ಸೋಮವಾರ, ಮೇ 17, 2021
27 °C

100 ಕನ್ನಡ ಮಕ್ಕಳ ನಾಟಕಗಳ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಶಾಲೆಗಳಲ್ಲಿ ಕನ್ನಡ ನಾಟಕ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಕನ್ನಡದಿಂದ ದೂರವಾಗುತ್ತಿರುವ ಮಕ್ಕಳನ್ನು ಸೆಳೆಯಲು ಮುಂದಾಗಬೇಕು~ ಎಂದು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸಲಹೆ ನೀಡಿದರು.



ಕರ್ನಾಟಕ ನಾಟಕ ಅಕಾಡೆಮಿಯು ಭಾಗ್ಯಲಕ್ಷ್ಮೀ ಪ್ರಕಾಶನ ಹಾಗೂ ಕಲಾಗಂಗೋತ್ರಿ ಸಂಸ್ಥೆಯ ಸಹಯೋಗದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 100 ಮಕ್ಕಳ ನಾಟಕ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.



`ಮಕ್ಕಳು ಇಂದು ಕನ್ನಡ ಬಳಕೆಯಿಂದ ದೂರ ಸರಿಯುತ್ತಿದ್ದಾರೆ. ಹಾಗಾಗಿ ಅವರು ಕನ್ನಡ ಬಳಸುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಕ್ರಾಂತಿಯಾಗಬೇಕು. ಕನ್ನಡದ ಹಾಡುಗಳು ಮತ್ತು ನಾಟಕದ ಮೂಲಕ ಮಕ್ಕಳನ್ನು ಸುಲಭವಾಗಿ ಸೆಳೆಯಬಹುದು. ಹಾಗಾಗಿ ಕವಿಗಳು ಹೆಚ್ಚು ಗೀತೆಗಳನ್ನು ರಚಿಸಬೇಕು.



ಪ್ರತಿ ಶಾಲೆಗಳಲ್ಲಿ ರಂಗ ತರಬೇತಿ ನೀಡುವ ಶಿಕ್ಷಕರಿರಬೇಕು. ರಾಜ್ಯದ ಎಲ್ಲ ಶಾಲೆಗಳಲ್ಲಿ ಈ ಮಕ್ಕಳ ನಾಟಕ ಕೃತಿಗಳ ಪ್ರದರ್ಶನ ಏರ್ಪಡಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಿಂತಿಸಬೇಕು~ ಎಂದು ಮನವಿ ಮಾಡಿದರು.



`50ರಿಂದ 70ರ ದಶಕದವರೆಗೆ ಮಕ್ಕಳ ಸಾಹಿತ್ಯ ರಚಿಸುವುದು ಅವಮಾನಕರ ಎಂಬ ಮನೋಭಾವ ಗಂಭೀರ ಸಾಹಿತಿಗಳಲ್ಲಿತ್ತು. ಹಾಗಾಗಿ ಮಕ್ಕಳ ಸಾಹಿತ್ಯ ರಚನೆಯಾಗಲೇ ಇಲ್ಲ. ಆನಂತರದ ದಶಕಗಳಲ್ಲಿ ಉತ್ತಮ ಸಾಹಿತ್ಯ ರಚನೆಯಾಯಿತು.



ಇಂದು 61 ಲೇಖಕರ 100 ಮಕ್ಕಳ ನಾಟಕ ಕೃತಿಗಳು ಬಿಡುಗಡೆಯಾಗುತ್ತಿರುವುದು ಶ್ಲಾಘನೀಯ ಕಾರ್ಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, `ಇತ್ತೀಚಿನ ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶಗಳು ತಮ್ಮ ಸಾಂಸ್ಕೃತಿಕ ಸೊಗಡು, ರಂಗಭೂಮಿ ವಾತಾವರಣವನ್ನು ಕಳೆದುಕೊಳ್ಳುತ್ತಿವೆ.



ಕನ್ನಡ ಸಾಹಿತ್ಯದಲ್ಲಿ ಜನಪ್ರಿಯ ನಾಟಕ ಕೃತಿಗಳ ಬಗ್ಗೆ ಸರಿಯಾದ ವಿಮರ್ಶೆ ನಡೆಯದಿದ್ದುದು ದುರದೃಷ್ಟಕರ. ಹಲವು ಜನಪ್ರಿಯ ನಾಟಕಗಳನ್ನು ವಿಮರ್ಶೆಯಿಂದ ದೂರವಿಡಲಾಗಿತ್ತು. ಆದರೆ ವಿಮರ್ಶಾ ಕ್ಷೇತ್ರ ನಿರ್ಲಕ್ಷ್ಯ ತೋರಿದರೂ ಹಲವು ನಾಟಕಗಳು ನಾಡಿನಾದ್ಯಂತ ಸಂಚಲನ ಸೃಷ್ಟಿಸಿದವು~ ಎಂದು ಹೇಳಿದರು.



