯಲ್ಲಿ ಬರುವ ಪ್ರಮುಖ ಬ್ಯಾಂಕ್ ಮತ್ತು ದೊಡ್ಡ ಪ್ರಮಾಣದ ಅಂಗಡಿಕಾರರು ಕೂಡ ತಮ್ಮ ಗ್ರಾಹಕರಿಗೆ ವಾಹನ ನಿಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)