ಯುವ ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ನಟ ಗಣೇಶ್ರನ್ನು ಸಿನಿಮಾ ಕಣ್ಣೋಟದಿಂದ ಹೊರತಾಗಿ ನೋಡುವುದಾದರೆ ಇಬ್ಬರೂ 15 ವರುಷಗಳಿಂದ ಉತ್ತಮ ಸ್ನೇಹಿತರು. ‘ಮುಂಗಾರು ಮಳೆ’ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ಗುಬ್ಬಿ, ಆ ನಂತರ ‘ಮಳೆಯಲಿ ಜೊತೆಯಲಿ’ ಎನ್ನುವ ಚಿತ್ರಕ್ಕೆ ಆ್ಯಕ್ಷನ್ಕಟ್ ಹೇಳಿ ಗಣೇಶ್ ಅವರನ್ನು ಸೋನೆಮಳೆಯಲ್ಲಿ ತೋಯಿಸಿದ್ದರು.

ಇಂದು ತೆರೆಗೆ ಬರುತ್ತಿರುವ ‘ದಿಲ್ರಂಗೀಲಾ’ ನಾಲ್ಕು ವರುಷಗಳ ತರುವಾಯ ಇಬ್ಬರನ್ನು ಬೆಸೆದಿರುವ ಮತ್ತೊಂದು ಚಿತ್ರ. ‘ದಿಲ್ ರಂಗೀಲಾ’ ಎನ್ನುವ ತನ್ನ ಗೂಡಿನ ಬಗ್ಗೆ ಗುಬ್ಬಿ ಹೇಳಿಕೊಂಡ ಸಂಕ್ಷಿಪ್ತ ಕಥೆ ಇಲ್ಲಿದೆ.

ನಿಮ್ಮ ಹಿಂದಿನ ಸಿನಿಮಾಗಳಿಗಿಂತ ‘ದಿಲ್ರಂಗೀಲಾ’ ಚಿತ್ರ ಯಾವ ರೀತಿ ಭಿನ್ನ?
ನಾನು ನಿರ್ದೇಶಿಸಿರುವ ಎಲ್ಲ ಸಿನಿಮಾಗಳಲ್ಲಿ ನನಗೆ ಹೆಚ್ಚು ಇಷ್ಟವಾದ ಚಿತ್ರ ಇದು. ಆರಂಭದಿಂದಲೂ ತೃಪ್ತಿ ಸಿಕ್ಕಿದೆ. ಈ ಭಾವ ನನ್ನ ವೃತ್ತಿಜೀವನದಲ್ಲಿ ಮೊದಲನೆಯದ್ದು. ಚಿತ್ರ ಚೆನ್ನಾಗಿ ಬೆಳೆಯುತ್ತಿದ್ದರೆ ನಿರ್ದೇಶಕನಿಗೆ ಮುಂದುವರೆಯಲು ಧೈರ್ಯ ಇಮ್ಮಡಿಸುತ್ತದೆ. ಈ ಅನುಭವ ನನಗೆ ‘ದಿಲ್ರಂಗೀಲಾ’ದಲ್ಲಿ ಆಗಿದೆ.

ನಾಲ್ಕು ವರುಷಗಳ ನಂತರ ಇಬ್ಬರೂ ಕೂಡಿದ್ದೇವೆ. ಆದರೆ ಎಲ್ಲಿಯೂ ಮಳೆ ಸುರಿಸಿಲ್ಲ. ಚಿತ್ರದ ಬಗ್ಗೆ ನಾನು ಹೇಳುವುದಕ್ಕಿಂತ ನೋಡಿದರೆ ಭಿನ್ನತೆ ಕಾಣಿಸುತ್ತದೆ. ನನ್ನ ಮತ್ತು ಗಣೇಶ್ ಅವರ ಈ ಮುಂಚಿನ ಚಿತ್ರಗಳನ್ನು ನೋಡಿದವರು ‘ದಿಲ್ ರಂಗೀಲಾ’ವನ್ನು ಭಿನ್ನವಾಗಿಯೇ ಗುರ್ತಿಸುತ್ತಾರೆ ಎನ್ನುವ ವಿಶ್ವಾಸವಿದೆ.

