ಶನಿವಾರ, ಜೂನ್ 12, 2021
28 °C

12ರಿಂದ ಪಿಯು ಪರೀಕ್ಷೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದ್ವಿತೀಯ ಪಿ.ಯು ಪರೀಕ್ಷೆ ಇದೇ 12ರಿಂದ 27ರವರೆಗೆ ನಡೆಯ­ಲಿದ್ದು, ಜಿಲ್ಲೆಯ 9452 ವಿದ್ಯಾರ್ಥಿ­ಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.



4800 ಬಾಲಕರು ಹಾಗೂ 4652 ಬಾಲಕಿಯರು ಪರೀಕ್ಷೆ ಎದುರಿಸು­ತ್ತಿ­ದ್ದಾರೆ. ಇವರಲ್ಲಿ 7478  ಹೊಸ ವಿದ್ಯಾರ್ಥಿಗಳಾಗಿದ್ದಾರೆ.1395 ಪುನ ರಾವರ್ತಿತ ಹಾಗೂ 579 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.



ಕಲಾ ವಿಭಾಗದ 4220, ವಾಣಿಜ್ಯ ವಿಭಾಗದ 3349 ಹಾಗೂ ವಿಜ್ಞಾನ ವಿಭಾಗದ 1883 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.



ಜಿಲ್ಲೆಯಲ್ಲಿ ಮುಕ್ತ ಮತ್ತು ಪಾರ­ದರ್ಶಕ­ವಾಗಿ ಪರೀಕ್ಷೆ ನಡೆಸಲು ಜಿಲ್ಲಾ­ಡಳಿತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಗತ್ಯ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.



ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರ­ಗಳಿದ್ದು, ಯಾವುದೇ ಪರೀಕ್ಷಾ ಅಕ್ರಮ ತಡೆಗಟ್ಟಲು ಪ್ರತಿಯೊಂದು ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಸೆಕ್ಷನ್‌ 144ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರ­ಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ­ಗಳನ್ನು ಮುಚ್ಚಲೂ  ಜಿಲ್ಲಾ­ಧಿಕಾರಿ ಆದೇಶಿಸಿದ್ದಾರೆ.ಜಿಲ್ಲೆಯಲ್ಲಿ ಎಲ್ಲಿಯೂ ಸೂಕ್ಷ್ಮ, ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇಲ್ಲ ಎಂದು ಪ್ರಕಟಣೆ ಹೇಳಿದೆ. ಎಲ್ಲಾ 13 ಪರೀಕ್ಷಾ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದ್ದು, ಪ್ರತಿ ಕೇಂದ್ರಕ್ಕೂ ಆರೋಗ್ಯ ಸಹಾಯಕಿ­ಯರನ್ನು ನೇಮಿಸಲಾಗಿದೆ.



ಜಾಗೃತದಳ: ಪ್ರತಿ ತಾಲ್ಲೂಕಿನಲ್ಲಿ ಕಾರ್ಯ ನಿರ್ವ ಹಣಾಧಿಕಾರಿ ನೇತೃತ್ವ ದಲ್ಲಿ ಜಾಗೃತ­­­ ದಳ ರಚಿಸಲಾಗಿದೆ. ಪಿಯು ಇಲಾಖೆ  ಪ್ರತಿ ತಾಲ್ಲೂಕಿಗೆ ಒಂದು ಜಾಗೃತ ದಳವನ್ನು ಹಿರಿಯ ಪ್ರಾಚಾರ್ಯರ ನೇತೃತ್ವದಲ್ಲಿ ನೇಮಿ ಸಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ‘ಸಿಟ್ಟಿಂಗ್ ಸ್ಕ್ವಾಡ್‌’ ನೇಮಿಸ­­ಲಾಗಿದೆ. ಇವರು ಬೇರೆ ಜಿಲ್ಲೆ­ಯ­ವ­ರಾಗಿರು ತ್ತಾರೆ. ಪಿಯು ಶಿಕ್ಷಣ ಇಲಾಖೆಯ ಉಪ­ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಇದು  ಕಾರ್ಯ ನಿರ್ವಹಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.