ಬುಧವಾರ, ಜೂನ್ 23, 2021
29 °C

1.56ಲಕ್ಷ ರೂ ಮೌಲ್ಯದ ಅಕ್ರಮ ಅಫೀಮು ವಶ; ಒಬ್ಬನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಂಟೂರ ಗ್ರಾಮದ ತೋಟದಲ್ಲಿ ಅಕ್ರಮವಾಗಿ ಬೆಳೆದಿದ್ದ 1.56 ಲಕ್ಷ ರೂಪಾಯಿ ಮೌಲ್ಯದ ಅಫೀಮು ಬೆಳೆಯನ್ನು ಭಾನುವಾರ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.ಮಂಟೂರ ಗ್ರಾಮದ ಮಗೆಪ್ಪಗೌಡ ಪಾಟೀಲ ಎಂಬಾತ ತನ್ನ ತೋಟದಲ್ಲಿ ಉಳ್ಳಾಗಡ್ಡಿ ಜೊತೆಗೆ ಬೆಳೆದಿದ್ದ 460 ಅಕ್ರಮ ಅಫೀಮು ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ತಹಶೀಲ್ದಾರ ಬಿ.ಡಿ.ಗುಗ್ಗರಟ್ಟಿ, ಸಿಪಿಐ ಶ್ರೀಪಾದ ಜಲ್ದೆ, ಪಿಎಸ್‌ಐ ಅರುಣ ಮುರ ಗುಂಡಿ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.