‘ದಿಲ್ ರಂಗೀಲಾ’ ಚಿತ್ರಕಥೆಯ ಹಾದಿ ಏನು?
ಯುವ ಮನಸ್ಸುಗಳ ಆಸೆ, ಕನಸು, ಕನವರಿಕೆಯೇ ಇಲ್ಲಿ ಪ್ರಧಾನ. ಹ್ಯೂಮರಸ್ ಲವ್ ಸ್ಟೋರಿ. ಗಣೇಶ್, ಅಂತರರಾಷ್ಟ್ರೀಯ ಚೆಫ್ ಪಾತ್ರ ನಿರ್ವಹಿಸಿದ್ದಾರೆ. ಅವರು ಪ್ರವಾಸ ಹೋದಾಗ ಘಟಿಸುವ ಸನ್ನಿವೇಶಗಳು ಚಿತ್ರಕ್ಕೆ ಜೀವಾಳ.

ಒಂದು ಹಂತದಲ್ಲಿ ದುಡ್ಡು ಮತ್ತು ಪ್ರೀತಿಯ ಆಯ್ಕೆ ವಿಚಾರ ಇಲ್ಲಿ ಬರುತ್ತದೆ. ಗಣೇಶ್ ಹಾವಭಾವ (ಸ್ಟೈಲ್), ಬಾಡಿ ಶೇಪ್ ಭಿನ್ನವಾಗಿದೆ. ಅದಕ್ಕಾಗಿ ವರ್ಕ್ಔಟ್ ಸಹ ಮಾಡಿದ್ದಾರೆ. ಗೋವಾದಲ್ಲಿ ಚಿತ್ರದ ಮೊದಲ ಭಾಗ ಸಾಗುತ್ತದೆ. ರಚಿತಾ ಮತ್ತು ಗಣೇಶ್ ಜೋಡಿಯ ಮೊದಲ ಚಿತ್ರ ಇದು. ಈ ಚಿತ್ರದ ತರುವಾಯ ಮತ್ತೆ ಈ ಜೋಡಿಯನ್ನು ನೋಡಲು ಪ್ರೇಕ್ಷಕ ಇಷ್ಟಪಡುತ್ತಾನೆ.

ಈ ಪ್ರೇಮಕಥೆಯಲ್ಲಿ ಪ್ರಯೋಗಾತ್ಮಕತೆ ಏನಾದರೂ ಇದೆಯೇ?
ಖಂಡಿತಾ. ಸಿನಿಮಾದ ಆರಂಭವೇ ಬೇರೆ ರೀತಿ ಇದೆ. ಪ್ರೇಕ್ಷಕನಿಗೆ ಹೊಸ ರೀತಿ ಅನುಭೂತಿ ನೀಡುವ ವಿಶ್ವಾಸ ನನಗಿದೆ. ಜನರ ನಿರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ತಾಂತ್ರಿಕತೆ, ಕಥೆಯ ನಿರೂಪಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಪ್ರಯೋಗಾತ್ಮಕವಾಗಿ ಚಿತ್ರ ನಿಲ್ಲುತ್ತದೆ.

ಇತ್ತೀಚೆಗೆ ಗಣೇಶ್ಗೆ ಹೆಚ್ಚು ಚಿತ್ರಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಈ ಸಿನಿಮಾ ಅವರಿಗೆ ಮತ್ತೊಂದು ಬ್ರೇಕ್ ಕೊಡುತ್ತದೆಯೇ?
ಗಣೇಶ್ ನಟನೆ ಚೆನ್ನಾಗಿದೆ. ನಟನೆಗೆ ಅನುಗುಣವಾಗಿ ಚಿತ್ರಕಥೆಯೂ ಚೆನ್ನಾಗಿರಬೇಕು. ಇತ್ತೀಚೆಗೆ ‘ಶ್ರಾವಣಿ ಸುಬ್ರಹ್ಮಣ್ಯ’ ಅವರಿಗೆ ಹೆಸರು ತಂದು ಕೊಟ್ಟಿತ್ತು. ‘ದಿಲ್ ರಂಗೀಲಾ’ದಲ್ಲಿ ಒಳ್ಳೆಯ ಕಥೆ ಇದೆ. ಗಣೇಶ್ಗೆ ಒಳ್ಳೆಯ ಇಮೇಜ್ ಕೊಡುತ್ತದೆ.

