ಭಾನುವಾರ, ಜನವರಿ 26, 2020
31 °C
ಆಮ್‌ ಆದ್ಮಿಅಪಕ್ವತೆ ಬಹಿರಂಗ

18 ಅಂಶಗಳ ಪತ್ರಕ್ಕೆ ಕಾಂಗ್ರೆಸ್‌ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಆಮ್‌ ಆದ್ಮಿ ಪಕ್ಷ ಬರೆದಿರುವ 18 ಅಂಶಗಳ ಪತ್ರಕ್ಕೆ ಕಾಂಗ್ರೆಸ್‌ ಉತ್ತರ ನೀಡಿದೆ. 18ರಲ್ಲಿ 16 ಅಂಶಗಳಿಗೆ ಶಾಸನಾತ್ಮಕ ಬೆಂಬಲದ ಅಗತ್ಯ ಇಲ್ಲ ಎಂದು ಕಾಂಗ್ರೆಸ್‌ ಹೇಳಿದೆ.ಆಮ್‌ ಆದ್ಮಿ ಪಕ್ಷ ಬರೆದಿರುವ ಪತ್ರವು ಆ ಪಕ್ಷದ ರಾಜಕೀಯ ಅಪಕ್ವತೆಯನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ಶಕೀಲ್‌ ಅಹ್ಮದ್‌ ಹೇಳಿದ್ದಾರೆ.18ರಲ್ಲಿ 16 ಅಂಶಗಳು ಆಡಳಿತಾ­ತ್ಮಕ ವಿಷಯಗಳು. ಯಾವುದೇ ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿದೆ. ಸರ್ಕಾರ ರಚನೆ­ಯಾದ ನಂತರ ಈ ಅಂಶಗಳ ಜಾರಿಗೆ ಶಾಸನ ಸಭೆಯ ಒಪ್ಪಿಗೆ ಕೂಡ ಅಗತ್ಯವಿಲ್ಲ ಎಂದು ಆಮ್‌ ಆದ್ಮಿ ಪಕ್ಷಕ್ಕೆ ಬರೆದ ಪತ್ರದಲ್ಲಿ ಶಕೀಲ್‌ ಅಹ್ಮದ್‌ ವಿವರಿಸಿದ್ದಾರೆ.ಉಳಿದ ಎರಡು ಅಂಶಗಳಾದ ಜನ ಲೋಕಪಾಲ ಮಸೂದೆ ಮತ್ತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ದೆಹಲಿ ಸರ್ಕಾ­ರದ ವ್ಯಾಪ್ತಿಯಿಂದ ಹೊರಗಿನ ವಿಚಾ­ರ ಎಂದು ಕಾಂಗ್ರೆಸ್‌ ಹೇಳಿದೆ.ಮುಂದಿನ 48 ಗಂಟೆಗಳೊಳಗೆ ಸಭೆ ಸೇರಿ ಕಾಂಗ್ರೆಸ್‌ ಉತ್ತರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಮನೀಶ್‌ ಸಿಸೋಡಿಯ ತಿಳಿಸಿದ್ದಾರೆ.ನಮಗೆ ಸರ್ಕಾರ ರಚಿಸುವ ಬಯಕೆ ಇದೆ. ಆದರೆ ಅದಕ್ಕಾಗಿ ನಾವು ಯಾವುದೇ ಪಕ್ಷದೊಂದಿಗೆ ತೆರೆ­ಮರೆಯ  ಮಾತುಕತೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)