ಬುಧವಾರ, ಜೂನ್ 16, 2021
21 °C
‘ಪ್ರಜಾವಾಣಿ’ ಸಹಯೋಗ: ಉಚಿತ ಪ್ರವೇಶ

‘ಹೂಡಿಕೆದಾರರ ಸಮಾವೇಶ’ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಪ್ರಜಾವಾಣಿ’ ಹಾಗೂ ಸಿಡಿಎಸ್‌ಎಲ್‌, ಮುಂಬೈ ಷೇರು ವಿನಿಮಯ ಕೇಂದ್ರ, ಐಸಿಐಸಿಐ ಸೆಕ್ಯೂ­ರಿಟಿಸ್‌, ಬಿಒ ಪ್ರೊಟೆಕ್ಷನ್‌ ಫಂಡ್‌ ಸಂಸ್ಥೆಗಳ ಸಹಯೋಗದಲ್ಲಿ ಹೂಡಿಕೆ­ದಾರರ ಸಮಾವೇಶವು ಇದೇ 22ರಂದು ಸಂಜೆ 4.30ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣ­ದಲ್ಲಿ ನಡೆಯಲಿದೆ.ಷೇರು ಮಾರುಕಟ್ಟೆಯ ವಿವಿಧ ವಿಚಾರಗಳ ಬಗ್ಗೆ ಹಾಗೂ ಹೂಡಿಕೆಯ ಸಂದರ್ಭ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಆಯಾ ಕ್ಷೇತ್ರದ ತಜ್ಞರು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಿದ್ದಾರೆ.ಕೇಂದ್ರ ಸರ್ಕಾರದ ಯೋಜನೆ­ಯಾದ ರಾಜೀವ್‌ ಗಾಂಧಿ ಈಕ್ವಿಟಿ ಉಳಿತಾಯ ಯೋಜನೆ (ಆರ್‌ಜಿಇ­ಎಸ್‌ಎಸ್‌) ಹಾಗೂ ಷೇರು ಮಾರು­ಕಟ್ಟೆ­­ಯಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಮಾಹಿತಿ ದೊರೆಯಲಿದೆ.ಮುಂಬೈ ಷೇರು ವಿನಿಮಯ ಕೇಂದ್ರದ ವ್ಯವಸ್ಥಾಪಕ ಬದರಿ ನಾರಾ­ಯಣ್‌, ಐಸಿಐಸಿಐ ಸೆಕ್ಯೂರಿಟಿಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಅಭಿಷೇಕ್‌ ದೇಶಪಾಂಡೆ, ಕಂಪೆನಿಯ ತರಬೇತು­ದಾರ ಮಂಜುನಾಥ್‌ ಶಿಗ್ಗಾವ್‌ ಹಾಗೂ ಸಿಎಸ್‌ಡಿಎಸ್‌ನ ಬೆಂಗಳೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಸಿ.ಎಸ್‌. ಹರೀಶ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳ­ಲಿದ್ದಾರೆ.ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಹೂಡಿಕೆ­ಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸು­ವವರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0836–2372081 ಇಲ್ಲವೇ ಮೊಬೈಲ್‌ 94496­–­73067 ಸಂಪರ್ಕಿಸ­ಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.