ಈ ಚಿತ್ರದಲ್ಲಿ ನೀವು ಗುರ್ತಿಸಿದಂತೆ ನಿಮ್ಮ ಅಪ್ಡೇಟ್ ಏನು?
ನಿರ್ದೇಶಕರ ಪ್ರಬುದ್ಧತೆಯ ಬೆಳವಣಿಗೆ ಕಾಣಿಸುತ್ತದೆ. ಕಥೆ ನಿರೂಪಣೆಯ ಶೈಲಿಯೂ ಬೇರೆ ರೀತಿಯಲ್ಲಿದೆ. ಕ್ಯಾಮೆರಾ, ಶಾಟ್ ಹೀಗೆ ತಾಂತ್ರಿಕವಾಗಿ ತುಸು ಹೆಚ್ಚಿನದಾಗಿಯೇ ಅಪ್ಡೇಟ್ ಆಗಿದ್ದೇನೆ.

ಲವರ್ ಬಾಯ್ ಇಮೇಜಿನ ಗಣೇಶ್ಗೆ ಈ ಪ್ರೇಮಕಥೆ ಹತ್ತರೊಳಗೊಂದು ಎನ್ನುವಂತಾಗುವುದಿಲ್ಲವೇ?
ಈ ಚಿತ್ರದ ಕಥೆ ಹುಟ್ಟಿದ್ದು ಗಣೇಶ್ಗಾಗಿಯೇ. ಗೋಲ್ಡನ್ ಸ್ಟಾರ್ನನ್ನು ನೆನಪಿಸಿಕೊಂಡು ನಾಲ್ಕು ತುಣುಕು ಕಥೆ ಬರೆದಿದ್ದು. ಆ ಕಥೆ ಬೆಳೆಯಿತು. ನಾನು ಸಾಮಾನ್ಯವಾಗಿ ಮಾಡುವುದು ಇದೇ ರೀತಿ. ನಾನು ಇವರಿಗೆ ಚಿತ್ರ ಮಾಡಬೇಕು ಅಂದುಕೊಂಡೇ ನಾನು ಕಥೆ ಬರೆದು ಸಿನಿಮಾ ಮಾಡುವುದು.

ಪುಸ್ತಕ ಓದಿದಾಗ, ಪತ್ರಿಕೆ ಓದಿದಾಗ ಹೊಸತನಗಳು ಸಿಕ್ಕುತ್ತದೆ. ಆ ವಿಷಯದ ಮೇಲೆ ಕೆಲಸ ಮಾಡುತ್ತೇನೆ. ಸೆಟ್ನಲ್ಲಿ ಚಿತ್ರಕಥೆಯನ್ನು ತಿದ್ದುವುದು ತೀಡುವುದಕ್ಕಿಂತ ಆ ಕ್ಷಣದ ಟ್ರೆಂಡ್ಗೆ ಅನುಗುಣವಾಗಿ ಬೆಳೆಸಬೇಕು ಎನ್ನುವುದರತ್ತ ನನ್ನ ಗಮನ.

ನಾಯಕನನ್ನು ದೃಷ್ಟಿಯಲ್ಲಿಟ್ಟುಕೊಂಡು ಕಥೆ ಹೆಣೆಯುವ ಕಸರತ್ತು ನಿಮ್ಮ ಸಿನಿಮಾ ಪರಿಭಾಷೆಯೇ?
ಈ ನಾಯಕನಿಗೆ ಈ ಕಥೆ ಮಾಡಿದರೆ ಚೆನ್ನ ಎನ್ನುವುದನ್ನು ಮನವರಿಕೆ ಮಾಡಿಕೊಂಡೇ ಕಥೆ ಬರೆದು ನಿರ್ದೇಶನ ಮಾಡುತ್ತೇನೆ. ಆ್ಯಕ್ಷನ್ಗೆ ಹೆಚ್ಚು ಮೀಸಲಾಗಿದ್ದ ವಿಜಯ್ ಅವರನ್ನು ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಚಿತ್ರದಲ್ಲಿ ಭಿನ್ನವಾಗಿ ಹಾಸ್ಯ ಪಾತ್ರಕ್ಕೂ ಹೊಂದಿಸಲಾಯಿತು.

