ಬುಧವಾರ, ಜನವರಿ 29, 2020
27 °C

‘ಸ್ವಚ್ಛತೆಗೆ ಸಹಕಾರ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರ ಪ್ರದೇಶಗಳು ವೇಗವಾಗಿ ಬೆಳೆಯುತ್ತಿರುವುರಿಂದ ತ್ಯಾಜ್ಯ ವಸ್ತುಗಳ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಬಗೆಹರಿಸಿ ನಗರ ವನ್ನು ಸ್ವಚ್ಛ ಹಾಗೂ ಆರೋಗ್ಯಕರ ವಾಗಿಡಲು ನಾಗರಿಕರ ಸಹಕಾರ ಅವಶ್ಯವಾಗಿದೆ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಶೋಭಾ ಗಜಕೋಶ ಅಭಿಪ್ರಾಯಪಟ್ಟರು. ನಗರದ ಶಿವಾನಂದ ವಿಜ್ಞಾನ ಕಾಲೇಜಿನ ಇಕೋ ಕ್ಲಬ್‌ ಆಶ್ರಯದಲ್ಲಿ ಜರುಗಿದ ‘ತ್ಯಾಜ್ಯ ವಸ್ತುಗಳ ನಿರ್ವಹಣೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮೂಲದಲ್ಲಿಯೇ ತ್ಯಾಜ್ಯ ವಸ್ತುಗಳನ್ನು ವಿಂಗಡಿಸಿ ನಗರಸಭೆಯ ಕಸ ವಿಲೇವಾರಿ ವಾಹನಗಳಿಗೆ ನೀಡುವು ದರಿಂದ ಸಮಸ್ಯೆಯನ್ನು  ಅಲ್ಪ ಪ್ರಮಾಣದಲ್ಲಾದರೂ ಪರಿಹರಿಸಲು ಸಾಧ್ಯ ಎಂದು ಹೇಳಿದರು.ಇಕೋ ಕ್ಲಬ್‌ ಕಾರ್ಯಕ್ರಮವನ್ನು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ  ಬಿ.ಎಸ್.ಗೌಡರ ಅವರು ಸಸಿ ನೆಡುವುದರ ಮೂಲಕ ಪ್ರಾರಂಭಿಸಿದರು. ಬಳಿಕ ಮಾತನಾಡಿ ಪರಿಸರ ಮಾಲಿನ್ಯದಿಂದ ಜೀವರಾಶಿಗೆ ನೇರವಾದ ಹಾನಿಇದೆ ಎಂದು ಹೇಳಿದರು.

ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ನಿಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.ಪರಿಸರಕ್ಕೆ ಸಂಬಂಧಿಸಿದಂತೆ ಪ್ರೊ.ಕೌಸಲ್ಯ ರಡ್ಡೇರ, ಸುಸ್ಮಿತ ಜೋಶಿ, ಹಾಗೂ ಮೇಘಾ ಕಾಜಗಾರ ಅವರು ರಸಪ್ರಶ್ನೆ ಸ್ಪರ್ಧೆ  ಆಯೋಜಿಸಿದ್ದರು.ಪ್ರಾಚಾರ್ಯ ಎಸ್.ವಿ.ಸಂಕನೂರ ಮಾತನಾಡಿ, ಪರಿಸರ ರಕ್ಷಣೆಗೆ ವಸ್ತುಗಳನ್ನು ಮಿತವಾಗಿ ಬಳಸುವುದು, ಪುನರ್ಬಳಕೆ ಮಾಡುವುದು ಮತ್ತು ಮರು ಉತ್ಪಾದನೆ ಮಾಡುವಂತಹ ತ್ರಿಸೂತ್ರಗಳನ್ನು ಬಳಸಲು ತಿಳಿಸಿದರು.  ಜಿಲ್ಲಾ ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ  ವಿ.ಬಿ.ಹುಬ್ಬಳ್ಳಿ, ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿಗಳಾಗಿ ಪದೋನ್ನತಿ ಹೊಂದಿದ  ಶಂಕರ ಹೂಗಾರ ಹಾಗೂ ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ  ಶೋಭಾ ಗಜಕೋಶ ಅವರನ್ನು ಸನ್ಮಾನಿಸಲಾಯಿತು.ಸಂಗೀತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.  ಪ್ರೊ.ಸುಸ್ಮಿತ ಜೋಶಿ ಸ್ವಾಗತಿಸಿದರೆ ಪ್ರೊ.ಕೌಸಲ್ಯ ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಮೇಘಾ ಕಾಜಗಾರ ವಂದಿಸಿದರು. ಮುರಳೀಧರ ಸಂಕನೂರ ನಿರೂಪಿಸಿದರು.

ಪ್ರತಿಕ್ರಿಯಿಸಿ (+)