ಸೋಮವಾರ, ಜೂನ್ 21, 2021
27 °C

₨ 2.30 ಲಕ್ಷ ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₨2.30 ಲಕ್ಷ ನಗದನ್ನು ತಾಲ್ಲೂ­ಕಿನ ಅಗಡಿ ಚೆಕ್‌­ಪೋಸ್ಟ್‌ ಬಳಿ ಗ್ರಾಮೀಣ ಠಾಣೆ ಪೊಲೀಸರು ಶನಿ­ವಾರ ವಶಪಡಿಸಿ­ಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.ಶಿರಸಿಯ ಸೋಮಾಪುರ ಗುಡ್ಡ  ನಿವಾಸಿ ಕೃಷ್ಣ ಕೊರವರ ಹಾಗೂ ಮಂಜು­ನಾಥ ಪಿಳ್ಳೈ ಬಂಧಿತರು, ಬೆಳಿಗ್ಗೆ 9 ಸುಮಾರಿಗೆ ಅಧಿಕಾರಿಗಳು ವಾಹನ ತಪಾ­ಸಣೆಯಲ್ಲಿ ತೊಡಗಿದ್ದ ಸಂದರ್ಭ ಕಾರಿನಲ್ಲಿ ಹಣ ಪತ್ತೆಯಾಗಿದೆ.‘ಗ್ರಾನೈಟ್‌ ಕಲ್ಲು ತರಲು ಶಿರಸಿ­ಯಿಂದ ಇಳಕಲ್‌ಗೆ ಹಣವನ್ನು ಒಯ್ಯು­ತ್ತಿ­ದ್ದು­ದಾಗಿ ಬಂಧಿತರಿಬ್ಬರು ತಿಳಿಸಿ­ದ್ದಾರೆ. ಅವರು ಸಮರ್ಪಕ ದಾಖಲೆ­ಗಳನ್ನು ಒದಗಿಸದ ಕಾರಣ ಹಣವನ್ನು ವಶ­ಪಡಿಸಿ­ಕೊಳ್ಳಲಾಗಿದೆ’ ಎಂದು ಎಸ್‌ಎಸ್‌ಟಿ ಮ್ಯಾಜಿಸ್ಟ್ರೇಟ್ ಬಸವ­ರಾಜ ಕುಸುಗಲ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.