ಒಬ್ಬ ನಟನನ್ನು ಭಿನ್ನವಾಗಿಯೇ ಚಿತ್ರಿಸುವ ಯತ್ನ ನನ್ನದು. ಗಣೇಶ್ ಅವರನ್ನು ನಾನು ಇಲ್ಲಿ ಭಿನ್ನವಾಗಿ ಹೇಗೆ ತೋರಿಸಬಹುದು ಎನ್ನುವುದೇ ನನಗೆ ಮುಖ್ಯವಾಗುವುದು. ಕಥೆ ಮೇಲೆ ಕೆಲಸ ಮಾಡಲು ನನಗೆ ಕನಿಷ್ಠ ಮೂರ್ನಾಲ್ಕು ತಿಂಗಳಾದರೂ ಅಗತ್ಯ. ಆ ಕಾರಣ ವರುಷಕ್ಕೆ ಒಂದು ಚಿತ್ರ ಮಾಡುತ್ತೇನೆ.

ನಿಮ್ಮ ಚಿತ್ರಗಳು ಪ್ರೀತಿ– ಪ್ರೇಮ, ಮನರಂಜನೆಯ ಹೂರಣದಲ್ಲಿವೆ. ಮುಂದೆಯೂ ಇದೇ ಹಾದಿಯೇ?
ನಾನು ಸಂದೇಶ ಕೊಡಲು ಚಿತ್ರ ಮಾಡುವುದಿಲ್ಲ. ಸಿನಿಮಾ ಅಂದರೆ ಮೂಲತಃ ಮನರಂಜನೆ ಎಂದುಕೊಂಡವನು. ಪೈಸಾ ವಸೂಲಿ ಅನ್ನುತ್ತಾರಲ್ಲಾ...ಆ ರೀತಿ. ಚಿತ್ರಮಂದಿರದ ಆಚೆ ಬಂದರೂ ನಾವು ಕೊಡುವ ದುಡ್ಡಿಗೆ ವ್ಯಾಲ್ಯೂ ಇರಬೇಕು, ಪ್ರೇಕ್ಷಕ ಖುಷಿಯಲ್ಲಿರಬೇಕು.

ಮುಂದಿನ ಚಿತ್ರ ಯೋಜನೆಗಳು ಏನು?
ಗಣೇಶ್ ಅವರ ಜೊತೆ ಮತ್ತೊಂದು ಚಿತ್ರಕ್ಕೆ ಮಾತುಕತೆ ನಡೆಯುತ್ತಿದೆ. ಚಿತ್ರಕಥೆಯ ಮೇಲೆ ಕೆಲಸ ನಡೆಯುತ್ತಿದ್ದು ಅಂತಿಮವಾಗಿಲ್ಲ. ಈ ಸಿನಿಮಾ ಬಿಡುಗಡೆ ನಂತರ ಮುಂದಿನ ಯೋಜನೆ. ಜನರು ‘ದಿಲ್ ರಂಗೀಲಾ’ವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಿ ಮುಂದಿನ ಹೆಜ್ಜೆ. ಹಲವು ಕಥೆಗಳು ತಲೆಯಲ್ಲಿವೆ. ನಾನೇ ಬರೆದ ಕಥೆಗಳನ್ನು ತಿಂಗಳ ನಂತರ ನೋಡಿದರೆ ಹಳತು ಎನಿಸುತ್ತದೆ. ಆದ್ದರಿಂದ ಆ ಕ್ಷಣದ ಟ್ರೆಂಡ್ಗೆ ಚಿತ್ರ ಮಾಡುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.