ಭಾನುವಾರ, ಜನವರಿ 19, 2020
23 °C
ನಿರಾಶ್ರಿತ ಟಿಬೆಟನ್ನರ ಶಿಬಿರ

13 ಎಚ್‌ಐವಿ ಸೋಂಕು ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮಶಾಲಾ (ಐಎಎನ್‌ಎಸ್‌): ಭಾರತದಲ್ಲಿರುವ ನಿರಾಶ್ರಿತ ಟಿಬೆಟನ್ನರ ಪುನರ್ವಸತಿ ಶಿಬಿರಗಳಲ್ಲಿ 13 ಎಚ್‌ಐವಿ ಸೋಂಕು ಪ್ರಕರಣಗಳು ಕಳೆದ ವರ್ಷ ಪತ್ತೆಯಾಗಿವೆ ಎಂದು ದೇಶಾಂತರ ಟಿಬೆಟನ್ನರ ಸರ್ಕಾರದ  ಆರೋಗ್ಯ ಸಚಿವ ಟ್ಸೆರಿಂಗ್‌ ವಾಂಗ್ಚು ಅವರು ಭಾನುವಾರ ತಿಳಿಸಿದ್ದಾರೆ.‘ವಿಶ್ವ ಏಡ್ಸ್‌’ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇನ್ನೂ ಹೆಚ್ಚು ಟಿಬೆಟನ್ನರು ಎಚ್‌ಐವಿ ಸೋಂಕಿಗೆ ಗುರಿಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ‘ಸಮುದಾಯದವರಲ್ಲಿ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಶಿಕ್ಷಣ ನೀಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದರೂ ಎಚ್‌ಐವಿ ಪ್ರಕರಣಗಳು ವೃದ್ಧಿಸುತ್ತಿರುವುದು ಕಳವಳಕಾರಿ ಬೆಳವಣಿಗೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)