`ಪರಿಷತ್ ವತಿಯಿಂದ ರಂಗಭೂಮಿಗೆ ಸಂಬಂಧಪಟ್ಟ ಡಿಪ್ಲೊಮಾ ಕೋರ್ಸ್‌ಅನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಹಾಗೆಯೇ ನಾಟಕ, ಕಿರುತೆರೆ, ಸಿನಿಮಾ ಜೊತೆಗೆ ಸಾಹಿತ್ಯದ ಸಂಬಂಧ ಕುರಿತಂತೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾವೇಶ ಏರ್ಪಡಿಸಲು ಚಿಂತಿಸಲಾಗಿದೆ~ ಎಂದು ನುಡಿದರು.



ಜೀವಂತ ಕಲೆಗಳಿಗೆ ಸಾವಿಲ್ಲ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, `ಜೀವಂತ ಕಲೆಗಳಿಗೆ ಎಂದಿಗೂ ಸಾವಿಲ್ಲ. ಶಾಲೆಗಳಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳ ಜತೆಗೆ ನಾಟಕ ಪ್ರದರ್ಶನಗಳೂ ನಡೆಯಬೇಕಿದೆ. ಆ ಹಿನ್ನೆಲೆಯಲ್ಲಿ ಪ್ರಾಧಿಕಾರದ ವತಿಯಿಂದ ನಡೆಸಲಾಗುವ ಕನ್ನಡ ಜಾಗೃತಿ ಜಾಥಾ ಕಾರ್ಯಕ್ರಮದಡಿ ಮುಂದಿನ ದಿನಗಳಲ್ಲಿ ಶಾಲೆಗಳಲ್ಲೂ ನಾಟಕ ಪ್ರದರ್ಶನ ಏರ್ಪಡಿಸಲಾಗುವುದು~ ಎಂದು ಭರವಸೆ ನೀಡಿದರು.



ಒಟ್ಟು 61 ಲೇಖಕರ 15 ಸಂಪುಟಗಳಲ್ಲಿ ಪ್ರಕಟವಾದ 100 ಮಕ್ಕಳ ನಾಟಕ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ರಾಜಾರಾಂ ಉಪಸ್ಥಿತರಿದ್ದರು.

`ಶಾಲೆಗಳಲ್ಲಿ ಕನ್ನಡ ನಾಟಕ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಕನ್ನಡದಿಂದ ದೂರವಾಗುತ್ತಿರುವ ಮಕ್ಕಳನ್ನು ಸೆಳೆಯಲು ಮುಂದಾಗಬೇಕು~ ಎಂದು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸಲಹೆ ನೀಡಿದರು.



ಕರ್ನಾಟಕ ನಾಟಕ ಅಕಾಡೆಮಿಯು ಭಾಗ್ಯಲಕ್ಷ್ಮೀ ಪ್ರಕಾಶನ ಹಾಗೂ ಕಲಾಗಂಗೋತ್ರಿ ಸಂಸ್ಥೆಯ ಸಹಯೋಗದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 100 ಮಕ್ಕಳ ನಾಟಕ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.



`ಮಕ್ಕಳು ಇಂದು ಕನ್ನಡ ಬಳಕೆಯಿಂದ ದೂರ ಸರಿಯುತ್ತಿದ್ದಾರೆ. ಹಾಗಾಗಿ ಅವರು ಕನ್ನಡ ಬಳಸುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಕ್ರಾಂತಿಯಾಗಬೇಕು. ಕನ್ನಡದ ಹಾಡುಗಳು ಮತ್ತು ನಾಟಕದ ಮೂಲಕ ಮಕ್ಕಳನ್ನು ಸುಲಭವಾಗಿ ಸೆಳೆಯಬಹುದು. ಹಾಗಾಗಿ ಕವಿಗಳು ಹೆಚ್ಚು ಗೀತೆಗಳನ್ನು ರಚಿಸಬೇಕು.



ಪ್ರತಿ ಶಾಲೆಗಳಲ್ಲಿ ರಂಗ ತರಬೇತಿ ನೀಡುವ ಶಿಕ್ಷಕರಿರಬೇಕು. ರಾಜ್ಯದ ಎಲ್ಲ ಶಾಲೆಗಳಲ್ಲಿ ಈ ಮಕ್ಕಳ ನಾಟಕ ಕೃತಿಗಳ ಪ್ರದರ್ಶನ ಏರ್ಪಡಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಿಂತಿಸಬೇಕು~ ಎಂದು ಮನವಿ ಮಾಡಿದರು.



