ಹೊಸಕೋಟೆ: `ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಅನುವು ಮಾಡಿಕೊಡುವ ಸಲುವಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ತಾಲ್ಲೂಕಿನ 19 ಶಾಲೆಗಳಿಗೆ ಕಂಪ್ಯೂಟರ್ಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ಶಾಲೆಗಳಿಗೂ ಕಂಪ್ಯೂಟರ್ ನೀಡಲಾಗುವುದು~ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಆರ್.ಮಲ್ಲೇಶ್ ತಿಳಿಸಿದರು.

ಹೊಸಕೋಟೆಯ ಕೆಜಿಕೆಎಂಎಸ್ ಶಾಲೆಯ ಗ್ರಂಥಾಲಯವನ್ನು ಉದ್ಘಾಟಿಸಿ, `ಯೋಜನೆಯಡಿ ತಾಲ್ಲೂಕಿನ 246 ಶಾಲೆಗಳಲ್ಲಿನ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ತಲಾ ರೂ 3 ಸಾವಿರ ನೀಡಲಾಗಿದೆ. ಶಿಕ್ಷಣ ಫೌಂಡೇಶನ್ 23 ಶಾಲೆಗಳಿಗೆ ತಲಾ 9 ಸಾವಿರ ರೂ. ಕೊಡುಗೆ ನೀಡಿದೆ~ ಎಂದರು.

ಶಿಕ್ಷಣ ಫೌಂಡೇಶನ್ ಸಂಯೋಜಕ ಕೆ.ಎಸ್.ವಿಶ್ವನಾಥ್ ಮಾತನಾಡಿ, `ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಸಲುವಾಗಿ ತಾಲ್ಲೂಕಿನ 104 ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಶಿಕ್ಷಣ ಫೌಂಡೇಷನ್ ಈ ವರೆಗೆ 98 ಶಾಲೆಗಳಿಗೆ ಲ್ಯಾಪ್ಟಾಪ್ಗಳನ್ನು ನೀಡಿದೆ~ ಎಂದರು. ಮುಖ್ಯ ಶಿಕ್ಷಕ ಕೆ.ರಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಯ್ಯ ಇದ್ದರು.

ಕೊಡುಗೆ: ಡಾ.ಶಿವಕುಮಾರಸ್ವಾಮಿಗಳ 105 ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಮುಖಂಡ ಬಿ.ವಿ.ಬೈರೇಗೌಡ ಮತ್ತು ವಿ.ವಿಜಯಕುಮಾರ್ ಮಠದಲ್ಲಿನ ಅನ್ನದಾಸೋಹಕ್ಕೆ 4 ಟನ್ ಅಕ್ಕಿ ಹಾಗೂ ಬೆಲ್ಲವನ್ನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.