ಗುರುವಾರ , ಜನವರಿ 23, 2020
19 °C

‘ಹೊಟ್ಟೆಪಾಡಿಗೆ ಹಗ್ಗ ಮೇಲಿನ ನಡಿಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಪ್ಪನ್‌ಪೇಟೆ: ಶಾಲೆ ಮೆಟ್ಟಿಲು ಹತ್ತಿಲ್ಲ, ಭಾಷೆ ಬರುವುದಿಲ್ಲ  ಇಡೀ ಕುಟುಂಬದ ಬದುಕು ಸಾಗುತ್ತಿರುವುದು ಮಾತ್ರ ಹಗ್ಗದ ಮೇಲೆಯೇ! ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಎಂದಿಗೂ ಕೈಕೊಟ್ಟಿಲ್ಲ! ಇದು ಬಡ ಕುಟುಂಬವೊಂದರ ದೈನಂದಿನ ದಾರುಣ ಬದುಕು.ಮೂಲತಃ ಛತ್ತೀಸ್‌ಗಡದ ಮಂಜನಾವರ್ ಎಂಬ ಹಳ್ಳಿಯೊಂದರ ಲಲಿತ್‌ ಹಾಗೂ ಸಬೀತಾ ದಂಪತಿಗೆ  ಸತ್ಪಾಲ್‌ (7) ಕಲ್ಪನಾ (3) ಎಂಬ ಪುತ್ರಿಯರು. .ಇಡೀ ಕುಟುಂಬದ ಆಸರೆಯೇ ಹಿರಿಯ ಮಗಳು ಸತ್ಪಾಲ್‌. ತಂದೆ ತಾಯಿಯ ಮಮತೆಯಲ್ಲಿ  ಶಾಲೆಯಲ್ಲಿ ಚಿಣ್ಣರೊಂದಿಗೆ ಆಟವಾಡುವ ವಯಸ್ಸಿಗೆ ವಿರುದ್ಧವಾಗಿ ಈಕೆ ಸಂಸಾರದ ನೊಗ ಹೊತ್ತಿದ್ದಾಳೆ.ನಮ್ಮನಾಳುವ ಸರ್ಕಾರಗಳು ಅಧಿಕಾರದ ಲಾಲಸೆಗೆ  ಕಡು ಬಡವರಿಗಾಗಿ ಹಲವು ಯೋಜನೆ ಜಾರಿಗೊಳಿಸಿವೆ. ಆದರೆ ದೇಶ ಸುತ್ತುವ ಅಲೆಮಾರಿ ಜನಾಂಗಗಳಿಗೆ ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ. ಅಲೆಮಾರಿ ಜನಾಂಗದವರಿಗೂ ಸರ್ಕಾರ ಅಗತ್ಯ ಸೌಕರ್ಯ ನೀಡಬೇಕು ಎನ್ನುವುದು ಸ್ಥಳೀಯರ ಅನಿಸಿಕೆ.

ಪ್ರತಿಕ್ರಿಯಿಸಿ (+)