`50ರಿಂದ 70ರ ದಶಕದವರೆಗೆ ಮಕ್ಕಳ ಸಾಹಿತ್ಯ ರಚಿಸುವುದು ಅವಮಾನಕರ ಎಂಬ ಮನೋಭಾವ ಗಂಭೀರ ಸಾಹಿತಿಗಳಲ್ಲಿತ್ತು. ಹಾಗಾಗಿ ಮಕ್ಕಳ ಸಾಹಿತ್ಯ ರಚನೆಯಾಗಲೇ ಇಲ್ಲ. ಆನಂತರದ ದಶಕಗಳಲ್ಲಿ ಉತ್ತಮ ಸಾಹಿತ್ಯ ರಚನೆಯಾಯಿತು. ಇಂದು 61 ಲೇಖಕರ 100 ಮಕ್ಕಳ ನಾಟಕ ಕೃತಿಗಳು ಬಿಡುಗಡೆಯಾಗುತ್ತಿರುವುದು ಶ್ಲಾಘನೀಯ ಕಾರ್ಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, `ಇತ್ತೀಚಿನ ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶಗಳು ತಮ್ಮ ಸಾಂಸ್ಕೃತಿಕ ಸೊಗಡು, ರಂಗಭೂಮಿ ವಾತಾವರಣವನ್ನು ಕಳೆದುಕೊಳ್ಳುತ್ತಿವೆ. ಕನ್ನಡ ಸಾಹಿತ್ಯದಲ್ಲಿ ಜನಪ್ರಿಯ ನಾಟಕ ಕೃತಿಗಳ ಬಗ್ಗೆ ಸರಿಯಾದ ವಿಮರ್ಶೆ ನಡೆಯದಿದ್ದುದು ದುರದೃಷ್ಟಕರ.



ಹಲವು ಜನಪ್ರಿಯ ನಾಟಕಗಳನ್ನು ವಿಮರ್ಶೆಯಿಂದ ದೂರವಿಡಲಾಗಿತ್ತು. ಆದರೆ ವಿಮರ್ಶಾ ಕ್ಷೇತ್ರ ನಿರ್ಲಕ್ಷ್ಯ ತೋರಿದರೂ ಹಲವು ನಾಟಕಗಳು ನಾಡಿನಾದ್ಯಂತ ಸಂಚಲನ ಸೃಷ್ಟಿಸಿದವು~ ಎಂದು ಹೇಳಿದರು.

`ಪರಿಷತ್ ವತಿಯಿಂದ ರಂಗಭೂಮಿಗೆ ಸಂಬಂಧಪಟ್ಟ ಡಿಪ್ಲೊಮಾ ಕೋರ್ಸ್‌ಅನ್ನು ಸದ್ಯದಲ್ಲೇ ಆರಂಭಿಸಲಾಗುವುದು.



ಹಾಗೆಯೇ ನಾಟಕ, ಕಿರುತೆರೆ, ಸಿನಿಮಾ ಜೊತೆಗೆ ಸಾಹಿತ್ಯದ ಸಂಬಂಧ ಕುರಿತಂತೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾವೇಶ ಏರ್ಪಡಿಸಲು ಚಿಂತಿಸಲಾಗಿದೆ~ ಎಂದು ನುಡಿದರು.ಜೀವಂತ ಕಲೆಗಳಿಗೆ ಸಾವಿಲ್ಲ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, `ಜೀವಂತ ಕಲೆಗಳಿಗೆ ಎಂದಿಗೂ ಸಾವಿಲ್ಲ. ಶಾಲೆಗಳಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳ ಜತೆಗೆ ನಾಟಕ ಪ್ರದರ್ಶನಗಳೂ ನಡೆಯಬೇಕಿದೆ.



ಆ ಹಿನ್ನೆಲೆಯಲ್ಲಿ ಪ್ರಾಧಿಕಾರದ ವತಿಯಿಂದ ನಡೆಸಲಾಗುವ ಕನ್ನಡ ಜಾಗೃತಿ ಜಾಥಾ ಕಾರ್ಯಕ್ರಮದಡಿ ಮುಂದಿನ ದಿನಗಳಲ್ಲಿ ಶಾಲೆಗಳಲ್ಲೂ ನಾಟಕ ಪ್ರದರ್ಶನ ಏರ್ಪಡಿಸಲಾಗುವುದು~ ಎಂದು ಭರವಸೆ ನೀಡಿದರು.ಒಟ್ಟು 61 ಲೇಖಕರ 15 ಸಂಪುಟಗಳಲ್ಲಿ ಪ್ರಕಟವಾದ 100 ಮಕ್ಕಳ ನಾಟಕ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ರಾಜಾರಾಂ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.